ಗೋಣಿಕೊಪ್ಪ ವರದಿ, ಮಾ. ೩: ರಾಷ್ಟಿçÃಯ ವಿಜ್ಞಾನ ದಿನದ ಅಂಗವಾಗಿ ಅರಮೇರಿ ಎಸ್‌ಎಂಎಸ್ ಶಾಲಾ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ವಿಜ್ಞಾನ ದಿನಾಚರಣೆಯಲ್ಲಿ ಕಳತ್ಮಾಡು ಲಯನ್ಸ್ ಶಾಲೆಯ ತಂಡ ಮೂರು ವಿಭಾಗಗಳಲ್ಲಿ ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿತು.

ಫಲಿತಾAಶ: ಚರ್ಚಾ ಸ್ಪರ್ಧೆಯಲ್ಲಿ ಕಳತ್ಮಾಡು ಲಯನ್ಸ್ ಪ್ರೌಢಶಾಲೆಯ ದಿಶಾ ಪ್ರಥಮ, ಚೇರಂಬಾಣೆ ರಾಜರಾಜೇಶ್ವರಿ ಪ್ರೌಢಶಾಲೆಯ ಲಿಪಿಕ ದ್ವಿತೀಯ, ರಸಪ್ರಶ್ನೆಯಲ್ಲಿ ಕಳತ್ಮಾಡು ಲಯನ್ಸ್ ತಂಡ ಪ್ರಥಮ, ಮಡಿಕೇರಿ ಜನರಲ್ ತಿಮ್ಮಯ್ಯ ಶಾಲೆ ದ್ವಿತೀಯ, ಪ್ರಯೋಗ ವಿಭಾಗದಲ್ಲಿ ಕಳತ್ಮಾಡು ಲಯನ್ಸ್ ಶಾಲೆಯ ಎಂ.ಕೆ. ಲಿಕಿತಾ ಪ್ರಥಮ, ನಾಪೋಕ್ಲು ರಾಮಟ್ರಸ್ಟ್ ಶಾಲೆಯ ಟಿ.ವಿ. ಪೂಣಚ್ಚ ದ್ವಿತೀಯ ಸ್ಥಾನ ಪಡೆದುಕೊಂಡರು.

ನಿಧಿ ಶೋಧನಾ ವಿಭಾಗದಲ್ಲಿ ಅರಮೇರಿ ಎಸ್‌ಎಂಎಸ್ ಪ್ರೌಢಶಾಲೆಗೆ ಪ್ರಥಮ ಹಾಗೂ ದ್ವಿತೀಯ ಬಹುಮಾನ ಲಭಿಸಿತು. ಮೊದಲ ಬಹುಮಾನ ಪಡೆದ ತಂಡದಲ್ಲಿ ಅಮನ್, ಬಿ.ಕೆ. ಅಚಲ್, ಎಂ.ಎ. ಯಾಗ್, ದ್ವಿತೀಯ ಬಹುಮಾನ ಪಡೆದ ತಂಡದಲ್ಲಿ ಫಿಜಾ ನಸ್ರೀನಾ, ಕೆ. ಎನ್. ಸಾಕಿ, ಕೆ.ಎ. ಸುಹಾನ ಇದ್ದಾರೆ.

ವಿಜ್ಞಾನಕ್ಕೆ ಸಂಬAಧಿಸಿದAತೆ ಜಿಲ್ಲಾ ಮಟ್ಟದ ಪ್ರೌಢಶಾಲೆಗಳಿಗೆ ೪ ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ಕಳತ್ಮಾಡು ಲಯನ್ಸ್, ಎಸ್‌ಎಂಎಸ್, ನಾಪೋಕ್ಲು ರಾಮಟ್ರಸ್ಟ್, ಮಡಿಕೇರಿ ಜನರಲ್ ತಿಮ್ಯಯ್ಯ, ಬಿಟ್ಟಂಗಾಲ ರೋಟರಿ, ಚೇರಂಬಾಣೆ ರಾಜರಾಜೇಶ್ವರಿ ಶಾಲೆಯ ತಂಡಗಳು ಭಾಗವಹಿಸಿದ್ದವು. ಥರ್ಮಲ್ ಎನರ್ಜಿ ಮಾದರಿ ಗಮನ ಸೆಳೆಯಿತು. ಆಹಾರ ಪದ್ಧತಿ, ಮ್ಯೂಸಿಕ್, ಅಡುಗೆ ಬಗ್ಗೆ ಮಾದರಿಗಳು ಮೂಡಿಬಂದವು.

