ಮಡಿಕೇರಿ, ಮಾ. ೫ : ಮತ್ತೊಂದು ಆರ್ಥಿಕ ವರ್ಷ ಕೊನೆಗೊಳ್ಳುವತ್ತ ಸಾಗಿದೆ. ವಾರ್ಷಿಕವಾಗಿ ಸರಕಾರದಿಂದ ಮಂಡನೆಯಾಗಲಿರುವ ಬಜೆಟ್ (ಮುಂಗಡ ಪತ್ರ)ನ ದಿನವೂ ಸಮೀಪಿಸುತ್ತಿದೆ. ಎಂದಿನAತೆ ಹಲವಷ್ಟು ನಿರೀಕ್ಷೆಗಳು, ಕುತೂಹಲಗಳು ಈ ಬಾರಿಯೂ ಜನತೆಯಲ್ಲಿ ಮೂಡುತ್ತಿವೆ. ವಾರ್ಷಿಕವಾದ ರಾಜ್ಯ ಬಜೆಟ್ ಎಂದರೆ ಅದರಲ್ಲಿ ಅನೇಕ ಅಂಶಗಳು ರಾಜ್ಯವನ್ನು ಮುನ್ನಡೆಸಬೇಕಾದಂತಹ ಆರ್ಥಿಕ ಕ್ರೋಢೀಕರಣ, ವಿವಿಧ ತೆರಿಗೆಗಳು ಏರಿಕೆ-ಇಳಿಕೆಯ ಸಿಹಿ-ಕಹಿಗಳು ಹೊಸ ನಿರ್ಬಂಧಗಳು, ವಿನೂತನ ಯೋಜನೆಗಳು - ಈ ರೀತಿಯಾಗಿ ಸಹಜವಾಗಿ ಜನತೆಯಲ್ಲಿ ಭಾರೀ ಆಶೋತ್ತರಗಳು ಅಡಗಿರುತ್ತವೆ.
ವಿಶೇಷವಾಗಿ ಕೊಡಗು ಜಿಲ್ಲೆಗೆ ಸಂಬAಧಿಸಿದAತೆ ಇದು ಮಲೆನಾಡು ಜಿಲ್ಲೆಯಾಗಿರುವುದರಿಂದ ಅನೇಕಾನೇಕ ಅಗತ್ಯತೆಗಳು-ನಿರೀಕ್ಷೆಗಳು ವರ್ಷಂಪ್ರತಿ ಇದ್ದೇ ಇರುತ್ತವೆ. ಆದರೆ ವಿಪರ್ಯಾಸವೋ... ಕೊಡಗಿನ ಬಗ್ಗೆ ನಿರ್ಲಕ್ಷö್ಯದ ಮನೋಭಾವವೋ ಎಂಬAತೆ ಯಾವುದೇ ಸರಕಾರಗಳು ಮಂಡಿಸುವ ಬಜೆಟ್ (ಕಾಯಪಂಡ ಶಶಿ ಸೋಮಯ್ಯ)ಮಡಿಕೇರಿ, ಮಾ. ೫ : ಮತ್ತೊಂದು ಆರ್ಥಿಕ ವರ್ಷ ಕೊನೆಗೊಳ್ಳುವತ್ತ ಸಾಗಿದೆ. ವಾರ್ಷಿಕವಾಗಿ ಸರಕಾರದಿಂದ ಮಂಡನೆಯಾಗಲಿರುವ ಬಜೆಟ್ (ಮುಂಗಡ ಪತ್ರ)ನ ದಿನವೂ ಸಮೀಪಿಸುತ್ತಿದೆ. ಎಂದಿನAತೆ ಹಲವಷ್ಟು ನಿರೀಕ್ಷೆಗಳು, ಕುತೂಹಲಗಳು ಈ ಬಾರಿಯೂ ಜನತೆಯಲ್ಲಿ ಮೂಡುತ್ತಿವೆ. ವಾರ್ಷಿಕವಾದ ರಾಜ್ಯ ಬಜೆಟ್ ಎಂದರೆ ಅದರಲ್ಲಿ ಅನೇಕ ಅಂಶಗಳು ರಾಜ್ಯವನ್ನು ಮುನ್ನಡೆಸಬೇಕಾದಂತಹ ಆರ್ಥಿಕ ಕ್ರೋಢೀಕರಣ, ವಿವಿಧ ತೆರಿಗೆಗಳು ಏರಿಕೆ-ಇಳಿಕೆಯ ಸಿಹಿ-ಕಹಿಗಳು ಹೊಸ ನಿರ್ಬಂಧಗಳು, ವಿನೂತನ ಯೋಜನೆಗಳು - ಈ ರೀತಿಯಾಗಿ ಸಹಜವಾಗಿ ಜನತೆಯಲ್ಲಿ ಭಾರೀ ಆಶೋತ್ತರಗಳು ಅಡಗಿರುತ್ತವೆ.
