ಕುಶಾಲನಗರ, ಫೆ. ೨೪: ಕುಶಾಲನಗರದಲ್ಲಿ ನಿನ್ನೆ ಸುರಿದ ಭಾರೀ ಗಾಳಿ ಮಳೆಯಿಂದ ಕೆಲವೆಡೆ ಹಾನಿ ಉಂಟಾದ ಬಗ್ಗೆ ವರದಿಯಾಗಿದೆ. ಒಂದು ಘಂಟೆ ಕಾಲ ಸುರಿದ ಮಳೆಯಿಂದ ಚರಂಡಿ ತುಂಬಿ ಹೆದ್ದಾರಿ ಮೇಲೆ ನೀರು ಹರಿದು ವಾಣಿಜ್ಯ ಮಳಿಗೆಗಳು ಜಲಾವೃತಗೊಂಡ ದೃಶ್ಯ ಕಂಡುಬAದಿತು.

ಮೈಸೂರು ರಸ್ತೆಯ ಅರಣ್ಯ ತಪಾಸಣಾ ಗೇಟ್ ಬಳಿ ಚರಂಡಿ ನೀರು ಅಲ್ಲಿನ ಟಾಪ್ ಇನ್ ಹೊಟೇಲ್ ಆವರಣಕ್ಕೆ ನುಗ್ಗಿ ಆವರಣ ಗೋಡೆ ಕುಸಿದು ಕಟ್ಟಡಕ್ಕೆ ಹಾನಿ ಉಂಟಾಗಿದೆ. ಗೋಡೆ ಕುಸಿದು ಕೆಳ ಅಂತಸ್ತಿನ ಕಿಟಕಿ ಬಾಗಿಲು ಮೇಲೆ ಬಿದ್ದು ಹೆಚ್ಚಿನ ನಷ್ಟ ಉಂಟಾಗಿದೆ ಎಂದು ಹೊಟೇಲ್ ಮಾಲೀಕ ಬಾಲು ತಿಳಿಸಿದ್ದಾರೆ. ಅಂದಾಜು ರೂ. ಒಂದು ಲಕ್ಷಕ್ಕೂ ಹೆಚ್ಚಿನ ಪ್ರಮಾಣದ ಹಾನಿ ಉಂಟಾಗಿದೆ ಎಂದು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಗಾಳಿ ಮಳೆಯ ರಭಸಕ್ಕೆ ಕುಶಾಲನಗರ ಪ್ರವಾಸಿ ಮಂದಿರ ಬಳಿ ಮರದ ಕೊಂಬೆಗಳು ರಸ್ತೆಗೆ ಅಡ್ಡಲಾಗಿ ಬಿದ್ದು ಸ್ವಲ್ಪ ಕಾಲ ವಾಹನ ಸಂಚಾರಕ್ಕೆ ತೊಡಕುಂಟಾಯಿತು. ಹಲವೆಡೆ ವ್ಯಾಪಾರ ಮಳಿಗೆಗಳ ಫಲಕಗಳು ಹಾರಿ ಹೋಗಿರುವ ದೃಶ್ಯ ಕಂಡುಬAತು.