ಮೊದಲನೆಯದಾಗಿ ಮಣ್ಣಿನಿಂದ ರೂಪುಗೊಳ್ಳುವ ವಿಜ್ಞಾನವನ್ನು ತಿಳಿಸಿಕೊಡಲಾಯಿತು. ಮಣ್ಣು, ಕಲ್ಲು, ನೀರು, ಕೃಷಿ ಬೆಳೆಗಳ ಬಗ್ಗೆ ಮಾದರಿಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿ ಮಾಹಿತಿ ಹಂಚಿಕೊAಡರು. ನಂತರ ಭೂಗೋಳ ವಿಜ್ಞಾನ, ಮಾನವನ ವಿಜ್ಞಾನದ ಬೆಳವಣಿಗೆ, ಶಬ್ಧ ವಿಜ್ಞಾನದ ಮೂಲಕ ರಾಷ್ಟಿçÃಯ ವಿಜ್ಞಾನ ದಿವಸವಾಗಿ ಆಚರಿಸಿ ವಿಜ್ಞಾನಿ ಸಿ.ವಿ. ರಾಮನ್ ಅವರನ್ನು ನೆನೆಸಿಕೊಳ್ಳಲಾಯಿತು.

ದೇವಸ್ಥಾನ ಎಂಬುದು ಆಧ್ಯಾತ್ಮಿಕ ಕೇಂದ್ರ ಮಾತ್ರವಲ್ಲ. ವಿಜ್ಞಾನದ ಒಂದು ಭಾಗವಾಗಿದೆ ಎಂಬುದನ್ನು ವಿದ್ಯಾರ್ಥಿಗಳು ತಿಳಿಸಿಕೊಟ್ಟರು. ಅಲ್ಲಿನ ದೀಪಕ್ಕೆ ಬೆಳಕಿನ ವಿಕೇಂದ್ರಿಕರಣವನ್ನು ನಿಯಂತ್ರಿಸುವ ಶಕ್ತಿಯಿದೆ. ಹೂಗಳು ಸುವಾಸನೆ ಮೂಲಕ ಮನಸ್ಸಿಗೆ ಮುದ ನೀಡುವುದರೊಂದಿಗೆ ಕೆಮಿಕಲ್ ಅನ್ನು ನಿಯಂತ್ರಿಸುವ ಶಕ್ತಿ ಇದೆ. ತೀರ್ಥವು ತುಳಸಿ, ಏಲಕ್ಕಿ ಇಂತಹವುಗಳ ಮಿಶ್ರಣದಿಂದ ದೈಹಿಕ ಥೆರಫಿಯಾಗಿದೆ. ಅಲ್ಲದೆ, ರಕ್ತ ಶುದ್ಧೀಕರಣಕ್ಕೂ ಪೂರಕವಾಗಲಿದೆ. ಗಂಟೆಯು ಮನಸ್ಸನ್ನು ಏಕಾಗ್ರತೆಗೊಳಿಸುತ್ತದೆ. ದೇವಸ್ಥಾನ ವೈಜ್ಞಾನಿಕ ಶಕ್ತಿಯ ಕೇಂದ್ರ ಎಂಬುದನ್ನು ತಿಳಿಸಿಕೊಟ್ಟರು.

ಜನರೇಟರ್ ಮೂಲಕ ವಿದ್ಯುತ್ ಪಡೆಯುವುದು, ಮಣ್ಣು, ಕಲ್ಲಿದ್ದಲು ಮೂಲಕ ದೊರೆಯುವ ವಿಜ್ಞಾನ, ಮಣ್ಣಿನ ವಿಧಗಳಿಂದ ಪಡೆಯಬಹುದಾದ ವೈಜ್ಞಾನಿಕ ಶಕ್ತಿಗಳ ಬಗ್ಗೆ ಮಾಹಿತಿ ನೀಡಿದರು. ವಿದ್ಯಾರ್ಥಿನಿ ಕನ್ನಿಕಾ ಪ್ರತಿಯೊಂದು ಹಂತದ ಬಗ್ಗೆ ಮಾಹಿತಿ ನೀಡಿಕೊಂಡು ಕಾರ್ಯಕ್ರಮ ನಿರೂಪಿಸಿ ಗಮನ ಸೆಳೆದರು.

ಅರಮೇರಿ ಕಳಂಚೇರಿ ಮಠದ ಅಧ್ಯಕ್ಷ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರು ಕೆಲೈಡೊ ದರ್ಶಕದಲ್ಲಿ ವೀಕ್ಷಣೆ ಮಾಡುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭ ಬಯೋ ಕೆಮಿಸ್ಟಿçà ವಿಭಾಗದ ಪ್ರೊ. ರಾಘವೇಂದ್ರ ಹೆಗ್ಡೆಕಟ್ಟೆ, ಕಾಲೇಜು ವ್ಯವಸ್ಥಾಪಕ ನಿರ್ದೇಶಕ ಎಂ.ಸಿ. ಸಚಿನ್, ಪಿಯು ಕಾಲೇಜು ಪ್ರಾಂಶುಪಾಲೆ ಡಾ. ಬಿದ್ದಂಡ ರೇಖಾ ಚಿಣ್ಣಪ್ಪ, ಎಸ್‌ಎಂಎಸ್ ಅಕಾಡೆಮಿ ಪ್ರಾಂಶುಪಾಲೆ ಬಲ್ಲಚಂಡ ಕುಸುಮ್ ಟಿಟೊ ಉಪಸ್ಥಿತರಿದ್ದರು.