ವೀರಾಜಪೇಟೆ, ಫೆ ೨೨: ವಾಹನವೊಂದು ಕಾರಿಗೆ ಡಿಕ್ಕಿಪಡಿಸಿದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವರಿಗೆ ಗಂಭೀರ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ವೀರಾಜಪೇಟೆ ಕೆದಮುಳ್ಳೂರು ಗ್ರಾಮದ ನಿವಾಸಿ ಹೊಸೊಕ್ಲು ಯೋಗೇಶ್ (೫೩) ವಾಹನ ಅಪಘಾತದಿಂದ ಗಂಭೀರ ಸ್ವ್ಪರೂಪದ ಗಾಯಗಳಾಗಿ ಆಸ್ಪತ್ರೆಗೆ ದಾಖಲಾದ ವ್ಯಕ್ತಿ. ನಿನ್ನೆ ಸಂಜೆ ಯೋಗೇಶ್, ಸ್ನೇಹಿತರಾದ ಆಕಾಶ್, ನಂದಾ, ಮಂಜು ಅವರೊಂದಿಗೆ ತನ್ನ ಮಾರುತಿ ಅಲ್ಟೋ (ಕೆಎ-೧೨ಪಿ-೪೨೧೩) ಕಾರಿನಲ್ಲಿ ವೀರಾಜಪೇಟೆ ನಗರದಲ್ಲಿ ನಡೆಯುತ್ತಿರುವ ಕಬಡ್ಡಿ ಪಂದ್ಯಾಟದ ವೀಕ್ಷಣೆಗೆಂದು ನಗರಕ್ಕೆ ಆಗಮಿಸುತ್ತಿರುವ ವೇಳೆ ೭.೩೦ ಕ್ಕೆ ಗೋಲ್ಡನ್ ರಾಕ್ಸ್ ಕ್ರಸ್ಸರ್ ಬಳಿ ಎದುರಿನಿಂದ ಎಕ್ಸುö್ಯವಿ ಮಹೇಂದ್ರ (ಕೆಎ-೦೩ಎಂಕ್ಯು ೦೫೩೧) ವಾಹನವು ಡಿಕ್ಕಿಪಡಿಸಿ ವೇಗವಾಗಿ ಮುಂದಕ್ಕೆ ಸಾಗಿದೆ. ಡಿಕ್ಕಿಪಡಿಸಿದ ವಾಹನವನ್ನು ತಡೆದು ನಿಲ್ಲಿಸಲು ಯೋಗೇಶ್ ಮತ್ತು ಸಂಗಡಿಗರು ವಾಹನದಲ್ಲಿ ಹಿಂಬಾಲಿಸಿದ್ದಾರೆ. ಅನತಿ ದೂರದಲ್ಲಿ ತಮ್ಮ ವಾಹನವನ್ನು ನಿಲುಗಡೆಗೊಳಿಸಿ ವಾಹನ ಬರುವಿಕೆಗಾಗಿ ಕಾದುಕುಳಿತಿದ್ದಾರೆ. ಯೋಗೇಶ್ ರಸ್ತೆಯಲ್ಲಿ ನಿಂತು ಡಿಕ್ಕಿಪಡಿಸಿದ ವಾಹನವನ್ನು ನಿಲ್ಲಿಸಲು ಮತ್ತು ಮಾತನಾಡಲು ಮುಂದಾದ ವೇಳೆಯಲ್ಲಿ ಏಕಾಏಕಿಯಾಗಿ ಎಕ್ಸುö್ಯವಿ ವಾಹನ ಯೋಗೇಶ್‌ಗೆ ಡಿಕ್ಕಿ ಪಡಿಸಿ ವೇಗವಾಗಿ ಮುಂದೆ ಸಾಗಿದೆ. ಪರಿಣಾಮ ಯೋಗೇಶ್‌ನ ತಲೆ ಭಾಗಕ್ಕೆ ಮಾರಣಾಂತಿಕ ಗಾಯಗಳಾಗಿವೆ. ಎಡಕಾಲಿನ ಮೂಳೆ ಮುರಿದಿದೆ. ತಕ್ಷಣವೇ ಕಾರಿನಲ್ಲಿದ್ದ ಸ್ನೇಹಿತರು ದೂರವಾಣಿ ಕರೆ ಮಾಡಿ ಯೋಗೇಶ್ ಅಣ್ಣ ಸುಗುಣ ಎಂಬವರಿಗೆ ಮಾಹಿತಿ ನೀಡಿದ್ದಾರೆ. ಗಾಯಾಳುವಿಗೆ ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಪ್ರಥಮ ಚಿಕಿತ್ಸೆಯ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆÀ ದಾಖಲಾಗಿದ್ದಾರೆ. ಪ್ರಕರಣಕ್ಕೆ ಸಂಬAಧಿಸಿದAತೆ ಕಾರಿನಲ್ಲಿದ್ದ ಗಾಯಾಳುವಿನ ಸ್ನೇಹಿತ ಆಕಾಶ್ ನೀಡಿದ ದೂರಿನ ಮೇರೆಗೆ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವಾಹನ ಚಾಲಕ ಮೈಸೂರಿನ ಪ್ರಶಾಂತ್ ಎಂಬಾತನ ಮೇಲೆ ಐ.ಪಿ.ಸಿ ೧೮೬೦ರ (ಅಡಿಯಲ್ಲಿ ೨೭೯/೩೩೭) ಪ್ರಕರಣ ದಾಖಲಿಸಿಕೊಂಡು ಅಪಘಾತ ಮಾಡಿರುವ ವಾಹನವನ್ನು ವಶಕ್ಕೆ ಪಡೆದಿದ್ದಾರೆ.