ವಿಶೇಷವಾಗಿ ಕೊಡಗು ಜಿಲ್ಲೆಗೆ ಸಂಬAಧಿಸಿದAತೆ ಇದು ಮಲೆನಾಡು ಜಿಲ್ಲೆಯಾಗಿರುವುದರಿಂದ ಅನೇಕಾನೇಕ ಅಗತ್ಯತೆಗಳು-ನಿರೀಕ್ಷೆಗಳು ವರ್ಷಂಪ್ರತಿ ಇದ್ದೇ ಇರುತ್ತವೆ. ಆದರೆ ವಿಪರ್ಯಾಸವೋ... ಕೊಡಗಿನ ಬಗ್ಗೆ ನಿರ್ಲಕ್ಷö್ಯದ ಮನೋಭಾವವೋ ಎಂಬAತೆ ಯಾವುದೇ ಸರಕಾರಗಳು ಮಂಡಿಸುವ ಬಜೆಟ್ ಕೈಗೆತ್ತಿಕೊಂಡಿರುವ ಅಬಕಾರಿ ಭವನ ಇನ್ನೂ ಕಾಡಿನೊಳಗೇ ಇದೆ. ಕೊಡವ ಹೆರಿಟೇಜ್ ಸೆಂಟರ್ ಪೂರ್ಣಗೊಂಡಿಲ್ಲ. ವಿಜ್ಞಾನ ಪಾರ್ಕ್ ಎಂಬದು ಘೋಷಣೆಯಲ್ಲೇ ಇದೆ. ಹೊದ್ದೂರುವಿನಲ್ಲಿ ನಿರ್ಮಾಣವಾಗಬೇಕಿರುವ ಕ್ರಿಕೆಟ್ ಸ್ಟೇಡಿಯಂ, ಮಡಿಕೇರಿಯಲ್ಲಿ ಪೂರ್ಣಗೊಳ್ಳಬೇಕಿರುವ ಸುವರ್ಣ ಸಾಂಸ್ಕೃತಿಕ ಸಮುಚ್ಚಯ, ಹಳೆಯ ಬಸ್ ನಿಲ್ದಾಣದ ಅಪಾಯಕಾರಿ ಸ್ಥಳದ ಕಾಮಗಾರಿ, ಗೋಣಿಕೊಪ್ಪಲು ಖಾಸಗಿ ಬಸ್ ನಿಲ್ದಾಣ, ವೀರಾಜಪೇಟೆಯಲ್ಲಿನ ಸರಕಾರಿ ಬಸ್ ಡಿಪೋ, ಕುಶಾಲನಗರದಲ್ಲಿನ ಕಲಾಭವನ, ಕೂಟಿಯಾಲ ಸಂಪರ್ಕ ರಸ್ತೆ, ಜಿಲ್ಲಾ ಕ್ರೀಡಾಂಗಣದ ಕಾಯಕಲ್ಪ, ಅಥ್ಲೆಟಿಕ್ ಟ್ರಾö್ಯಕ್ ನಿರ್ಮಾಣ, ಗೋಣಿಕೊಪ್ಪದಲ್ಲಿ ಸ್ವಾತಂತ್ರö್ಯ ಹೋರಾಟಗಾರರ ಭವನ, ಸರಕಾರಿ ಪ್ರಥಮ ದರ್ಜೆ ಹಾಗೂ ಪ್ರಥಮ ದರ್ಜೆ ಕಾಲೇಜುಗಳಿಗೆ ಕಟ್ಟಡ, ಮಡಿಕೇರಿ ಮಿನಿ ವಿಧಾನಸೌಧ.
