ಶನಿವಾರಸಂತೆ, ಮಾ. ೬: ದಲಿತ ಸಂಘಟನೆಗಳು ಮತ್ತು ಮಹಿಳಾ ಸ್ವಸಹಾಯ ಸಂಘಗಳು ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ನಾಡಕಚೇರಿಯ ಮುಂಭಾಗ ಪ್ರತಿಭಟಿಸಿದರು.

ಜಿಲ್ಲಾ ಸಂಚಾಲಕ ಡಿ.ಜೆ. ಈರಪ್ಪ, ಜಿಲ್ಲಾ ದಲಿತ ಸಂಯೋಜಕ ಜೆ.ಆರ್. ಪಾಲಾಕ್ಷ, ದಲಿತ ಸಂಘಟನಾ ಸಮಿತಿಯ ಟಿ.ಇ. ಸುರೇಶ್, ದಲಿತ ಸಂಘಟನಾ ಸಮಿತಿಯ ಅಧ್ಯಕ್ಷೆ ವಿಮಲಾ ಅವರುಗಳು ಮಾತನಾಡಿ ಜನಪರ ಹಾಗೂ ಪ್ರಜಾಸತ್ತಾತ್ಮಕವಾದ ಭೂಸುಧಾರಣಾ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದು ರೈತ ಕೃಷಿ ಕಾರ್ಮಿಕರ ಆಶಯಗಳನ್ನೇ ನಾಶ ಮಾಡಲು ಹೊರಟಿರುವ ಕೇಂದ್ರ ಸರಕಾರದ ನೀತಿಯನ್ನು ಖಂಡಿಸಿದರು.

ಜನಸಾಮಾನ್ಯರ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಹಾಗೂ ಪಡಿತರ ಪದಾರ್ಥಗಳನ್ನು ಕಡಿತಗೊಳಿಸು ತ್ತಿರುವುದನ್ನು ನಿಲ್ಲಿಸಬೇಕು. ದಲಿತ ವಿದ್ಯಾರ್ಥಿ ವೇತನವನ್ನು ಕಡಿತ ಮಾಡುತ್ತಿರು ವುದನ್ನು ಖಂಡಿಸುತ್ತೇವೆ ಹಾಗೂ ಕೇಂದ್ರ ಹಾಗೂ ರಾಜ್ಯ ಸರಕಾರದ ಜನವಿರೋಧಿ ನೀತಿಯನ್ನು ಕೈಬಿಡಬೇಕೆಂದು ಒತ್ತಾಯಿಸಿದರು.

ನಂತರ ನಾಡಕಚೇರಿಯ ಉಪತಹಶೀಲ್ದಾರ್ ಮಧುಸೂದನ್ ಅವರ ಮೂಲಕ ರಾಜ್ಯ ಪಾಲರಿಗೆ ಮನವಿ ಪತ್ರ ಸಲ್ಲಿಸದರು. ಈ ಸಂದರ್ಭ ದಲಿತ ಸಮಿತಿಯ ಪ್ರಮುಖರಾದ ಶಿವಲಿಂಗ, ಕುಮಾರ್, ಜನಾರ್ಧನ, ಸಂದೀಪ, ಪುಟ್ಟಸ್ವಾಮಿ, ಮೋಹನ್ ದಾಸ್, ಮಹಿಳಾ ಸ್ವಸಹಾಯ ಸಂಘದ ಮಹಿಳೆಯರು ಪಾಲ್ಗೊಂಡಿದ್ದರು. ಜೆ.ಆರ್. ಪಾಲಾಕ್ಷ ಸ್ವಾಗತಿಸಿ, ಟಿ.ಇ. ಸುರೇಶ್ ವಂದಿಸಿದರು