-ಕೆ.ಕೆ.ಎಸ್.

ನಿರ್ದೇಶಕರು, ಮಡಿಕೇರಿ, ವೀರಾಜಪೇಟೆ, ಸೋಮವಾರಪೇಟೆ ಆರಕ್ಷಕ ಉಪಾಧೀಕ್ಷಕರು, ಸಂಬAಧಪಟ್ಟ ಕಾರ್ಯವ್ಯಾಪ್ತಿಯ ಗ್ರಾಮೀಣ, ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಜಿಲ್ಲೆಯ ಎಲ್ಲಾ ಹೋಟೆಲ್, ರೆಸಾರ್ಟ್, ಹೋಂ ಸ್ಟೇ ಲಾಡ್ಜ್ ಮುಂತಾದವುಗಳಿಗೆ ವಸತಿ ಸೌಕರ್ಯಕ್ಕಾಗಿ ಆಗಮಿಸುವವರು ಕನಿಷ್ಟ ೭೨ ಗಂಟೆಗಳ ಒಳಗೆ ಪಡೆದಿರುವ ಆರ್‌ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ನ್ನು ಹೊಂದಿರುವ ಬಗ್ಗೆ ಸಂಬAಧಪಟ್ಟ ಮಳಿಗೆಗಳ ಮಾಲೀಕರು ಅಥವಾ ವ್ಯವಸ್ಥಾಪಕರು ಖಚಿತ ಪಡಿಸಿಕೊಳ್ಳುವುದು.

ಈ ಬಗ್ಗೆ ಸ್ಥಳೀಯ ಕಾರ್ಯ ವ್ಯಾಪ್ತಿಯ ಕಂದಾಯ, ಗ್ರಾಮ ಪಂಚಾಯತ್ ಆರಕ್ಷಕ ಇಲಾಖೆಯ ಸಿಬ್ಬಂದಿಗಳನ್ನು ಒಳಗೊಂಡ ತಂಡ ರಚಿಸಿ, ಅನಿರೀಕ್ಷಿತ ಭೇಟಿ ನೀಡಿ, ತಪಾಸಣೆ ಕೈಗೊಂಡು, ಆದೇಶ ಪಾಲನೆಯಾಗಿರುವ ಬಗ್ಗೆ ಖಚಿತ ಪಡಿಸಿಕೊಳ್ಳುವುದು.

