ಮಡಿಕೇರಿ, ಮಾ. ೫: ೬೦ ವರ್ಷ ಮೇಲ್ಪಟ್ಟವರಿಗೆ ಕೋವಿಡ್ ನಿರೋಧಕ ಲಸಿಕೆಯನ್ನು ದೇಶದಾದ್ಯಂತ ನೀಡುವ ಅಭಿಯಾನಕ್ಕೆ ತಾ. ೧ ರಂದು ಚಾಲನೆ ನೀಡಲಾಯಿತು. ೪೫ ವರ್ಷಗಳು ಮೇಲ್ಪಟ್ಟ ಅನಾರೋಗ್ಯ ವುಳ್ಳವರಿಗೂ ಲಸಿಕೆ ನೀಡುವ ಕಾರ್ಯ ಅಂದೇ ಪ್ರಾರಂಭವಾಗಿದ್ದು, ಕೆಲವು ತಾಂತ್ರಿಕ ಸಮಸ್ಯೆಗಳಿಂದಾಗಿ ನಿಧಾನಗತಿಯಲ್ಲಿ ನಡೆಯುತ್ತಿತ್ತು. ಇದೀಗ ಲಸಿಕೆ ಪಡೆಯಲು ವೆಬ್ಸೈಟ್ ಮೂಲಕ ನೋಂದಣಿ ಕಾರ್ಯ ಚುರುಕು ಗೊಂಡಿದ್ದು ಸೋಮವಾರದಿಂದ ಜಿಲ್ಲೆಯ ಎಲ್ಲಾ ಸಮುದಾಯ, ಪ್ರಾಥಮಿಕ ಆರೋಗ್ಯ ಕೇಂದ್ರ ಗಳಲ್ಲಿಯೂ ಲಸಿಕೆ ದೊರೆಯಲಿದೆ. ಛಿoತಿiಟಿ.gov.iಟಿ ವೆಬ್ಸೈಟ್ನಲ್ಲಿ ಲಾಗಿನ್ ಆಗಿ ಲಸಿಕೆ ಪಡೆಯಲು ನೋಂದಣಿ ಮಾಡಬಹುದಾಗಿದೆ.ಕಳೆದ ಸೋಮವಾರದಿಂದ ೬೦ ವರ್ಷ (ಮೊದಲ ಪುಟದಿಂದ) ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ. ಮಡಿಕೇರಿ ಜಿಲ್ಲಾಸ್ಪತ್ರೆ ಹಾಗೂ ವೀರಾಜಪೇಟೆ, ಸೋಮವಾರಪೇಟೆಯ ತಾಲೂಕು ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ತಾ. ೮ ರಿಂದ ಎಲ್ಲಾ ಪ್ರಾಥಮಿಕ ಕೇಂದ್ರಗಳಲ್ಲಿಯೂ ಲಸಿಕೆ ನೀಡಲು ಸರಕಾರದಿಂದ ಆದೇಶ ಬಂದಿದೆ. ಇದಕ್ಕೆ ಜಿಲ್ಲೆಯು ಸಿದ್ಧವಾಗಿದೆ. ಆನ್ಲೈನ್ ಮುಖಾಂತರ ಈಗಾಗಲೇ ೧೦ ಮಂದಿ ನೋಂದಣಿ ಮಾಡಿ ಲಸಿಕೆ ಪಡೆದಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಒಟ್ಟು ದಿನಕ್ಕೆ ೨೦೦ ಮಂದಿಗೆ ಲಸಿಕೆ ನೀಡಲಾಗುವುದು. ಈ ಪೈಕಿ ಒಟ್ಟು ೮೦ ಮಂದಿ ಆನ್ಲೈನ್ ಮುಖಾಂತರ ನೋಂದಣಿ ಮಾಡಿದವರು ಲಸಿಕೆ ಪಡೆಯಬಹುದು. ಉಳಿದಂತೆ ಆನ್ಲೈನ್ ವೆಬ್ಸೈಟ್ ಬಳಕೆಯಲ್ಲಿ ಪರಿಣತರಲ್ಲದವರು ನೇರವಾಗಿ ಆಸ್ಪತ್ರೆಗೆ ತಮ್ಮ ಆಧಾರ್ ಕಾರ್ಡ್ಅನ್ನು ತೆಗೆದುಕೊಂಡು ಹೋದರೆ, ಅಲ್ಲಿಯೇ ನೋಂದಣಿ ಮಾಡಿ ಲಸಿಕೆ ನೀಡಲಾಗುವುದು ಎಂದು ಜಿಲ್ಲೆಯ ಲಸಿಕಾ ಉಸ್ತುವಾರಿ ಅಧಿಕಾರಿಗಳಾದ ಡಾ. ಗೋಪಿನಾಥ್ ಅವರು ಮಾಹಿತಿ ನೀಡಿದ್ದಾರೆ.