ಕಣಿವೆ, ಮಾ. ೩: ಕಳೆದ ವರ್ಷದ ಫೆಬ್ರವರಿ ಹಾಗೂ ಮಾರ್ಚ್ ತಿಂಗಳಿನಲ್ಲಿ ಶುಂಠಿ ಬೆಳೆದ ಬೆಳೆಗಾರರು, ತಾವು ಬೆಳೆದ ಶುಂಠಿ ಫಸಲಿಗೆ ಮಾರುಕಟ್ಟೆಯಲ್ಲಿ ಪೂರಕವಾದ ಬೆಲೆ ಸಿಗದೇ ಅಪಾರ ನಷ್ಟಕ್ಕೆ ಸಿಲುಕಿ ಸಂಕಟ ಅನುಭವಿಸಿದ್ದರು.
ಆದಾಗ್ಯೂ ಮತ್ತೆ ಅದೇ ಸಂಕಟ ಹಾಗೂ ನಷ್ಟದ ದುಗುಡವನ್ನು ಮನದಲ್ಲಿಟ್ಟುಕೊಂಡೇ ಈ ಬಾರಿಯಾದರೂ ಸೂಕ್ತ ಬೆಲೆ ದೊರಕಲಿದೆ ಎಂಬ ಆಶಾಭಾವನೆ ಯಲ್ಲಿ ಶುಂಠಿ ಬಿತ್ತನೆಗೆ ಮುಂದಾಗು ತ್ತಿದ್ದಾರೆ. ಕಾವೇರಿ ನದಿ ದಂಡೆಯ ಇಕ್ಕೆಲಗಳ ಗ್ರಾಮಗಳು ಹಾಗೂ ಬಯಲು ಸೀಮೆಯ ಗ್ರಾಮಗಳಲ್ಲಿ ಶುಂಠಿ ಬಿತ್ತನೆ ಕಾರ್ಯ ಭರದಿಂದ ಸಾಗುತ್ತಿದೆ.
ಕಳೆದ ವರ್ಷ ಇದೇ ಬಿತ್ತನೆ ಬೀಜದ ಶುಂಠಿಗೆ ರೂ. ೨೫೦೦ ಗಳಿಂದ ರೂ. ೩೦೦೦ ಇತ್ತು. ಆದರೆ ಈ ವರ್ಷ ಕೊರೊನಾ ತಂದೊಡ್ಡಿದ ಸಂಕಷ್ಟದಿAದ ಕೃಷಿಕರು ಬೆಳೆದ ಶುಂಠಿ ಫಸಲು ಮೂರಂಕಿ ದಾಟಲೇ ಇಲ್ಲ. ಇದೀಗ ಮಾರುಕಟ್ಟೆಯಲ್ಲಿ ೬೦ ಕೆ.ಜಿ. ತೂಕದ ಒಂದು ಚೀಲ ಶುಂಠಿ ಫಸಲಿಗೆ ರೂ. ೮೦೦ ಇದ್ದರೆ, ಬಿತ್ತನೆ ಬೀಜದ ಶುಂಠಿಗೆ ಒಂದು ಚೀಲಕ್ಕೆ ರೂ. ೧೨೦೦ ರಿಂದ ೧೩೦೦ ಇದೆ. ಅದೇ ೨೦೧೮ರ ಫೆಬ್ರವರಿ ಹಾಗೂ ಮಾರ್ಚ್ನಲ್ಲಿ ಇದೇ ಬಿತ್ತನೆ ಬೀಜದ ಶುಂಠಿಗೆ ಒಂದು ಚೀಲಕ್ಕೆ ರೂ. ೫೦೦೦ ಇತ್ತು.
ಆದಾಗ್ಯೂ ಈ ಬಾರಿ ಬಿತ್ತನೆ ಬೀಜಕ್ಕೆ ಗರಿಷ್ಠ ರೂ. ೧೨೦೦ ಇರುವ ಕಾರಣ ಸ್ವಂತ ಭೂಮಿಯನ್ನುಳ್ಳ ಕೃಷಿಕರು ತಮ್ಮ ಶಕ್ತಾನುಸಾರ ಬಿತ್ತನೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಹಾಗೆಯೇ ಭೂಮಿಯನ್ನು ಲೀಸ್ಗೆ ಪಡೆದು ಶುಂಠಿ ಬೆಳೆಯುವವರು ಫಲವತ್ತಾದ ಭೂಮಿಗೆ ಒಂದು ಎಕರೆಗೆ ರೂ. ೫೦ ಸಾವಿರ ತನಕ ಕೊಟ್ಟು ಬಿತ್ತನೆ ಮಾಡುತ್ತಿದ್ದಾರೆ.
