ಕುಶಾಲನಗರ, ಮಾ.೨: ಅಂಗಡಿ ಮಾಲೀಕನ ಗಮನ ಬೇರೆಡೆ ಸೆಳೆದು ಮೊಬೈಲ್, ಕ್ಯಾಮರಾ ಮತ್ತು ನಗದು ಅಪಹರಿಸಿದ ಯುವಕನನ್ನು ಕುಶಾಲನಗರ ಪೊಲೀಸರು ಬಂಧಿಸಿದ್ದಾರೆ.
ಮೂಲತಃ ಮಡಿಕೇರಿಯ ಸುಮಂತ್ (೧೯) ಬಂಧಿತ ಆರೋಪಿ. ಕುಶಾಲನಗರ ಮಳಿಗೆಯೊಂದರಲ್ಲಿ ಹಾಡಹಗಲೇ ೩೫ ಸಾವಿರ ಮೌಲ್ಯದ ಕ್ಯಾಮರಾ ಮತ್ತು ೨೫ ಸಾವಿರ ನಗದು ಅಪಹರಿಸಿ ಪರಾರಿಯಾಗಿದ್ದ. ಅಂಗಡಿ ಮಾಲೀಕ ಸಿಸಿ ಟಿವಿ ಪರಿಶೀಲಿಸಿದಾಗ ಕೃತ್ಯ ಬೆಳಕಿಗೆ ಬಂದಿತ್ತು. ಈ ಸಂಬAಧ ಕುಶಾಲನಗರ ಪೊಲೀಸ್ ಠಾಣೆಗೆ ದೂರು ನೀಡಿದ ಮೇರೆಗೆ ಆರೋಪಿಯನ್ನು ಪತ್ತೆಹಚ್ಚಿದ ಪೊಲೀಸರು ಆತನ ಬಳಿಯಿದ್ದ ೧೦ ಸಾವಿರ ನಗದು, ಕ್ಯಾಮರಾ, ಒಂದು ಮೊಬೈಲ್ ಹಾಗೂ ಬ್ಯಾಗ್ ಒಂದನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ , ಪೊಲೀಸ್ ಉಪಧೀಕ್ಷಕ ಹೆಚ್. ಎಂ. ಶೈಲೇಂದ್ರ ಅವರ ಮಾರ್ಗದರ್ಶನದಲ್ಲಿ ಎಂ. ಮಹೇಶ್ ಸಿಪಿಐ ಕುಶಾಲನಗರ ವೃತ್ತ ಅವರ ನೇತೃತ್ವದಲ್ಲಿ ಗಣೇಶ್ ಪಿಎಸ್‌ಐ ಕುಶಾಲನಗರ ಟೌನ್ ಪೊಲೀಸ್ ಠಾಣೆ, ಗೋಪಾಲ ಎಎಸ್‌ಐ, ಹೆಚ್.ಕೆ. ಮಂಜುನಾಥ ಎಎಸ್‌ಐ, ಸಿಬ್ಬಂದಿಗಳಾದ ಬಿ.ಜಿ. ಉಮೇಶ್, ಹೆಚ್.ಸಿ. ೨೧೪, ಕ್ರೆöÊಂ ಕರ್ತವ್ಯದ ಸಿಬ್ಬಂದಿಗಳಾದ ಸುದೀಶ್ ಕುಮಾರ್, ಪಿ.ಸಿ. ೪೮೬, ಅರುಣ್‌ಕುಮಾರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಸಾರ್ವಜನಿಕರು ಮನೆ ಹಾಗೂ ಅಂಗಡಿ ಮಳಿಗೆಗಳಿಗೆ ಬೀಗ ಹಾಕಿಕೊಂಡು ಬೇರೆ ಊರುಗಳಿಗೆ ತೆರಳುವ ಸಂದರ್ಭ ಯಾವುದೇ ಬೆಲೆ ಬಾಳುವ ಸೊತ್ತುಗಳು, ನಗದು, ಚಿನ್ನಾಭರಣಗಳನ್ನು ಮನೆ ಹಾಗೂ ಅಂಗಡಿಯಲ್ಲಿಡಬಾರದೆAದು ಹಾಗೂ ಬೆರೆಡೆಗೆ ತೆರಳುವ ಸಂದರ್ಭದಲ್ಲಿ ತಮ್ಮ ಮನೆಗಳಲ್ಲಿ ಪರಿಚಯಸ್ಥರನ್ನು ಉಳಿಸಿಕೊಳ್ಳುವ ಬಗ್ಗೆ ನೋಡಿಕೊಳ್ಳುವುದು. ಸಾರ್ವಜನಿಕರು ಅಂಗಡಿ ಹಾಗೂ ಮನೆಗೆ ಬೀಗ ಹಾಕಿಕೊಂಡು ಹೋಗುವ ವೇಳೆ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಹಾಗೂ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ೧೧೨ ಇಂಡಿಯಾ ಎಂಬ ತಂತ್ರಾAಶವನ್ನು ತಯಾರಿಸಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಹಾಗೂ ಇಂತಹ ಅಪರಾಧಗಳನ್ನು ತಡೆಗಟ್ಟುವಲ್ಲಿ ಪೊಲೀಸರೊಂದಿಗೆ ಸಹಕರಿಸಬೇಕೆಂದು ಪೊಲೀಸ್ ಅಧೀಕ್ಷಕರು ಕೋರಿದ್ದಾರೆ.