ಮಡಿಕೇರಿ, ಮಾ. ೬: ಬಲಿಷ್ಟ, ಸದೃಢ ಸಮಾಜ ಸೃಷ್ಟಿಯಾಗಬೇಕಾದರೆ ಮೊದಲು ಆರೋಗ್ಯವಂತ ಸಮಾಜ ನಿರ್ಮಾಣವಾಗಬೇಕು. ಈ ನಿಟ್ಟಿನಲ್ಲಿ ಜನೌಷಧಿ ಯೋಜನೆ ಸಹಕಾರಿ ಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯೆ, ರಾಜ್ಯ ಬಿ.ಜೆ.ಪಿ. ವಕ್ತಾರರಾದ ತೇಜಸ್ವಿನಿ ರಮೇಶ್ ತಿಳಿಸಿದರು.

ನಗರದ ಕಾವೇರಿ ಕಲಾಕ್ಷೇತ್ರ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಜನೌಷಧಿ ಕೇಂದ್ರ ಮಾಲೀಕರ ಒಕ್ಕೂಟದ ವತಿಯಿಂದ ನಡೆದ ಜನೌಷಧಿ ದಿನಾಚರಣೆ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿ ದರು.

ವೈದ್ಯಕೀಯ ಸೇವೆ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವುದು ಸವಾಲಿನ ಕೆಲಸ. ವೈದ್ಯಕೀಯ ಕ್ಷೇತ್ರ ಕೇವಲ ಹಣ ಮಾಡುವುದಲ್ಲ. ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುವ ಮನಸ್ಸಿರಬೇಕು. ಕೊರೊನಾ ಪರಿಸ್ಥಿತಿಯಲ್ಲಿ ತನ್ನ ಪ್ರಾಣ ಪಣಕಿಟ್ಟು ವೈದ್ಯರು ಮಾಡಿರುವ ಸೇವೆ ನಿಜಕ್ಕೂ ಶ್ಲಾಘನೀಯ. ಪ್ರಧಾನಿ ನರೇಂದ್ರ ಮೋದಿ ಅವರು ಶ್ರೇಷ್ಠ, ಸಮರ್ಥ, ಬಲಿಷÀ್ಟ ಹಾಗೂ ಆರೋಗ್ಯವಂತ ಭಾರತ ನಿರ್ಮಿಸುವ ಕನಸನ್ನು ಹೊತ್ತಿದ್ದಾರೆ. ಆದರೆ, ಜನೌಷಧಿ ಕಾರ್ಯಕ್ರಮದ ಬಗ್ಗೆ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ರಾಜ್ಯದಲ್ಲಿ ೭ ಸಾವಿರಕ್ಕೂ ಹೆಚ್ಚು ಜನೌಷಧಿ ಕೇಂದ್ರವಿದೆ. ಕೋವಿಡ್ ವ್ಯಾಕ್ಸಿನ್ ಬಗ್ಗೆ ಕೂಡ ಅಪಪ್ರಚಾರ ಆಗಿದೆ. ಬಡವರಿಗೆ ಮೀಸಲಿಟ್ಟ ಯೋಜನೆ ದುರ್ಬಳಕೆಯಾಗಬಾರದು. ದೊಡ್ಡ ಉದ್ದೇಶದಿಂದ ಜನೌಷಧಿ ಯೋಜನೆ ಜಾರಿಯಾಗಿದೆ. ಇದು ಸದ್ಬಳಕೆಯಾಗಬೇಕು. ಸರ್ಕಾರಿ ಆಸ್ಪತ್ರೆಗಳಿಗೆ ಜನೌಷಧಿ ಕೇಂದ್ರದ ಔಷಧಿ ತಲುಪಬೇಕೆಂಬ ಸಲಹೆ ವ್ಯಕ್ತವಾಗಿದ್ದು, ಈ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.

