ವೀರಾಜಪೇಟೆ, ಮಾ. ೬: ಅಕ್ರಮವಾಗಿ ಗೋಮಾಂಸವನ್ನು ಹೊರ ಪ್ರದೇಶದಿಂದ ತಂದು ಮಾರಾಟ ಮಾಡುತಿದ್ದ ನಗರದ ವ್ಯಕ್ಯಿಯೊಬ್ಬ ಬಂಧನವಾದ ಘಟನೆ ವೀರಾಜಪೇಟೆ ನಗರದಲ್ಲಿ ನಡೆದಿದೆ.ವೀರಾಜಪೇಟೆ ನಗರದ ಸುಣ್ಣದ ಬೀದಿ ನಿವಾಸಿ ಎಂ.ಎ. ಇದ್ರೀಸ್ (೫೦) ಅಕ್ರಮವಾಗಿ ಗೋಮಾಂಸ ಮಾರಾಟ ಮಾಡಿ ಬಂಧನವಾದ ವ್ಯಕ್ತಿ. ಸುಣ್ಣದ ಬೀದಿಯ ತನ್ನ ನಿವಾಸದಲ್ಲಿ ಗುಪ್ತವಾಗಿ ಗೋಮಾಂಸವನ್ನು ಮಾರಾಟ ಮಾಡುತಿದ್ದ ಎನ್ನಲಾಗಿದೆ. ಮೈಸೂರು ಜಿಲ್ಲೆಯ ಹುಣಸೂರುವಿನಿಂದ ಪ್ರತಿನಿತ್ಯ ಮಾಂಸ ಖರೀದಿಸಿ ನಗರದಲ್ಲಿ ತನ್ನ ಆಪ್ತರಿಗೆ ನೀಡುತ್ತಿದ್ದ. ನಗರ ಅಪರಾಧ ವಿಭಾಗದ ಠಾಣಾಧಿಕಾರಿ ಬೋಜಪ್ಪ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಇದ್ರೀಸ್ ಮನೆಯ ಮೇಲೆ ದಾಳಿ ನಡೆಸಿದ ಪೊಲೀಸರು ಮನೆಯ ಕೋಣೆಯೊಂದರಲ್ಲಿ ಚೀಲದಲ್ಲಿ ಇರಿಸಲಾಗಿದ್ದ ೧೩ ಕೆ.ಜಿ. ಗೋಮಾಂಸವನ್ನು ಪತ್ತೆಹಚ್ಚಲಾಗಿದೆ.ಮಾರುಕಟ್ಟೆಯ ದರ ರೂ. ೩,೯೦೦ ಮೌಲ್ಯದಾಗಿದೆ ಎಂದು ಅಂದಾಜಿಸಲಾಗಿದೆ. ಗೋಮಾಂಸದೊAದಿಗೆ ರೂ. ೯೯೦ ನಗದು ವಶಕ್ಕೆ ಪಡೆದಿದ್ದಾರೆ.ಪ್ರಕರಣಕ್ಕೆ ಸಂಬAಧಿಸಿದAತೆ ವೀರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಆರೋಪಿತನ ಮೇಲೆ ಗೋ ಹತ್ಯೆ ಮತ್ತು ಮಾರಾಟ ನಿಷೇಧ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ, ೧೫ ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿಡುವAತೆ ನ್ಯಾಯಾಧೀಶರು ಆದೇಶಿಸಿದ್ದಾರೆ.

ವೀರಾಜಪೇಟೆ ಉಪ ವಿಭಾಗ ಡಿವೈಎಸ್ಪಿ ಸಿ.ಟಿ. ಜಯಕುಮಾರ್ ಅವರ ಮಾರ್ಗದರ್ಶನದಲ್ಲಿ ವೃತ್ತನಿರೀಕ್ಷಕ ಶ್ರೀಧರ್ ಅವರ ನಿರ್ದೇಶನದ ಮೇರೆಗೆ ವೀರಾಜಪೇಟೆ ಅಪರಾಧ ವಿಭಾಗದ ಉಪ ನಿರೀಕ್ಷಕ ಹೆಚ್.ಎಸ್. ಬೋಜಪ್ಪ, ಸಿಬ್ಬಂದಿಗಳಾದ ಗಿರೀಶ್, ಮುನೀರ್ ಮತ್ತು ಗೀತಾ, ಚಾಲಕ ಪೂವಯ್ಯ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

-ಕೆ.ಕೆ.ಎಸ್.