ಮಡಿಕೇರಿ, ಫೆ. ೨೫: ಕೋವಿಡ್ ಲಸಿಕಾ ಅಭಿಯಾನ ಸಂಬAಧ ಜಿಲ್ಲೆಯಲ್ಲಿ ೬೫೬೦ ಗುರಿಯಲ್ಲಿ ೪೭೩೬ ಮಂದಿ ಕೋವಿಡ್ ಲಸಿಕೆ ಪಡೆದು ಶೇ.೭೨.೨ ರಷ್ಟು ಸಾಧನೆ ಮಾಡಲಾಗಿದೆ. ಎರಡನೇ ಹಂತದಲ್ಲಿ ೩೭೭೬ ಮಂದಿ ಲಸಿಕೆ ಪಡೆದಿದ್ದಾರೆ. ಹಾಗೆಯೇ ಫ್ರೆಂಟ್ ಲೈನ್ ವರ್ಕಸ್ ಸಂಬAಧಿಸಿದAತೆ ೩೧೨೬ ಗುರಿಯಲ್ಲಿ ೧೬೪೭ ಮಂದಿ ಕೋವಿಡ್ ಲಸಿಕೆ ಪಡೆದು ಶೇ. ೫೨.೬೯ ರಷ್ಟು ಸಾಧನೆ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ. ಮೋಹನ್ ತಿಳಿಸಿದ್ದಾರೆ.