ವೀರಾಜಪೇಟೆ, ಫೆ. ೨೧: ತಾಲೂಕು ಕಚೇರಿಯಲ್ಲಿ ಸಾರ್ವಜನಿಕರ ಯಾವುದೇ ಕೆಲಸಗಳಾಗದೆ ಕಡತಗಳು ಬಾಕಿ ಉಳಿದಿದ್ದರೆ ಅಥವಾ ಇತರ ಸಮಸ್ಯೆಗಳಿದ್ದರೆ ನೇರವಾಗಿ ಬಂದು ನನ್ನನ್ನು ಭೇಟಿ ಆಗಬಹುದು. ಯಾವುದೇ ಕಾರಣಕ್ಕೂ ಕಾನೂನು ಉಲ್ಲಂಘಿಸಿ ಒತ್ತಡದಲ್ಲಿ ಕೆಲಸ ನಿರ್ವಹಿಸುವುದಿಲ್ಲ ಎಂದು ತಹಶೀಲ್ದಾರ್ ಯೋಗಾನಂದ್ ತಿಳಿಸಿದರು.
ಪತ್ರಿಕೆಗೆ ಮಾಹಿತಿ ನೀಡಿದ ಅವರು, ಈಗಾಗಲೇ ಬಹುತೇಕ ಕಡತಗಳು ವಿಲೇವಾರಿಗೊಂಡಿದೆ. ಉಳಿದ ಕಡತಗಳು ಮಾರ್ಚ್ ಅಂತ್ಯದೊಳಗೆ ವಿಲೇವಾರಿಗೊಳ್ಳಲಿದೆ. ತಾಲೂಕು ಕಚೇರಿಯಲ್ಲಿ ಸಿಬ್ಬಂದಿಗಳಿಗೆ ಹಣ ನೀಡಿದರೆ ಮಾತ್ರ ಕೆಲಸ ಕಾರ್ಯಗಳು ನಡೆಯುತ್ತಿದೆ. ಮದ್ಯವರ್ತಿಗಳ ಮೂಲಕ ಮಾತ್ರ ಕೆಲಸ ಆಗುತ್ತದೆ ಎಂಬ ಆರೋಪ ಇತ್ತು. ಅದಕ್ಕೆ ಕಡಿವಾಣ ಹಾಕಲಾಗಿದೆ. ಯಾವುದೇ ಕಾರಣಕ್ಕೂ ಯಾರಿಗೂ ಹಣ ನೀಡಬೇಡಿ. ಯಾವುದೇ ಕೆಲಸ ಕಾರ್ಯಗಳು ಆಗದೆ ಸಾರ್ವಜನಿಕರನ್ನು ಸತಾಯಿಸುವ ದೂರು ಬಂದರೆ ಕೂಡಲೇ ಅವರಿಗೆ ನೋಟೀಸ್ ಜಾರಿ ಮಾಡಿ ಶಿಸ್ತು ಕ್ರಮಕೈಗೊಳ್ಳಲಾಗುವುದು.
ಯಾವುದೇ ಕಾರಣಕ್ಕೂ ಮಧ್ಯವರ್ತಿಗಳಿಗೆ ಅವಕಾಶ ಇಲ್ಲ. ಕಚೇರಿ ಒಳಗೆ ಮಧ್ಯವರ್ತಿಗಳು ಕಂಡು ಬಂದರೆ ಅವರ ವಿರುದ್ಧ ಪೋಲೀಸ್ ದೂರು ನೀಡಲಾಗುವುದು. ಅಲ್ಲದೆ ಕಚೇರಿ ಎದುರು ನಾಮಫಲಕವನ್ನು ಅಳವಡಿಸಲಾಗಿದೆ. ಸರಿಯಾದ ಸಮಯಕ್ಕೆ ಕಚೇರಿಗೆ ಆಗಮಿಸದಿದ್ದರೆ ಮೊದಲು ಎಚ್ಚರಿಕೆ ನೀಡಲಾಗುವುದು ಎಂದು ಎಚ್ಚರಿಸಿದರು. ಈ ಸಂಬAಧ ಕಚೇರಿ ವೇಳೆ ಸಿಬ್ಬಂದಿಗಳು ಕಾಫಿ, ಟೀಗೆಂದು ತೆರಳಿ ಕಾಲಹರಣ ಮಾಡುತ್ತಿದ್ದಾರೆ ಎಂಬ ದೂರಿನ ಮೇಲೆ ಕಚೇರಿ ಸಿಬ್ಬಂದಿಗಳಿಗೆ ಕಚೇರಿಗೆ ಕಾಫಿ ಹಾಗೂ ಟೀ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಕಚೇರಿ ಬಿಟ್ಟು ಬೇರೆ ಸ್ವಂತ ಕೆಲಸಕ್ಕೆ ತೆರಳುವಂತಿಲ್ಲ