ವೈದ್ಯಕೀಯ ಕ್ಷೇತ್ರಕ್ಕೆ ಬರುವವರು ದೇಶಪ್ರೇಮಿಗಳಾಗಿರಬೇಕು. ಬೇರೆ ರಾಷ್ಟçದಲ್ಲಿ ಭಾರತೀಯ ವೈದ್ಯಕೀಯ ಸಿಬ್ಬಂದಿಗಳು

(ಮೊದಲ ಪುಟದಿಂದ) ಕೆಲಸ ಮಾಡುತ್ತಿದ್ದಾರೆ. ಭಾರತ ಕೋವಿಡ್ ಲಸಿಕೆಯನ್ನು ಆವಿಷ್ಕರಿಸಿದೆ. ಆರೋಗ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದೆ. ನಾಗರಿಕತೆ ಸೃಷ್ಟಿಯಾದಂತೆ ವೈದ್ಯಕೀಯ ಕ್ಷೇತ್ರ ಬೆಳವಣಿಗೆ ಸಾಧಿಸುತ್ತಿದೆ ಎಂದರು.

ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ರೋಗಿ ಔಷಧಿಯಿಂದ ವಂಚಿತರಾಗಬಾರದು ಎಂಬ ದೃಷ್ಟಿಯಲ್ಲಿ ಕೇಂದ್ರ ಸರ್ಕಾರ ಯೋಜನೆ ತಂದಿದೆ. ಮಾಲೀಕರೇ ಜನೌಷಧಿ ಬಗ್ಗೆ ಮನೆ ಮನೆ ಪ್ರಚಾರ ಮಾಡಬೇಕು. ಯೋಜನೆ ಸದ್ಭಳಕೆಯಾಗಬೇಕು. ಕೆಲವು ವೈದ್ಯರು ಖಾಸಗಿ ಮೆಡಿಕಲ್ ಶಾಪ್‌ಗಳೊಡನೆ ಒಪ್ಪಂದ ಮಾಡಿಕೊಂಡಿರುವುದು ವಿಷಾದÀನೀಯ. ವೈದ್ಯರ ಮಟ್ಟದಲ್ಲಿ ಅಪಪ್ರಚಾರವಾಗುತ್ತಿರುವುದು ಆತಂಕಕಾರಿ ಎಂದರು.

ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ ಬೋಪಯ್ಯ ಮಾತನಾಡಿ, ಸ್ವಾಭಿಮಾನಿ, ಸ್ವಾವಲಂಬಿ ಬದುಕು ಕಟ್ಟಿಕೊಡುವುದು ಕೇಂದ್ರ ಸರ್ಕಾರದ ಗುರಿ ಇದೆ. ಆರ್ಥಿಕವಾಗಿ ಹಿಂದುಳಿದವರಿಗೆ ಜನೌಷಧಿ ಸಹಕಾರಿಯಾಗಿದೆ. ಜನೌಷಧಿ ಬಗ್ಗೆ ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ. ಔಷಧಿ ಗುಣಮಟ್ಟ ಉತ್ತಮವಾಗಿದೆ. ಇದರಲ್ಲಿ ಯಾವುದೇ ಸಂಶಯವಿಲ್ಲ. ಶೇ ೯೦ ಕಡಿಮೆ ದರದಲ್ಲಿ ಸಿಗುವ ಔಷಧಿ ಗುಣಮಟ್ಟ ಶೇ ೧೦೦ ರಷ್ಟು ಚೆನ್ನಾಗಿವೆ. ಇದು ವ್ಯಾಪಾರವಲ್ಲ, ಸಮಾಜಮುಖಿ ಕಾರ್ಯವಾಗಿದೆ. ಎಲ್ಲ ಕ್ಷೇತ್ರಕ್ಕೂ ಕೇಂದ್ರ ಸರ್ಕಾರ ಯೋಜನೆ ರೂಪಿಸಿವೆ. ಜನೌಷಧಿಗೆ ಪ್ರಚಾರದ ಅವಶ್ಯಕತೆ ಇದೆ. ಆರೋಗ್ಯವಾಗಿದ್ದಾರೆ ದೇಶದ ಅಭಿವೃದ್ಧಿಗೆ ಹೆಜ್ಜೆಯಾಗಿದೆ ಎಂದರು.

