ಗೋಣಿಕೊಪ್ಪಲು, ಫೆ. ೨೮ : ನಿಟ್ಟೂರು ಕಾರ್ಮಾಡುವಿನ ವಿಜಯ ಗ್ರಾಮೀಣ ಯುವಕ ಸಂಘದ ವತಿಯಿಂದ ಮಾ.೧೯ ರಿಂದ ೨೧ರವರೆಗೆ ನಿಟ್ಟೂರು ಕಾರ್ಮಾಡು ಪ್ರಾಥಮಿಕ ಶಾಲಾ ಮೈದಾನದಲ್ಲಿ ಮುಕ್ತ ಕಾಲ್ಚೆಂಡು ಪಂದ್ಯಾಟವು ನಡೆಯಲಿದೆ ಎಂದು ಆಯೋಜಕರಾದ ಸಂತೋಷ್ ಪೂವಯ್ಯ ತಿಳಿಸಿದ್ದಾರೆ. ವಿಜೇತ ತಂಡಗಳಿಗೆ ನಗದು ಸೇರಿದಂತೆ ಬಹುಮಾನಗಳನ್ನು ನೀಡಲಾಗುತ್ತದೆ. ಗ್ರಾಮೀಣ ಭಾಗದಲ್ಲಿ ನಡೆಯುವ ಕ್ರೀಡಾ ಕೂಟದಲ್ಲಿ ಭಾಗವಹಿಸುವ ತಂಡಗಳು ೮೧೦೫೨೭೬೩೦೨ ಹಾಗೂ ೭೦೨೨೩೫೫೬೧೦ ಇವರನ್ನು ಸಂಪರ್ಕಿಸಬಹುದಾಗಿದೆ.