ಮಡಿಕೇರಿ, ಫೆ. ೨೫: ಇಂಧನ ಹಾಗೂ ಬಿಡಿ ಭಾಗಗಳ ಬೆಲೆ ಏರಿಕೆ ಖಂಡಿಸಿ ತಾ. ೨೬ ರಂದು ನಡೆಯುವ ಲಾರಿ ಮುಷ್ಕರಕ್ಕೆ ಮಡಿಕೇರಿ ತಾಲೂಕು ಲಾರಿ ಮಾಲೀಕರ ಮತ್ತು ಚಾಲಕರ ಸಂಘ ಬೆಂಬಲ ವ್ಯಕ್ತಪಡಿಸಿದೆ.
ದಿನನಿತ್ಯ ಏರುತ್ತಿರುವ ಇಂಧನದ ಬೆಲೆ ಏರಿಕೆಯಿಂದಾಗಿ ಬಹಳಷ್ಟು ಸಮಸ್ಯೆ ಎದುರಾಗುತ್ತಿದ್ದು, ಜೀವನ ನಡೆಸಲು ಬಹಳ ಕಷ್ಟವಾಗುತ್ತಿದೆ. ಲಾರಿಯನ್ನೇ ನಂಬಿ ಬದುಕುತ್ತಿರುವ ನಾವುಗಳು ಇತ್ತೀಚಿನ ದಿನಗಳಲ್ಲಿ ವ್ಯವಹಾರ ನಡೆಸಲು ಕಷ್ಟವಾಗುತ್ತಿದೆ. ಇಂಧನದ ಬೆಲೆ ಏರಿಕೆ ಹಾಗೂ ಬಿಡಿ ಭಾಗಗಳ ಬೆಲೆ ಏರಿಕೆಯನ್ನು ಖಂಡಿಸಿ ರಾಷ್ಟçವ್ಯಾಪ್ತಿ ನಡೆಯುತ್ತಿರುವ ಲಾರಿ ಮುಷ್ಕರಕ್ಕೆ ಮಡಿಕೇರಿಯ ಲಾರಿ ಮಾಲೀಕರ ಹಾಗೂ ಚಾಲಕರ ಸಂಘದ ವತಿಯಿಂದ ಸಂಪೂರ್ಣ ಬೆಂಬಲವನ್ನು ನೀಡುವುದಾಗಿ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.