ವೀರಾಜಪೇಟೆ, ಫೆ. ೨೨: ನಗರದಲ್ಲಿ ಅಕ್ರಮವಾಗಿ ಲಾಟರಿ ಮಾಡುತ್ತಿದ್ದ ಕೇರಳ ರಾಜ್ಯದ ವ್ಯಕ್ತಿಯನ್ನು ವೀರಾಜಪೇಟೆ ನಗರ ಪೊಲೀಸರು ಬಂಧಿಸಿದ್ದಾರೆ.

ಕೇರಳ ರಾಜ್ಯದ ತಲಚೆೆÃರಿ ಜಿಲ್ಲೆ ನಿವಾಸಿ ಕಣ್ಣನ್ (೪೮) ಬಂಧಿತನಾದ ವ್ಯಕ್ತಿ. ಕಣ್ಣನ್ ಬಟ್ಟೆ ವ್ಯಾಪಾರಿಯಾಗಿದ್ದು, ನಗರದಲ್ಲಿ ದಿನನಿತ್ಯ ಬಟ್ಟೆ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸಿಕೊಂಡಿದ್ದ. ಲಾಟರಿ ಗೀಳಿಗೆ ಬೆಸುಗೆ ಮಾಡಿಕೊಂಡು ದಿನನಿತ್ಯದ ವ್ಯವಹಾರದಲ್ಲಿ ಲಾಟರಿ ಸೇರ್ಪಡೆಗೊಂಡಿತ್ತು . ನಗರ ಪೊಲೀಸ್ ಠಾಣೆಗೆ ಬಂದ ಮಾಹಿತಿ ಮೇರೆಗೆ ನಗರದ ಮೀನುಪೇಟೆಯಲ್ಲಿ ದಾಳಿ ನಡೆಸಿದ ಪೊಲೀಸರು ಲಾಟರಿ ಮಾರಾಟದಲ್ಲಿ ತೊಡಗಿದ್ದ ಕಣ್ಣನ್‌ನನ್ನು ಬಂಧಿಸಿ ಕೇರಳ ರಾಜ್ಯದ ೧೬೪೯ ರೂ. ಮೊತ್ತದ ಲಾಟರಿ ಟಿಕೆಟ್ ವಶಕ್ಕೆ ಪಡೆದಿದ್ದಾರೆ. ಬಂಧಿತನ ಮೇಲೆ ವೀರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವೀರಾಜಪೇಟೆ ಉಪವಿಭಾಗ ಡಿವೈಎಸ್ಪಿ ಸಿ.ಟಿ.ಜಯಕುಮಾರ್ ಮಾರ್ಗದರ್ಶನದಲ್ಲಿ ವೃತ್ತನಿರೀಕ್ಷಕ ಶ್ರೀಧರ್ ಅವರ ನೇತೃತ್ವದಲ್ಲಿ ನಗರ ಠಾಣಾಧಿಕಾರಿ ಜಗದೀಶ್ ಧೂಳ ಶೆಟ್ಟಿ, ಸಿಬ್ಬಂದಿಗಳಾದ ಮುಸ್ತಫಾ, ಗಿರೀಶ್, ಮಧು ಲೋಕೇಶ್ ಮತ್ತು ಇತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

-ಕೆ.ಕೆ.ಎಸ್.