ಕರಿಕೆ,ಫೆ. ೨೨: ಬಿಸಿಲಿನ ತಾಪ ಏರಿಕೆಯಾಗುತ್ತಿದ್ದು, ರಾಷ್ಟಿçÃಯ ಉದ್ಯಾನವನ, ವನ್ಯಧಾಮ ಹಾಗೂ ಇತರೆ ಅರಣ್ಯ ಚೆಕ್‌ಪೋಸ್ಟ್ ಮೂಲಕ ಕೊಡಗಿಗೆ ಆಗಮಿಸುವ ಪ್ರವಾಸಿಗರ ಮೇಲೆ ನಿಗಾ ವಹಿಸಿ ಅರಣ್ಯ ಗಸ್ತು ಹೆಚ್ಚಿಸುವಂತೆ ರಾಜ್ಯ ಪಶ್ಚಿಮ ಘಟ್ಟಗಳ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿಕುಶಾಲಪ್ಪ ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈ ಬಗ್ಗೆ ಮಾದ್ಯಮಕ್ಕೆ ಹೇಳಿಕೆ ನೀಡಿರುವ ಅವರು, ಇದೀಗ ಬಿಸಿಲಿನ ತಾಪಮಾನ ಏರಿಕೆಯಾಗಿದ್ದು, ಕಾಡ್ಗಿಚ್ಚು ಸಂಭವಿಸುವ ಸಾಧ್ಯತೆ ಇದೆ. ಕೇರಳ ದಿಂದ ಮಾನಂದವಾಡಿ ಮಾರ್ಗವಾಗಿ ಕುಟ್ಟ, ಮಾಕುಟ್ಟ, ಕರಿಕೆ, ಆನೆ ಚೌಕೂರು, ಕೊಪ್ಪ ಚೆಕ್‌ಪೋಸ್ಟ್ಗಳ ಮೂಲಕ ಕೊಡಗಿಗೆ ಕೇರಳದಿಂದ ಪ್ರವಾಸಿಗರು ಹೆಚ್ಚಾಗಿ ಆಗಮಿಸುತ್ತಿದ್ದು ಅರಣ್ಯದೊಳಗೆ ಹಾದು ಹೋಗುವ ರಸ್ತೆ ಬದಿಯಲ್ಲಿ ಅಡುಗೆ ಮಾಡಿ ಪಾನ ಮತ್ತರಾಗಿ ಕೂಗಾಟ ಚೀರಾಟ ನಡೆಸುವುದರಿಂದ ವನ್ಯಜೀವಿಗಳ ವಾಸÀಕ್ಕೆ ಧಕ್ಕೆಯಾಗುತ್ತಿರುವುದಲ್ಲದೆ, ಕಾಡ್ಗಿಚ್ಚು ಉಂಟಾಗುವ ಸಾದ್ಯತೆ ಹೆಚ್ಚಾಗಿದೆ ಮಾತ್ರವಲ್ಲದೆ ಕೊರೊನಾ ವೈರಸ್ ಆತಂಕ ಎದುರಾಗಿದ್ದು ಈ ಬಗ್ಗೆ ಸಿಬ್ಬಂದಿಗಳ ಗಸ್ತು ಹೆಚ್ಚಿಸಿ ಜಾಗ್ರತೆ ವಹಿಸುವ ಅಗತ್ಯವಿದೆ.

ಅರಣ್ಯದಂಚಿನನಲ್ಲಿ ನುರಿತ ಪ್ರಭಾವಿ ಬೇಟೆಗಾರರ ತಂಡ ಬೇಟೆಯಾಡಿ ಮಾಂಸವನ್ನು ಮಾರಾಟ ಮಾಡುವ ದಂಧೆ ನಡೆಸುತ್ತಿದೆ. ಈ ಬಗ್ಗೆ ಸಾರ್ವಜನಿಕ ದೂರು ಕೇಳಿಬಂದಿದ್ದು, ಇಂತಹ ದಂಧೆಯನ್ನು ಮಟ್ಟ ಹಾಕಲು ಅರಣ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕಾಗಿದೆ ಎಂದರು.ಈ ಹಿನ್ನಲೆಯಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲು ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದು, ಮುಂಬರುವ ದಿನಗಳಲ್ಲಿ ಅರಣ್ಯ, ವನ್ಯ ಪ್ರಾಣಿಗಳು, ನದಿ ಸಂರಕ್ಷಣೆಯ ಅಗತ್ಯತೆ ಬಗ್ಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.