
ಸೋಮವಾರಪೇಟೆ, ಫೆ. ೨೪: ತಾಲೂಕು ಪಂಚಾಯಿತಿಗೆ ಸರ್ಕಾರದ ಗ್ರಾಮೀಣಾಭಿವೃದ್ಧಿ ಇಲಾಖೆ ಮೂಲಕ ಹೆಚ್ಚುವರಿಯಾಗಿ ಬಿಡುಗಡೆಯಾಗಿರುವ ರೂ. ೩೨.೨೫ ಲಕ್ಷ ಅನುದಾನಕ್ಕೆ ಸಾಮಾನ್ಯ ಸಭೆಯಲ್ಲಿ ಕ್ರಿಯಾಯೋಜನೆ ತಯಾರಿಸಲಾಯಿತು.ತಾ.ಪಂ. ಸಭಾಂಗಣದಲ್ಲಿ ಅಧ್ಯಕ್ಷೆ ಪುಷ್ಪಾ ರಾಜೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ವಿವಿಧ ಕಾಮಗಾರಿಗಳಿಗೆ ಅನುದಾನ ಮೀಸಲಿಟ್ಟು, ಕ್ರಿಯಾಯೋಜನೆ ತಯಾರಿಸಿ, ಮುಂದಿನ ಕ್ರಮಕ್ಕಾಗಿ ಜಿ.ಪಂ.ಗೆ ಸಲ್ಲಿಸಲು ಕ್ರಮವಹಿಸ ಲಾಯಿತು.ಈ ಹಿಂದೆ ತಾ.ಪಂ. ಅನಿರ್ಬಂಧಿತ ಅನುದಾನ ರೂ. ೧.೫೦ ಕೋಟಿಗೆ ನಿಗದಿಯಾಗಿತ್ತು. ಇದೀಗ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಹೆಚ್ಚುವರಿಯಾಗಿ ರೂ. ೩೨.೨೫ಲಕ್ಷ ಬಿಡುಗಡೆಯಾಗಿದ್ದು, ಇದಕ್ಕೆ ಸಂಬAಧಪಟ್ಟAತೆ ವಿಶೇಷ ಸಾಮಾನ್ಯ ಸಭೆ ನಡೆಯಿತು.ಸಭೆಯಲ್ಲಿ ಭಾಗಿಯಾಗಿದ್ದ ಸದಸ್ಯರು ತಮ್ಮ ಕ್ಷೇತ್ರಗಳಿಗೆ ಸಂಬAಧಿಸಿದAತೆ ಆಗಬೇಕಿರುವ ಕಾಮಗಾರಿಗಳ ಪಟ್ಟಿ ನೀಡಿ, ರೂ. ೩೨.೨೫ ಲಕ್ಷಕ್ಕೆ ಕ್ರಿಯಾಯೋಜನೆ ತಯಾರು ಮಾಡಿ ಅನುಮೋದನೆಗಾಗಿ ಜಿ.ಪಂ.ಗೆ ಕಳುಹಿಸಲು ಕ್ರಮ ಕೈಗೊಳ್ಳಲಾಯಿತು.ಮಾರ್ಚ್ ತಿಂಗಳ ಒಳಗೆ ಕಾಮಗಾರಿಯನ್ನು ಪೂರೈಸಿ ಅನುದಾನವನ್ನು ಬಳಕೆ ಮಾಡಿ ಕೊಳ್ಳಬೇಕಿದ್ದು,
(ಮೊದಲ ಪುಟದಿಂದ) ಶೀಘ್ರಗತಿಯಲ್ಲಿ ಕ್ರಮವಹಿಸುವಂತೆ ಅಧ್ಯಕ್ಷೆ ಪುಷ್ಪಾ ರಾಜೇಶ್ ಸೂಚಿಸಿದರು. ಇದೀಗ ಬಿಡುಗಡೆಯಾಗಿರುವ ರೂ. ೩೨.೨೫ ಲಕ್ಷದಲ್ಲಿ ಸರ್ಕಾರದ ನಿಯಮಾವಳಿ ಪ್ರಕಾರ ಶೇ. ೫ರಷ್ಟು ವಿಕಲಚೇತನರ ಕಲ್ಯಾಣ ಕಾರ್ಯಕ್ರಮ, ಶೇ. ೧೯ರಷ್ಟು ಎಸ್‌ಸಿಪಿ, ಶೇ.೬ ಟಿಎಸ್‌ಪಿ, ಶೇ ೨೦ರಷ್ಟು ರಸ್ತೆ, ಶೇ. ೫೦ರಷ್ಟು ಕುಡಿಯುವ ನೀರು ಮತ್ತು ನೈರ್ಮಲ್ಯ ಹಾಗೂ ಮೂಲಭೂತ ಸೌಕರ್ಯ ನಿರ್ಮಾಣಕ್ಕೆ ಮೀಸಲಿಟ್ಟು, ಕಾಮಗಾರಿಗಳನ್ನು ಆಯ್ಕೆ ಮಾಡಲಾಯಿತು.
ಸಭೆಯ ವೇದಿಕೆಯಲ್ಲಿ ಉಪಾಧ್ಯಕ್ಷ ಅಭಿಮನ್ಯುಕುಮಾರ್, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ವಿಜು ಚಂಗಪ್ಪ, ಕಾರ್ಯನಿರ್ವಹಣಾಧಿಕಾರಿ ಬಿ.ವಿ. ಜಯಣ್ಣ ಉಪಸ್ಥಿತರಿದ್ದರು. ಸದಸ್ಯೆ ಸುಹಾದ ಅಶ್ರಫ್ ಹೊರತುಪಡಿಸಿ ಉಳಿದಂತೆ ಎಲ್ಲಾ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.