ಸೋಮವಾರಪೇಟೆ,ಫೆ.೨೨: ಬೆಂಗಳೂರಿನಲ್ಲಿ ತಾ. ೨೩ರಂದು (ಇಂದು) ನಡೆಯುವ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಪ್ರತಿಭಟನಾ ಸಭೆ ಹಿನ್ನೆಲೆ, ಜಿಲ್ಲೆಯ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಿಗೆ ತಾ. ೨೩ರಂದು (ಇಂದು) ರಜೆ ನೀಡಲಾಗಿದೆ ಎಂದು ಸಂಸ್ಥೆಯ ಜಿಲ್ಲಾ ಪ್ರತಿನಿಧಿ ಡಿ. ಸುಜಲಾದೇವಿ ಹಾಗೂ ತಾಲೂಕು ಅಧ್ಯಕ್ಷ ದಾಮೋಧರ್ ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.