ಮಡಿಕೇರಿ, ಮಾ. ೩: ನಗರದ ಹೊಸ ಬಡಾವಣೆಯ ಬಾಲಕರ ಬಾಲಮಂದಿರದ ಬಳಿಯ ರಸ್ತೆಯು ತೀರಾ ಹದಗೆಟ್ಟಿದ್ದು, ದುರಸ್ತಿಗೊಳಿಸುವಂತೆ ಸ್ಥಳೀಯರು ಪತ್ರಿಕೆಯ ಮೂಲಕ ಆಗ್ರಹಿಸಿದ್ದಾರೆ.

ಮೊದಲೇ ಇಕ್ಕಟ್ಟಾಗಿರುವ ಕಿರಿದಾದ ರಸ್ತೆಗಳು, ಗುಂಡಿಗಳ ನಡುವೆ ಕಣ್ಮರೆಯಾಗುತ್ತಿವೆ. ಹೊಂಡ-ಗುAಡಿಗಳು ಒಂದೆಡೆಯಾದರೆ, ಒಳಚರಂಡಿ ಮಂಡಳಿ ನಿರ್ಮಿಸಿರುವ ‘ಮ್ಯಾನ್‌ಹೋಲ್’ ದಿಬ್ಬಗಳು ಮತ್ತೊಂದೆಡೆ ತಲೆಎತ್ತಿವೆ. ಬಾಲಮಂದಿರದಿAದ ಕೆಳಗೆ ಹಾದುಹೋಗಿರುವ ರಸ್ತೆಯ ನಡುವೆ ‘ಮ್ಯಾನ್‌ಹೋಲ್’ ಹಾಗೂ ಅದರ ಸುತ್ತ ಗುಂಡಿಗಳು ಸೃಷ್ಟಿಯಾಗಿದ್ದು, ಏಕಮುಖ ಸಂಚಾರ ಮಾತ್ರ ಸಾಧ್ಯವಾಗಿದೆ.

ಒಂದುವೇಳೆ ಎರಡು ವಾಹನಗಳು ವಿರುದ್ಧ ದಿಕ್ಕುಗಳಲ್ಲಿ ಸಾಗಬೇಕಾದರೆ, ಸೈಕಲ್‌ನಲ್ಲಿ ಮಾತ್ರ ಚಲಿಸಲು ಸಾಧ್ಯವಾಗುವಷ್ಟು ರಸ್ತೆ ಹದಗೆಟ್ಟಿದೆ. ರಾತ್ರಿವೇಳೆ ಬೈಕ್ ಸವಾರರು ಅಪಘಾತಕ್ಕೊಳಗಾಗುವ ಸಾಧ್ಯತೆಗಳೂ ಹೆಚ್ಚಿವೆ.

ತಕ್ಷಣವೇ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