ಮಡಿಕೇರಿ, ಮಾ. ೫: ಮಂಜಿನ ನಗರಿಯ ಹೃದಯ ಭಾಗದಲ್ಲಿರುವ ಗಣಪತಿ ಬೀದಿ ರಸ್ತೆ ಅಗಲೀಕರಣ ಕಾರ್ಯ ಶೀಘ್ರದಲ್ಲಿ ಆರಂಭಗೊಳ್ಳಲಿದೆ. ಈ ನಿಟ್ಟಿನಲ್ಲಿ ನಗರಸಭೆ ಪ್ರಕ್ರಿಯೆ ಕೂಡ ಚುರುಕುಗೊಳಿಸಿದೆ. ತೆರವುಗೊಳಿಸಲು ಬಾಕಿ ಇರುವ ಕಟ್ಟಡ ತೆರವು ಕಾರ್ಯಕ್ಕೆ ಕೆಲವೇ ದಿನದಲ್ಲಿ ಕ್ರಮಕೈಗೊಳ್ಳಲಾಗುತ್ತದೆ. ಸಂಚಾರ ದಟ್ಟಣೆ, ಪಾರ್ಕಿಂಗ್ ಸಮಸ್ಯೆ ಪರಿಹರಿಸುವ ಸಲುವಾಗಿ ನಗರೋತ್ಥಾನ ೩ನೇ ಹಂತದ ಮೂಲಕ ರೂ. ೧.೫೦ ಕೋಟಿ ವೆಚ್ಚದಲ್ಲಿ ೨೦೧೯ರಲ್ಲಿ ಗಣಪತಿ ಬೀದಿ ರಸ್ತೆ ಅಗಲೀಕರಣ ಯೋಜನೆ ಕೈಗೆತ್ತಿಕೊಳ್ಳಲಾಯಿತು. ಇದಕ್ಕಾಗಿ ೨೮.೨.೨೦೨೦ರಲ್ಲಿ ಗಣಪತಿ ಬೀದಿಯ ೨೦೧ ಕಟ್ಟಡಗಳನ್ನು ತೆರವು ಮಾಡುವ ನಿಟ್ಟಿನಲ್ಲಿ ನಗರಸಭೆ ನೋಟೀಸ್ ಕೂಡ ಜಾರಿ ಮಾಡಿತ್ತು. ಆದರೆ, ಮನೆ ತೆರವಿಗೆ ಆಕ್ಷೇಪ ವ್ಯಕ್ತಗೊಂಡ ಹಿನ್ನೆಲೆ ಹಾಗೂ ಕೊರೊನಾ ಪರಿಸ್ಥಿತಿಯಿಂದ ಯೋಜನೆ ಆರಂಭಿಸಲು ಸಾಧ್ಯವಾಗಿರಲಿಲ್ಲ. ಇದೀಗ ಪರಿಸ್ಥಿತಿ ಚೇತರಿಕೆಗೊಂಡಿರುವುದರಿAದ ಯೋಜನೆ ಕಾರ್ಯಗತಕ್ಕೆ ನಗರಸಭೆ ಚಿಂತಿಸಿದೆ. ಪೂರಕವಾಗಿ ಆಡಳಿತಾತ್ಮಕ ಪ್ರಕ್ರಿಯೆ ಕೂಡ ಗರಿಗೆದರಿವೆ. ಗಣಪತಿ ಬೀದಿಯ ರಸ್ತೆ ಅಗಲೀಕರಣ ಸಂಬAಧ ತೆರವಾಗಬೇಕಾದ ಕಟ್ಟಡÀ ಮಾಲೀಕರಿಗೆ ಈಗಾಗಲೇ ನಗರಸಭೆ ನಿರ್ದೇಶನ ನೀಡಿದೆ. ರಸ್ತೆ ಅಂಚಿನಿAದ ಎಲ್ಲಿಯ ತನಕ ಕಟ್ಟಡ ತೆರವು ಮಾಡಬೇಕಾದ ಬಗ್ಗೆ ಗುರುತು ಕೂಡ ಮಾಡಲಾಗಿದೆ. ನಗರಸಭೆ ಈ ಸಂಬAಧ ಪ್ರಕಟಣೆಯನ್ನು ಹೊರಡಿಸುತ್ತಿದೆ.

(ಮೊದಲ ಪುಟದಿಂದ) ಇದರೊಂದಿಗೆ ನಿತ್ಯ ತೆರಳುವ ಕಸ ವಿಲೇವಾರಿ ವಾಹನದ ಧ್ವನಿ ವರ್ಧಕ (ಆಡಿಯೋ) ಬಳಸುವ ಮೂಲಕ ಕಟ್ಟಡ ತೆರವಿಗೆ ನಗರಸಭೆ ಮನವಿ ಮಾಡುತ್ತಿದೆ.

೨೦೧ ಕಟ್ಟಡ: ನಗರದ ಇಂದಿರಾಗಾAದಿ ವೃತ್ತ (ಚೌಕಿ) ಮೂಲಕ ಹಾದು ಹೋಗುವ ರಸ್ತೆ ಇದಾಗಿದ್ದು, ಪಕ್ಕದಲ್ಲಿ ಮಾರುಕಟ್ಟೆ ರಸ್ತೆಗೂ ಸಂಪರ್ಕ ಕಲ್ಪಿಸುತ್ತಿದೆ. ಉದ್ದೇಶಿತ ಯೋಜನೆಯ ರಸ್ತೆಯ ಎರಡು ಬದಿಯಲ್ಲಿ ಒಟ್ಟು ೨೦೧ ಕಟ್ಟಡಗಳಿವೆ. ಎಡಭಾಗದಲ್ಲಿ ೧೦೩, ಬಲಭಾಗದಲ್ಲಿರುವ ೯೮ ಕಟ್ಟಡಗಳ ಪೈಕಿ ಹಲವು ಮನೆಗಳಿವೆೆ. ಈಗಾಗಲೇ ಹಲವು ಕಟ್ಟಡಗಳನ್ನು ನಿವಾಸಿಗಳು ತೆರವು ಮಾಡಿದ್ದಾರೆ.

