ಸುಂಟಿಕೊಪ್ಪ, ಫೆ. ೨೮: ಹಸುವೊಂದು ಮನೆಯ ಮೇಲೆ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ಚೆಟ್ಟಳ್ಳಿ ರಸ್ತೆಯ ಗಿರಿಯಪ್ಪ ಮನೆ ಎಂಬಲ್ಲಿ ತೋಟದಲ್ಲಿ ಮೇಯುತ್ತಿದ್ದ ಹಸುವೊಂದು ತೋಟದ ಕೆಳಗಿದ್ದ ವಸಂತ ಎಂಬವರ ಮನೆಯ ಶೀಟ್ ಮೇಲೆ ಬಿದ್ದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದೆ.

ಮನೆಯೊಳಗಿದ್ದ ವಸಂತ ಅವರ ಪುತ್ರಿ ಸುಕನ್ಯ ಎಂಬ ಬಾಲಕಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಹಸು ಬಿದ್ದ ರಭಸಕ್ಕೆ ಸಾಮಗ್ರಿಗಳು ಹಾನಿಗೊಳಗಾಗಿವೆ.