ಗೋಣಿಕೊಪ್ಪಲು, ಫೆ. ೨೮: ಗೊಣಿಕೊಪ್ಪಲುವಿನ ೪ನೇ ವಿಭಾಗದ ಪಟೇಲ್ ನಗರದ ಮುಖ್ಯ ರಸ್ತೆಯು ಹಾಳಾಗಿರುವುದನ್ನು ಮನಗಂಡ ಗ್ರಾಮ ಪಂಚಾಯಿತಿಯು ೪.೫೦ ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಯನ್ನು ಆರಂಭಿಸಿದೆ. ವಾರ್ಡ್ನ ಸದಸ್ಯರಾದ ಪಿ.ಜಿ.ರಾಜಶೇಖರ್, ಚೆಪ್ಪುಡೀರ ಧ್ಯಾನ್ ಸುಬ್ಬಯ್ಯ, ಹಾಗೂ ಸುಲೇಖಾ ಕಾಮಗಾರಿ ಪರಿಶೀಲನೆ ನಡೆಸಿದರು. ರಸ್ತೆ ಕಾಮಗಾರಿಯು ಪ್ರಗತಿಯಲ್ಲಿರುವುದರಿಂದ ಮಾರ್ಕೆಟ್ ರಸ್ತೆಯಿಂದ ಕಾಪ್ಸ್ ಶಾಲೆಯ ರಸ್ತೆಗೆ ತೆರಳುವ ವಾಹನಗಳು ಸದ್ಯದ ಮಟ್ಟಿಗೆ ಬದಲಿ ಮಾರ್ಗದಲ್ಲಿ ಸಂಚರಿಸುವAತೆ ಸದಸ್ಯರಾದ ರಾಜಶೇಖರ್ ತಿಳಿಸಿದ್ದಾರೆ.
ಹಲವಾರು ವರ್ಷಗಳಿಂದ ಈ ರಸ್ತೆಯು ದುರಸ್ಥಿಯಲ್ಲಿದ್ದು ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿತ್ತು. ಇದೀಗ ದೊಡ್ಡ ಮೊತ್ತದ ಹಣವನ್ನು ಈ ರಸ್ತೆಗೆ ಆದ್ಯತೆ ಮೇರೆ ಮೀಸಲಿಟ್ಟು ಕಾಮಗಾರಿ ನಡೆಸಲಾಗುತ್ತಿದೆ ಎಂದು ಸದಸ್ಯರಾದ ಧ್ಯಾನ್ ಸುಬ್ಬಯ್ಯ ತಿಳಿಸಿದರು. ಕೆಲವು ದಿನಗಳ ಮಟ್ಟಿಗೆ ವಾಹನ ಸಂಚಾರಕ್ಕೆ ಈ ರಸ್ತೆಯು ನಿಬಂಧವಿದೆ.