ಮಡಿಕೇರಿ ಅಬಕಾರಿ ಉಪಾಯುಕ್ತರು, ಮಡಿಕೇರಿ, ವೀರಾಜಪೇಟೆ ಮತ್ತು ಸೋಮವಾರಪೇಟೆ ಆರಕ್ಷಕ ಉಪಾಧೀಕ್ಷಕರು, ಸಂಬAಧಪಟ್ಟ ಕಾರ್ಯ ವ್ಯಾಪ್ತಿಯ ಗ್ರಾಮೀಣ, ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಕೇರಳ ರಾಜ್ಯದ ಗಡಿಭಾಗಗಳಲ್ಲಿನ ಜಿಲ್ಲೆಗೆ ಸೇರಿದ ಪ್ರದೇಶಗಳಲ್ಲಿರುವ ಬಾರ್ ಮತ್ತು ರೆಸ್ಟೋರೆಂಟ್, ಸ್ಟಾರ್ ಹೋಟೆಲ್ ಮುಂತಾದವುಗಳಿಗೆ ಆತಿಥ್ಯಕ್ಕಾಗಿ ಕೇರಳ ರಾಜ್ಯದಿಂದ ಸಾರ್ವಜನಿಕರು ಆಗಮಿಸುತ್ತಿದ್ದಲ್ಲಿ, ಅಂತಹ ಮಳಿಗೆಗಳ ಮಾಲೀಕರು ಅಥವಾ ವ್ಯವಸ್ಥಾಪಕರು ಗಮನಹರಿಸಿ ಆಗಮಿಸುವವರು ಕಡ್ಡಾಯವಾಗಿ ಕನಿಷ್ಟ ೭೨ ಗಂಟೆಗಳ ಒಳಗೆ ಪಡೆದಿರುವ ಆರ್‌ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ನ್ನು ಹೊಂದಿರುವ ಬಗ್ಗೆ ಖಚಿತ

ಕೋವಿಡ್ ೧೯ : ಜಿಲ್ಲೆಯ ಗಡಿಭಾಗದ ಪ್ರದೇಶದಲ್ಲಿ ಕಟ್ಟೆಚ್ಚರ

ಮಡಿಕೇರಿ, ಫೆ.೨೨: ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಕೊರೊನಾ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲೆಗೆ ಹೊಂದಿಕೊAಡಿರುವ ನೆರೆಯ ರಾಜ್ಯದಲ್ಲಿ ಕೋವಿಡ್-೧೯ ಸೋಂಕಿತ ಪ್ರಕರಣಗಳು ಹೆಚ್ಚುತ್ತಿದ್ದು, ಕೊಡಗು ಜಿಲ್ಲೆಯ ಗಡಿಭಾಗದ ಜಿಲ್ಲೆಗೆ ಸೇರಿದ ಪ್ರದೇಶಗಳಲ್ಲಿ ಸೋಂಕಿತ ಪ್ರಕರಣಗಳು ಏರಿಕೆಯಾಗುತ್ತಿದೆ.