ಬಿಜೆಪಿ ಕೃಷಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ಹಾಗೂ ಮಕ್ಕಳ ತಜ್ಞ ಡಾ. ಬಿ.ಸಿ. ನವೀನ್ ಕುಮಾರ್ ಪ್ರಾಸ್ತವಿಕವಾಗಿ ಮಾತನಾಡಿ, ಸ್ವಾತಂತ್ರ‍್ಯ ಬಳಿಕ ಹಲವು ಯೋಜನೆ ಜಾರಿಯಾಗಿದೆ. ಕೆಲವು ಯಶಸ್ವಿಯಾದರೆ, ಕೆಲವು ವೈಫಲ್ಯ ಸಾಧಿಸಿದೆ. ಸರಕಾರಿ ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ಜನರ ಸಹಭಾಗಿತ್ವ ಬಹುಮುಖ್ಯವಾಗಿರುತ್ತದೆ. ಜನೌಷಧಿ ಯೋಜನೆಯಲ್ಲಿ ಮಾರ್ಕೇಟಿಂಗ್, ಪ್ರಚಾರ, ಬ್ರಾö್ಯಂಡಿAಗ್, ಮಧ್ಯವರ್ತಿಗಳ ಹಾವಳಿ ಇರುವುದಿಲ್ಲ ಇದರಿಂದ ಕಡಿಮೆ ದರದಲ್ಲಿ ಔಷಧಿ ಸಿಗುತ್ತವೆ. ಔಷಧಿ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ. ಆಧುನಿಕ ಕಾಲದಲ್ಲಿ ತಾಂತ್ರಿಕತೆ ಬಳಸಿಕೊಂಡು ಔಷಧಿ ತಲುಪಿಸುವ ಕೆಲಸವಾಗಬೇಕು. ರಾಜ್ಯದಲ್ಲಿರುವ ೩೧ ಜಿಲ್ಲಾ ಆಸ್ಪತ್ರೆ ಸೇರಿದಂತೆ ಗ್ರಾಮೀಣ ಆಸ್ಪತ್ರೆಯಲ್ಲಿ ಜನೌಷಧಿ ವಿತರಣೆಯಾದರೆ ಬಡವರಿಗೆ ಅಗತ್ಯ ಔಷಧಿ ದೊರಕುತ್ತದೆ ಎಂದು ಹೇಳಿದರು.

ಹಿರಿಯ ವೈದ್ಯ ಡಾ. ಮನೋಹರ್ ಜಿ ಪಾಟ್ಕರ್ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ನಗರದ ಚೌಡೇಶ್ವರಿ ದೇವಾಲಯದಿಂದ ಜನರಲ್ ತಿಮ್ಮಯ್ಯ ವೃತ್ತದ ತನಕ ಮೆರವಣಿಗೆ ನಡೆಸಲಾಯಿತು.

ಜನೌಷಧಿ ಸಾಧಕ ಬಾಧಕ ವಿಷಯದ ಬಗ್ಗೆ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ರಕ್ಷಿತಾ ಬಿ.ಶೆಟ್ಟಿ, ದ್ವಿತೀಯ ಸ್ಥಾನ ಪಡೆದ ದಿಕ್ಷಿತಾ ಪಿ.ಟಿ., ತೃತೀಯ ಸ್ಥಾನ ಗಳಿಸಿದ ಕೃತಿ ಅವರಿಗೆ ಈ ಸಂದರ್ಭ ಬಹುಮಾನ ವಿತರಿಸಲಾಯಿತು.

ಮೆಡಿಕಲ್ ಕಾಲೇಜು ಪ್ರಾಂಶುಪಾಲ ವಿಶಾಲ್ ಕಾರ್ಯಪ್ಪ ಇದ್ದರು.