ಒಂದು ಎಕರೆ ಭೂಮಿಯಲ್ಲಿ ಶುಂಠಿ ಬೆಳೆಯಲು ಕನಿಷ್ಟ ರೂ. ೩-೫೦ ಲಕ್ಷಗಳಿಂದ ರೂ. ೪ ಲಕ್ಷ ಹಣ ಖರ್ಚು ಆಗುತ್ತದೆ. ಅಂದರೆ ಒಂದು ಎಕರೆ ಭೂಮಿಯನ್ನು ಲೀಸ್ಗೆ ಪಡೆಯಲು ರೂ. ೫೦ ಸಾವಿರ, ಅದನ್ನು ಉಳುಮೆ ಮಾಡಿ ಸಿದ್ಧಗೊಳಿ ಸಲು ರೂ. ೧೫ ಸಾವಿರ, ಬಿತ್ತನೆ ಬೀಜದ ಶುಂಠಿಗೆ ಒಂದು ಎಕರೆಗೆ ೨೫ ಚೀಲ ಶುಂಠಿ ಅಂದರೂನು ರೂ. ೩೦ ಸಾವಿರ, ಹಾಗೆಯೇ ಶುಂಠಿ ಬಿತ್ತನೆ ಮಾಡುವ ಭೂಮಿಗೆ ಸಾವಯವ ಅಂದರೆ ದನಗಳ ಗೊಬ್ಬರ ರೂ. ೨೦ ಆದಾಗ್ಯೂ ಈ ಬಾರಿ ಬಿತ್ತನೆ ಬೀಜಕ್ಕೆ ಗರಿಷ್ಠ ರೂ. ೧೨೦೦ ಇರುವ ಕಾರಣ ಸ್ವಂತ ಭೂಮಿಯನ್ನುಳ್ಳ ಕೃಷಿಕರು ತಮ್ಮ ಶಕ್ತಾನುಸಾರ ಬಿತ್ತನೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಹಾಗೆಯೇ ಭೂಮಿಯನ್ನು ಲೀಸ್ಗೆ ಪಡೆದು ಶುಂಠಿ ಬೆಳೆಯುವವರು ಫಲವತ್ತಾದ ಭೂಮಿಗೆ ಒಂದು ಎಕರೆಗೆ ರೂ. ೫೦ ಸಾವಿರ ತನಕ ಕೊಟ್ಟು ಬಿತ್ತನೆ ಮಾಡುತ್ತಿದ್ದಾರೆ.
ಒಂದು ಎಕರೆ ಭೂಮಿಯಲ್ಲಿ ಶುಂಠಿ ಬೆಳೆಯಲು ಕನಿಷ್ಟ ರೂ. ೩-೫೦ ಲಕ್ಷಗಳಿಂದ ರೂ. ೪ ಲಕ್ಷ ಹಣ ಖರ್ಚು ಆಗುತ್ತದೆ. ಅಂದರೆ ಒಂದು ಎಕರೆ ಭೂಮಿಯನ್ನು ಲೀಸ್ಗೆ ಪಡೆಯಲು ರೂ. ೫೦ ಸಾವಿರ, ಅದನ್ನು ಉಳುಮೆ ಮಾಡಿ ಸಿದ್ಧಗೊಳಿ ಸಲು ರೂ. ೧೫ ಸಾವಿರ, ಬಿತ್ತನೆ ಬೀಜದ ಶುಂಠಿಗೆ ಒಂದು ಎಕರೆಗೆ ೨೫ ಚೀಲ ಶುಂಠಿ ಅಂದರೂನು ರೂ. ೩೦ ಸಾವಿರ, ಹಾಗೆಯೇ ಶುಂಠಿ ಬಿತ್ತನೆ ಮಾಡುವ ಭೂಮಿಗೆ ಸಾವಯವ ಅಂದರೆ ದನಗಳ ಗೊಬ್ಬರ ರೂ. ೨೦ ಅದೃಷ್ಟದ ಬೆಳೆ ಎಂದೇ ಕರೆಯುವ ಈ ಶುಂಠಿ ಬೆಳೆ ಎಲ್ಲರ ಕೈಯನ್ನು ಹಿಡಿಯುವುದು ವಿರಳ. ಕೈ ಕೊಡೋದೇ ಹೆಚ್ಚು. ಹಾಗಾಗಿ ೨೦೨೦ರ ಕೊರೊನಾ ವರ್ಷದಲ್ಲಿ ಶುಂಠಿ ಬೆಳೆಯಲು ಹೋಗಿ ಕೈ ಸುಟ್ಟುಕೊಂಡವರು ಆರ್ಥಿಕವಾಗಿ ಸುಧಾರಿಸಿಕೊಳ್ಳಲು ವರ್ಷಗಳೇ ಬೇಕಾಗಬಹುದು.
ಭೂಮಿ ತಾಯಿ ಹಾಗೂ ವರುಣ ದೇವರ ಕೃಪೆಯಿಂದ ಈ ಬಾರಿ ಉತ್ತಮ ಮಳೆಯಾಗಿ ಅಷ್ಟೇ ಪ್ರಮಾಣದಲ್ಲಿ ಉತ್ತಮ ಬೆಳೆ ಬಂದಲ್ಲಿ ಹಾಗೂ ಮಾರುಕಟ್ಟೆಯಲ್ಲಿ ಅತ್ಯುತ್ತಮ ದರ ದೊರೆತಲ್ಲಿ ಬೆಳೆಗಾರ ಒಂದಷ್ಟು ಚೇತರಿಸಿಕೊಂಡಿ ಯಾನು....! ಏನೇ ಇರಲಿ ಬೆಳೆಗಾರನ ಬೆವರು ತುಂಬಿದ ಮೊಗ ದಲ್ಲಿ ಮಂದಹಾಸ ಮೂಡಲಿ ಎಂಬ ಆಶಾಭಾವನೆ ನಮ್ಮದು.
-ಕೆ. ಎಸ್. ಮೂರ್ತಿ