ಈ ಸಂಬAಧ ಮುಂಜಾಗ್ರತಾ ಕ್ರಮವಾಗಿ ಕೊಡಗು ಜಿಲ್ಲೆಗೆ ನೆರೆಯ ರಾಜ್ಯವಾದ ಕೇರಳದಿಂದ ಜಿಲ್ಲೆಯ ಗಡಿ ಭಾಗಗಳಾದ ಕುಟ್ಟ, ಮಾಕುಟ್ಟ, ಪೆರುಂಬಾಡಿ, ಕರಿಕೆ, ಕುಶಾಲನಗರ ಮತ್ತು ಸಂಪಾಜೆ ಚೆಕ್‌ಪೋಸ್ಟ್ಗಳ ಮುಖಾಂತರ ಇತರ ಎಲ್ಲಾ ಮಾರ್ಗ ಗಳ ಮೂಲಕ ಆಗಮಿಸುವವರು ಕಡ್ಡಾಯವಾಗಿ ೭೨ ಗಂಟೆಗಳ ಒಳಗಿನ ಕೋವಿಡ್-೧೯ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಹೊಂದಿರುವುದನ್ನು ಪರಿಶೀಲಿಸುವುದು ಸೂಕ್ತವೆಂದು ಕಂಡುಬAದ ಕಾರಣ ಆದೇಶ ಹೊರಡಿಸಲಾಗಿದೆ. ಈ ಕಾರ್ಯದ ಸಂಬAಧ ಕಾರ್ಯಗಳನ್ನು ನಿರ್ವಹಿಸಲು ಸಂಬAಧಪಟ್ಟ ಇಲಾಖಾಧಿಕಾರಿಗಳಿಗೆ ಆದೇಶಿಸಲಾಗಿದೆ.

ಮಡಿಕೇರಿ, ವೀರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿ ಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಪ್ರಾದೇಶಿಕ ಸಾರಿಗೆ ಅಧಿಕಾರಿ, ಮಡಿಕೇರಿ ಮತ್ತು ವೀರಾಜಪೇಟೆ, ಸೋಮವಾರಪೇಟೆ ತಹಶೀಲ್ದಾರರು, ಮಡಿಕೇರಿ, ವೀರಾಜಪೇಟೆ ಮತ್ತು ಸೋಮವಾರಪೇಟೆ ಉಪ ವಿಭಾಗದ ಆರಕ್ಷಕ ಉಪಾಧೀಕ್ಷಕರು, ಇವರು ಕುಟ್ಟ, ಮಾಕುಟ್ಟ, ಪೆರುಂಬಾಡಿ, ಕರಿಕೆ, ಕುಶಾಲನಗರ ಮತ್ತು ಸಂಪಾಜೆ ಚೆಕ್‌ಪೋಸ್ಟ್ಗಳ ಮುಖಾಂತರ ಹಾಗೂ ಇತರ ಯಾವುದೇ ಮಾರ್ಗದ ಮೂಲಕ ಕೇರಳ ರಾಜ್ಯದಿಂದ ಜಿಲ್ಲೆಗೆ ಆಗಮಿಸುವವರು ಕನಿಷ್ಟ ೭೨ ಗಂಟೆಗಳ ಒಳಗೆ ಪಡೆದಿರುವ ಕೋವಿಡ್-೧೯ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಹೊಂದಿರುವುದನ್ನು ಪರಿಶೀಲಿಸುವ ನಿಟ್ಟಿನಲ್ಲಿ ಚೆಕ್‌ಪೋಸ್ಟ್ಗಳಲ್ಲಿ ದಿನದ ೨೪ ಗಂಟೆ ತಲಾ ೮ ಸಿಬ್ಬಂದಿಯAತೆ ೩ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವುದು.

ಪಾಳಿಯ ಅವಧಿಯು ಬೆಳಗ್ಗೆ ೮ ಗಂಟೆಯಿAದ ಮಧ್ಯಾಹ್ನ ೨ ಗಂಟೆಯವರೆಗೆ, ಮಧ್ಯಾಹ್ನ ೨ ಗಂಟೆಯಿAದ ರಾತ್ರಿ ೮ ಗಂಟೆಯವರೆಗೆ ಮತ್ತು ರಾತ್ರಿ ೮ ಗಂಟೆಯಿAದ ಮರುದಿನ ಬೆಳಗ್ಗೆ ೮ ಗಂಟೆಯವರೆಗೆ ಇರತಕ್ಕದ್ದು. ಪ್ರತಿ ಇಲಾಖೆಯಿಂದ ಪ್ರತಿ ಪಾಳಿಗೆ ತಲಾ ಇಬ್ಬರು ಅಧಿಕಾರಿ, ನೌಕರರನ್ನು ನಿಯೋಜಿಸುವುದು.

