ಕೂಡಿಗೆ, ಮಾ. ೩ : ಶಿರಂಗಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿAದ ವೀರಾಜಪೇಟೆಯ ಎಸ್‌ಎಲ್‌ಎನ್ ಗ್ಲೋಬಲ್ ಕೇಂದ್ರ ಮತ್ತು ಅಮೃತ್‌ರ್ಗಾನಿಕ್ ಫರ್ಟಿಲೈಸರ್ ಇವರ ಸಹಯೋಗದೊಂದಿಗೆ ಶಿರಂಗಾಲ ಗ್ರಾಮದ ಹಳೆ ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮ ವ್ಯಾಪ್ತಿಯ ರೈತರಿಗೆ ಕೃಷಿ ಮಾಹಿತಿ ಕಾರ್ಯಾಗಾರ ನಡೆಯಿತು.

ಕಾರ್ಯಕ್ರಮದಲ್ಲಿ ರೈತರಿಗೆ ಮಣ್ಣಿನ ಫಲವತ್ತತೆ ಮತ್ತು ಲಾಭದಾಯಕ ಕೃಷಿ ಎಂಬ ವಿಷಯದ ಬಗ್ಗೆ ಸಮಗ್ರವಾದ ಮಾಹಿತಿ ನೀಡಲಾಯಿತು. ಶುಂಠಿ, ಆಡಿಕೆ ಹಾಗೂ ಇತರ ಬೆಳೆಗಳಿಗೆ ಬಳಕೆ ಮಾಡುವ ಗೊಬ್ಬರದ ಬಗ್ಗೆ, ಸಸ್ಯಗಳ ಬೆಳವಣಿಗೆಗೆ ಪೂರಕವಾದ ಅಂಶಗಳ ಬಗ್ಗೆ ಮತ್ತು ರಾಸಾಯನಿಕ ಗೊಬ್ಬರದಿಂದ ಆಗುವ ಅನಾಹುತದಿಂದ ಭೂಮಿಯ ಮಣ್ಣಿನ ಪೋಷಕಾಂಶ ಕೊರತೆ ಮತ್ತು ಮಣ್ಣಿನಿಂದ ಆಗುವ ಅನೇಕ ತೊಂದರೆಗಳ ಬಗ್ಗೆ ಮಾಹಿತಿಯನ್ನು ರೈತರಿಗೆ ವೀರಾಜಪೇಟೆಯ ಸಂಪನ್ಮೂಲ ವ್ಯಕ್ತಿ ವಿಷ್ಣುಮೂರ್ತಿ ಜಿ. ರಾವ್ ಕೃಷಿಗೆ ಸಂಬAಧಿಸಿದAತೆ ಮತ್ತು ಮಣ್ಣಿನ ಗುಣಮಟ್ಟದ ಲಕ್ಷಣಗಳನ್ನು ಸವಿಸ್ತಾರವಾಗಿ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಕಾರ ಸಂಘದ ಅಧ್ಯಕ್ಷ ಚಂದ್ರಶೇಖರ ವಹಿಸಿದ್ದರು. ಉಪಾಧ್ಯಕ್ಷ ಬಿ.ಸಿ. ಬೇಲಯ್ಯ, ನಿರ್ದೇಶಕರಾದ ನಾಗಮ್ಮ ರುದ್ರಪ್ಪ ವೀರಭದ್ರಪ್ಪ, ಪದ್ಮಬಾಯಿ ಸೇರಿದಂತೆ ಸಂWದÀ ಕಾರ್ಯ ನಿರ್ವಹಣಾಧಿಕಾರಿ ಚೇತನ, ಮಾಜಿ ಕಾರ್ಯದರ್ಶಿ ಬಸವಣ್ಣ, ದೇವಾಲಯ ಸಮಿತಿಯ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.