ಮಡಿಕೇರಿ, ಮಾ. ೧: ನಗರದ ವನಚಾಮುಂಡಿ ದೇವಾಲಯ ಸಮಿತಿ ವತಿಯಿಂದ ನಡೆದ ವಾಲಿಬಾಲ್ ಪಂದ್ಯಾಟದಲ್ಲಿ ರಕ್ಷಿತ್ ಮತ್ತು ತಂಡ ಪ್ರಥಮ ಸ್ಥಾನ ಪಡೆದುಕೊಂಡಿತು. ಚೇತು ಮತ್ತು ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಪಂದ್ಯಾವಳಿಯಲ್ಲಿ ನಗರದ ೫ ತಂಡಗಳು ಭಾಗವಹಿಸಿತ್ತು.

ಕೂಡ್ಲೂರು ಕೈಗಾರಿಕಾ ಬಡಾವಣೆಯ ನದಿ ದಂಡೆಯಲ್ಲಿ ತ್ಯಾಜ್ಯದ ರಾಶಿ

ಕಣಿವೆ, ಮಾ. ೧: ಕೂಡ್ಲೂರು ಕೈಗಾರಿಕಾ ಪ್ರದೇಶದ ಕಾವೇರಿ ನದಿ ದಂಡೆಯಲ್ಲಿ ತ್ಯಾಜ್ಯದ ರಾಶಿ ಸಂಗ್ರಹಣೆಗೊAಡರೂ ಕೂಡ ನದಿಯ ಸ್ವಚ್ಛತೆ ಕಾಪಾಡಬೇಕಾದ ಸಂಬAಧಿಸಿದ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಆಡಳಿತ ಮಾತ್ರ ತನಗೇನು ತಿಳಿಯದಂತೆ ಕಣ್ಮುಚ್ಚಿ ಕುಳಿತಿದೆ.

ಅಷ್ಟು ಮಾತ್ರವಲ್ಲ ಕೂಡ್ಲೂರು ಗ್ರಾಮಕ್ಕೆ ಸೇರಿದ ರುದ್ರಭೂಮಿ ಇದೇ ನದಿ ದಂಡೆಯಲ್ಲಿ ಇದೆಯಾದರೂ ಅಲ್ಲಿಗೆ ತೆರಳಲು ದಾರಿ ಕಾಣದಾಗಿದೆ.

ಕೈಗಾರಿಕಾ ಪ್ರದೇಶದಲ್ಲಿನ ಹಳೇ ಕಟ್ಟಡಗಳ ಕಾಂಕ್ರೀಟ್ ಸ್ಲಾಬ್‌ಗಳು, ತ್ಯಾಜ್ಯಗಳು ಇಲ್ಲಿ ಲೋಡುಗಟ್ಟಲೇ ಸುರಿದು ಕಾವೇರಿ ನದಿಯನ್ನು ಕಾಣದಂತೆ ಮಾಡಲಾಗಿದೆ. ಅಂದರೆ ನದಿಗೆ ಬಟ್ಟೆ ತೊಳೆಯಲು ಹೋಗುವವರು, ಸ್ನಾನ ಮಾಡಲು ತೆರಳುವ ಕೈಗಾರಿಕೆಗಳ ಕಾರ್ಮಿಕರಿಗೆ ಇಲ್ಲಿ ದಾರಿಯೇ ಇಲ್ಲದ ಸ್ಥಿತಿ ನಿರ್ಮಾಣಗೊಂಡಿದೆ.

ಕೈಗಾರಿಕಾ ಬಡಾವಣೆಯ ನಿರ್ಮಾಣದ ಇತಿಹಾಸದಲ್ಲಿ ಇದೇ ಮೊದಲು ಎಂಬAತೆ ರೂ. ೧೦ ಕೋಟಿ ವೆಚ್ಚದಲ್ಲಿ ಕೈಗಾರಿಕಾ ಪ್ರದೇಶದ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಹೂಳು ತುಂಬಿ ಕೈಗಾರಿಕಾ ತ್ಯಾಜ್ಯ ನೀರು ಹಾಗೂ ಮಳೆಯ ನೀರು ಹರಿಯದಂತಿದ್ದ ಚರಂಡಿಗಳ ಹೂಳು ತೆಗೆಯಲಾಗಿದೆ. ಕೆಲವೆಡೆ ಹೊಸದಾದ ಚರಂಡಿಗಳನ್ನು ನಿರ್ಮಿಸಿ ಇಡೀ ಪ್ರದೇಶಕ್ಕೆ ಹೊಸತನದ ರೂಪುಕೊಟ್ಟಿರುವ ಇಲ್ಲಿ ಕಾವೇರಿ ನದಿಯ ದಂಡೆಯನ್ನು ಮಾತ್ರ ಸಂಪೂರ್ಣ ಕಸ ಹಾಗೂ ತ್ಯಾಜ್ಯಮಯ ಮಾಡಲಾಗಿದೆ.

ಇನ್ನಾದರೂ ಕೈಗಾರಿಕಾ ಬಡಾವಣೆಯ ಅಭಿವೃದ್ದಿ ಸಮಿತಿ, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಹಾಗೂ ಕೈಗಾರಿಕಾ ಇಲಾಖೆಯ ಅಧಿಕಾರಿಗಳು ಇತ್ತ ಗಮನ ಹರಿಸಿ ಈ ಕೈಗಾರಿಕಾ ಬಡಾವಣೆಯ ಕಾವೇರಿ ನದಿ ತೀರವನ್ನು ಸ್ವಚ್ಛಗೊಳಿಸಿ ಸೋಪಾನಕಟ್ಟೆ ನಿರ್ಮಿಸಿದರೆ ನದಿಯ ಪಾವಿತ್ರö್ಯತೆ ಹಾಗೂ ಸ್ವಚ್ಛತೆಗೆ ಇಂಬು ಕೊಟ್ಟಂತಾಗುತ್ತದೆ.

-ಕೆ.ಎಸ್. ಮೂರ್ತಿ