ಕಣಿವೆ, ಫೆ. ೨೧: ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವತಿಯಿಂದ ಪಂಚಾಯಿತಿ ವ್ಯಾಪ್ತಿಯ ಅಂಗಡಿ ಹಾಗೂ ಮನೆಗಳಿಗಳಿಗೆ ಹಸಿ ಮತ್ತು ಒಣ ಕಸ ವಿಂಗಡಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಉಚಿತವಾಗಿ ಬುಟ್ಟಿಗಳನ್ನು ವಿತರಿಸಲಾಯಿತು. ಪಂಚಾಯಿತಿ ಅಧ್ಯಕ್ಷೆ ನಂದಿನಿ, ಉಪಾಧ್ಯಕ್ಷೆ ಡಿ.ಜೆ. ಯಶೋಧ, ಪಿಡಿಓ ಶ್ಯಾಂ, ಸದಸ್ಯರಾದ ಗಂಗಮ್ಮ, ರುಕ್ಮಿಣಿ, ಸರ್ವಮಂಗಳ, ಸುಶೀಲ, ಉಮಾ, ಪೌರಕಾರ್ಮಿಕ ವಿಜಯ್ ಹಾಗೂ ನಂಜುAಡ ಇದ್ದರು.