ಮಡಿಕೇರಿ, ಫೆ. ೨೩: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಮಡಿಕೇರಿಯ ಕೊಡಗು ಗೌಡ ಮಹಿಳಾ ಒಕ್ಕೂಟದ ಸಭಾಂಗಣದಲ್ಲಿ ೭ ದಿನಗಳ ಅರೆಭಾಷೆ ಸಂಸ್ಕೃತಿ ಶಿಬಿರಕ್ಕೆ ಚಾಲನೆ ದೊರೆಯಿತು.

ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅಂಬೆಕಲ್ ಸುಶೀಲ ಕುಶಾಲಪ್ಪ ಅವರು, ಅಕಾಡೆಮಿಯ ಈ ಕಾರ್ಯಕ್ರಮವು ಯಶಸ್ವಿಯಾಗಲಿ; ಇಂದಿನ ಯುವಪೀಳಿಗೆ ಸಂಸ್ಕೃತಿಯ ಬಗ್ಗೆ ತಾತ್ಸಾರ ಮನೋಭಾವವನ್ನು ಬಿಟ್ಟು ಸಂಸ್ಕೃತಿಯ ಉಳಿವಿನ ಬಗ್ಗೆ ಗಮನ ಹರಿಸಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಕಾಡೆಮಿ ಅಧ್ಯಕ್ಷ ಲಕ್ಷಿö್ಮÃನಾರಾಯಣ ಕಜೆಗದ್ದೆ ಅವರು ಆಯಾಯ ಜನಾಂಗದವರು ಅವರವರ ಸಂಸ್ಕೃತಿಯನ್ನು ಸಂರಕ್ಷಿಸುವ ಅನಿವಾರ್ಯತೆ ಇದೆ; ಸಂಸ್ಕೃತಿ ಸಂರಕ್ಷಿಸುವ ಕಾರ್ಯವನ್ನು ಪರಂಪರೆಯ ಮೂಲಕ ಬಂದಿರುವ ಅದೇ ಜನಾಂಗದವರು ಮಾಡಬೇಕಾದ ಕೆಲಸವಾಗಿರುತ್ತದೆ. ಈ ನಿಟ್ಟಿನಲ್ಲಿ ಅರೆಭಾಷೆಜನಾಂಗ ತಮ್ಮ ಆಚಾರ-ವಿಚಾರಗಳಲ್ಲಿ ಹಿಂದಿನಿAದಲೂ ರೂಢಿಸಿಕೊಂಡು ಬಂದಿರುವ ಸಂಸ್ಕೃತಿಯನ್ನು ಇಂದಿನ ಯುವಪೀಳಿಗೆಗೆ ತಿಳಿಸಿಹೇಳುವ ಅಗತ್ಯವಿದೆ. ಯುವಪೀಳಿಗೆಗೆ ಇಂತಹ ಶಿಬಿರಗಳನ್ನು ಏರ್ಪಡಿಸಲಾಗುತ್ತಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಶಿಬಿರದಲ್ಲಿ ಹಲವು ಮಹಿಳೆಯರು ಪಾಲ್ಗೊಂಡಿದ್ದು, ಅರೆಭಾಷೆ ಸೋಬಾನೆ, ಮದುವೆಯಲ್ಲಿ ಹೆಣ್ಣು-ಗಂಡು ವಹಿಸಿಕೊಡುವುದು, ಹುಟ್ಟಿನಿಂದ ಸಾವಿನವರೆಗೆ ಆಚರಿಸಲ್ಪಡುವ ಸಂಸ್ಕೃತಿಯ ಆಚರಣೆಯ ಬಗ್ಗೆ ತರಬೇತಿ ನೀಡಲಾಗುವುದು.

ಕಡ್ಲೇರ ಆಶಾ ಧರ್ಮಪಾಲ್ ಸ್ವಾಗತಿಸಿ, ನಿರೂಪಿಸಿದರು. ಅಕಾಡೆಮಿ ಸದಸ್ಯ ಧನಂಜಯ್ ಅಗೋಳಿಕಜೆ ವಂದಿಸಿದರು. ಸದಸ್ಯ ಸಂಚಾಲಕ ಪ್ರೇಮರಾಘವಯ್ಯ ಮತ್ತು ಬೈತಡ್ಕ ಜಾನಕಿಬೆಳ್ಯಪ್ಪ ಉಪಸ್ಥಿತರಿದ್ದರು.