ಆರಂಭದಲ್ಲಿ ಈ ಯೋಜನೆ ಯನ್ನು ಸ್ಥಳೀಯ ನಿವಾಸಿಗಳು ವಿರೋಧಿಸಿದ್ದರ ಪರಿಣಾಮ ವಿವಾದವಾಗಿ ಮಾರ್ಪಟ್ಟಿತ್ತು. ಕೆಲವರು ಸ್ಥಳವನ್ನು ಒತ್ತುವರಿ ಮಾಡಿಕೊಂಡಿ ದ್ದಾರೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.

ಈಗಾಗಲೇ ಬಹುತೇಕ ಮನೆಗಳು ತೆರವುಗೊಂಡಿದೆ. ೧೬.೦೧.೨೦೧೯ರಲ್ಲಿ ಮಾರ್ಕಿಂಗ್ ಕಾರ್ಯಕ್ಕೆ ಕ್ರಮಕೈಗೊಳ್ಳ ಲಾಗಿದೆ. ಕೆಲವರಿಂದ ಆಕ್ಷೇಪಣೆ ವ್ಯಕ್ತವಾಗಿದೆ. ಆದರೆ, ಕಾನೂನಾತ್ಮಕ ವಾಗಿ ಯೋಜನೆಗೆ ಯಾವುದೇ ಸಮಸ್ಯೆ ಇಲ್ಲ. ಮಡಿಕೇರಿ ನಗರ ಅಭಿವೃದ್ಧಿ ಪ್ರಾಧಿಕಾರ ಅಗಲೀಕರಣಕ್ಕೆ ಒಪ್ಪಿಗೆ ನೀಡಿದ ಮೇಲೆಯೇ ಯೋಜನೆ ಕೈಗೆತ್ತ್ತಿಕೊಳ್ಳಲಾಯಿತು. ಶೀಘ್ರದಲ್ಲಿ ಮನೆಗಳನ್ನು ತೆರವು ಮಾಡಿ ಕಾಮಗಾರಿ ಆರಂಭಿಸಲಾಗುತ್ತದೆ ಎಂದು ನಗರಸಭೆ ಪೌರಾಯುಕ್ತ ರಾಮದಾಸ್ ‘ಶಕ್ತಿ’ಗೆ ಪ್ರತಿಕ್ರಿಯಿಸಿದ್ದಾರೆ.

ಪರಿಹಾರವಿಲ್ಲ: ಅಂದಾಜು ೫೦೦ ಮೀಟರ್ ಉದ್ದ, ೯ ಮೀಟರ್ ಅಗಲ ರಸ್ತೆ ಅಗಲೀಕರಣ ಕಾರ್ಯ ನಡೆಯಲಿದ್ದು, ಈಗಾಗಲೇ ಆನೇಕರು ಮನೆಗಳನ್ನು ಖಾಲಿ ಮಾಡಿ ಬೇರೆ ಕಡೆ ಸ್ಥಳಾಂತರಗೊAಡಿದ್ದಾರೆ. ಮನೆ ತೆರವು ಮಾಡಿರುವವರಿಗೆ ಹಾಗೂ ಮಾಡುವವರಿಗೆ ಯಾವುದೇ ರೀತಿಯ ಆರ್ಥಿಕ ಸಹಾಯ ನಗರಸಭೆಯಿಂದ ಸಿಗುವುದಿಲ್ಲ. ಈ ಹಿಂದೆಯೇ ನೋಟಿಸ್ ನೀಡುವ ಸಂದರ್ಭ ಈ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು. ಕೆಲವರು ಮನೆ ತೆರವಿಗೆ ಮತ್ತಷ್ಟು ಕಾಲಾವಕಾಶ ಕೋರಿದ್ದಾರೆ. ಆದರೆ, ಈಗಾಗಲೇ ಸಾಕಷ್ಟು ಸಮಯ ನೀಡಲಾಗಿದೆ. ಇನ್ನೂ ಕಾಲಾವಕಾಶ ನೀಡುವುದು ಕಷ್ಟ ಎಂದು ರಾಮದಾಸ್ ತಿಳಿಸಿದ್ದಾರೆ.

ಗಣಪತಿ ಬೀದಿ ರಸ್ತೆ ಅಗಲೀಕರಣದಿಂದ ಸುಗಮ ಸಂಚಾರಕ್ಕೆ ಅವಕಾಶವಾಗುತ್ತದೆ ಎಂದು ಪೌರಾಯುಕ್ತ ರಾಮದಾಸ್ ಹೇಳುತ್ತಾರೆ. ಈಗಾಗಲೇ ವಾಹನ ಸಂಚಾರ ಹೆಚ್ಚಾಗಿದ್ದು, ಪಾರ್ಕಿಂಗ್ ಸಮಸ್ಯೆ ಕೂಡ ಸೃಷ್ಟಿಯಾಗಿದೆ. ರಸ್ತೆ ಅಗಲೀಕರಣದಿಂದ ಸಮಸ್ಯೆ ದೂರವಾಗುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.