೨೦೧೮ರ ನಂತರದ ವರ್ಷಗಳಲ್ಲಿ ಉಂಟಾದ ಪ್ರಾಕೃತಿಕ ವಿಕೋಪಗಳಿಗೆ ಸಂಬAಧಿಸಿದAತೆ ಸಂತ್ರಸ್ತರಿಗೆ ಮನೆ ನಿರ್ಮಾಣ-ಹಸ್ತಾಂತರ, ಬೆಳೆ ಹಾನಿ ಪರಿಹಾರಗಳು ಈ ರೀತಿಯಾಗಿ ಪಟ್ಟಿ ಬೆಳೆಯುತ್ತಾ
(ಮೊದಲ ಪುಟದಿಂದ) ಹೋಗುತ್ತವೆಯಲ್ಲದೆ, ಯಾವುದೂ ಸರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಇದಕ್ಕೆ ಈಗಿನ ಸರಕಾರ ಮಾತ್ರವಲ್ಲ, ಹಿಂದಿನ ಸರಕಾರಗಳು ಕೂಡ ಹೊಣೆಯಾಗಿವೆ. ಯಾವುದೇ ಪಕ್ಷಗಳೂ ಇದರಿಂದ ಹೊರತಾಗಿಲ್ಲ ಎಂಬದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಈಗಿನ ಗಂಭೀರ ಪರಿಸ್ಥಿತಿ
ಇವೆಲ್ಲದರ ನಡುವೆ ಪ್ರಸ್ತುತದ ವರ್ಷಗಳಲ್ಲಿ ಕೊಡಗು ಎದುರಿಸುತ್ತಿರುವ ಅತ್ಯಂತ ಜ್ವಲಂತವಾದ ಗಂಭೀರ ಸ್ವರೂಪದ ಸಮಸ್ಯೆಯಾಗಿರುವುದು ವನ್ಯಪ್ರಾಣಿ ಹಾಗೂ ಮಾನವ ಸಂಘರ್ಷದ ವಿಚಾರ, ಕಾಡಾನೆಗಳು, ಹುಲಿ, ಚಿರತೆ, ಕರಡಿ, ಕಾಡೆಮ್ಮೆಗಳಂತಹ ಪ್ರಾಣಿಗಳಿಂದ ಎದುರಾಗುತ್ತಿರುವ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ, ಜೀವ ಹಾನಿಗಳು, ಜಾನುವಾರುಗಳ ಸರಣಿ ಸಾವು ಪ್ರಕರಣ ದಿನೇ ದಿನೇ ಹೆಚ್ಚಾಗುತ್ತಿವೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರದಿಂದ ಈ ಬಾರಿಯ ಬಜೆಟ್ನಲ್ಲಿ ಕೊಡಗಿನ ಜನತೆ ಭಾರೀ ನಿರೀಕ್ಷೆಯನ್ನೇ ಹೊಂದಿದ್ದಾರೆ. ಅದೂ ಅತ್ಯಂತ ಕ್ಷಿಪ್ರಗತಿಯಲ್ಲಿ ಜಾರಿಯಾಗಬೇಕಾದ ಅಂಶವಿದು ಎಂಬದು ಗಮನಾರ್ಹವಾಗಿದೆ.
ಉಳಿದಂತೆ, ಆಸ್ತಿಪಾಸ್ತಿಗಳ ದಾಖಲೆ ವಿಚಾರ, ಕುಡಿಯುವ ನೀರು, ರಸ್ತೆಗಳ ಅಭಿವೃದ್ಧಿ, ಪಡಿತರ ದಾಖಲೆಗಳು ಈ ರೀತಿಯಾಗಿ ಬೆಟ್ಟದಷ್ಟು ಸಮಸ್ಯೆಗಳು ಪುಟ್ಟ ಜಿಲ್ಲೆಯಾದ ಕೊಡಗಿನ ಉದ್ದಗಲಕ್ಕೂ ಇದ್ದು, ಸರಕಾರ ಯಾವ ರೀತಿಯ ಸ್ಪಂದನೆ ನೀಡುತ್ತದೆ ಎಂಬದನ್ನು ಕಾದು ನೋಡಬೇಕಿದೆ.