ಮಡಿಕೇರಿ ಮತ್ತು ವೀರಾಜಪೇಟೆ ತಹಶೀಲ್ದಾರರು ಚೆಕ್‌ಪೋಸ್ಟ್ನಲ್ಲಿ ತಪಾಸಣೆ ಕಾರ್ಯಕ್ಕಾಗಿ ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಇವರು ಆರೋಗ್ಯ ಇಲಾಖೆ ವತಿಯಿಂದ ಮೊಬೈಲ್ ಯೂನಿಟ್ ತಂಡ ರಚಿಸಿ ಕುಟ್ಟ, ಮಾಕುಟ್ಟ, ಕರಿಕೆ, ಕುಶಾಲನಗರ ಮತ್ತು ಸಂಪಾಜೆ ಚೆಕ್‌ಪೋಸ್ಟ್ಗಳ ಬಳಿ ಹಾಗೂ ಜಿಲ್ಲೆಯ ಪ್ರವಾಸಿ, ಪ್ರೇಕ್ಷಣೀಯ ಸ್ಥಳಗಳು ಹಾಗೂ ಅಧಿಕ ಜನ ಸಂದಣಿ ಇರುವ ಪ್ರದೇಶ, ಸಂತೆ ಮುಂತಾದ ಸ್ಥಳಗಳಲ್ಲಿ ಕೋವಿಡ್-೧೯ ರ‍್ಯಾಂಡಮ್ ಟೆಸ್ಟ್ ನಡೆಸುವುದು.

ಕೇರಳ ರಾಜ್ಯದ ಗಡಿಭಾಗದಲ್ಲಿರುವ ಕೊಡಗು ಜಿಲ್ಲೆಗೆ ಸೇರಿದ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಸಾರ್ವಜನಿಕರ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿಸುವುದು.

ಪ್ರವಾಸೋದ್ಯಮ ಇಲಾಖೆ ಉಪ ಮಾಡಿಸುವುದು.

ಕೋವಿಡ್-೧೯ ಮಾರ್ಗಸೂಚಿ ಯಂತೆ ಮುಖಗವಸು ಧರಿಸುವಿಕೆ, ಸಾಮಾಜಿಕ ಅಂತರ ಕಾಯ್ದು ಕೊಳ್ಳುವುದು, ಸ್ಯಾನಿಟೈಸರ್ ಬಳಕೆ ಮತ್ತಿತರ ಬಗ್ಗೆ ಇನ್ನೂ ಹೆಚ್ಚಿನ ಗಮನ ಹರಿಸುವಂತೆ ಮತ್ತು ಸಾರ್ವಜನಿಕರು ತುರ್ತು ವಿಚಾರದ ಹೊರತಾಗಿ ಅನಾವಶ್ಯಕವಾಗಿ ಆಗಾಗ್ಗೆ ಕೇರಳಕ್ಕೆ ಸಂಚರಿಸುವುದನ್ನು ಕಡಿಮೆಗೊಳಿಸಲು ಅರಿವು ಮೂಡಿಸುವುದು.

ಕುಟ್ಟ, ಮಾಕುಟ್ಟ, ಪೆರುಂಬಾಡಿ, ಕರಿಕೆ, ಕುಶಾಲನಗರ ಮತ್ತು ಸಂಪಾಜೆ ಚೆಕ್‌ಪೋಸ್ಟ್ಗಳು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಮೇಲುಸ್ತುವಾರಿಯನ್ನು ಸ್ಥಳೀಯ ಕಾರ್ಯವ್ಯಾಪ್ತಿಯ ಗ್ರಾಮೀಣ, ನಗರ ಸ್ಥಳೀಯ ಸಂಸ್ಥೆಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಮುಖ್ಯಾಧಿಕಾರಿಯವರು ನಿರ್ವಹಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಚಾರುಲತ ಸೋಮಲ್ ತಿಳಿಸಿದ್ದಾರೆ.