ಶ್ರೀಮಂಗಲ, ಮಾ. ೩ : ಹುಲಿ ದಾಳಿಯಿಂದ ಹಸುವನ್ನು ಕಳೆದುಕೊಂಡಿರುವ ರೈತ ಚೆಟ್ಟಂಗಡ ನವೀನ್ ಭೀಮಯ್ಯ ಅವರಿಗೆ ಕೊಡಗು ವನ್ಯ ಜೀವಿ ಸಂಘದಿAದ ರೂ. ೫ ಸಾವಿರ ಪರಿಹಾರದ ಚೆಕ್‌ನ್ನು ಸಂಘದ ಉಪಾಧ್ಯಕ್ಷ ಕುಂಞAಗಡ ಬೋಸ್ ಮಾದಪ್ಪ ಅವರು ಶ್ರೀಮಂಗಲದಲ್ಲಿ ಸೋಮವಾರ ವಿತರಿಸಿದರು.

ಹಸುವನ್ನು ಅವಲಂಭಿಸಿ ಹೈನುಗಾರಿಕೆಯಿಂದ ಜೀವನ ಸಾಗಿಸುತ್ತಿದ್ದ ಚೆಟ್ಟಂಗಡ ನವೀನ್ ಭೀಮಯ್ಯ ಅವರಿಗೆ ನೆರವಾಗುವ ನಿಟ್ಟಿನಲ್ಲಿ ಈ ಪರಿಹಾರದ ಚೆಕ್‌ನ್ನು ನೀಡಲಾಗಿದೆ ಎಂದು ಬೋಸ್ ಮಾದಪ್ಪ ತಿಳಿಸಿದರು.