ಮಡಿಕೇರಿ, ಮಾ. ೨: ಕಳೆದ ತಾ. ೨೭ ರಂದು ಸಂಜೆ ೭.೪೫ರ ವೇಳೆಗೆ ಮಡಿಕೇರಿ - ಸಿಂಕೋನ ರಸ್ತೆಯ ಇಬ್ನಿವಳವಾಡಿ ಗ್ರಾಮದ ಸಿಂಕೋನ ತೋಟದ ಬಳಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಅಪರಿಚಿತ ವ್ಯಕ್ತಿಗೆ ಶಾಹಿದ್ ಎಂಬವರು ಚಾಲಿಸುತ್ತಿದ್ದ ಕಾರು (ಸಿಕೆಪಿ ೫೦೬೨) ಡಿಕ್ಕಿಯಾಗಿದೆ. ಗಾಯಗೊಂಡಿದ್ದ ವ್ಯಕ್ತಿಯನ್ನು ಶಾಹಿದ್ ತನ್ನ ಕಾರಿನಲ್ಲಿ ಕರೆ ತಂದು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಇಂದು ಮೃತಪಟ್ಟಿದ್ದಾರೆ. ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ವ್ಯಕ್ತಿಯ ವಾರಸುದಾರರು ಪತ್ತೆಯಾಗದ ಹಿನ್ನೆಲೆಯಲ್ಲಿ ವಾರಸುದಾರರು ಯಾರಾದರೂ ಇದ್ದಲ್ಲಿ ಗ್ರಾಮಾಂತರ ಠಾಣೆ ಉಪನಿರೀಕ್ಷಕರು (೦೮೨೭೨- ೨೨೮೭೭೭), ವೃತ್ತ ನಿರೀಕ್ಷಕರು (೦೮೨೭೨-೨೨೦೧೦೦) ಇವರನ್ನು ಅಥವಾ ಪೊಲೀಸ್ ಠಾಣೆಯನ್ನು ಸಂಪರ್ಕಿಸುವAತೆ ಕೋರಲಾಗಿದೆ.