ಶನಿವಾರಸಂತೆ, ಫೆ. ೨೧: ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ಯುವಕ ಮೃತಪಟ್ಟ ಘಟನೆ ಗೌಡಳ್ಳಿಯಲ್ಲಿ ನಡೆದಿದೆ.ಅರಕಲಗೂಡು ತಾಲೂಕಿನ ಮಾರಗೋಡನ ಹಳ್ಳಿಯ ಟಿಪ್ಪರ್ ಚಾಲಕ ಎಂ.ಎನ್. ದಿನೇಶ್ (೨೫) ಮೃತ ದುರ್ದೈವಿ. ಇಂದು ಬೆಳಿಗ್ಗೆ ಗೌಡಳ್ಳಿ ಗ್ರಾಮದ ಸಾರ್ವಜನಿಕ ರಸ್ತೆ ದಾಟುವಾಗ ಗೌಡಳ್ಳಿ ಕಡೆಯಿಂದ ಬಂದ ಕೆಎಸ್‌ಆರ್‌ಟಿಸಿ ಬಸ್ (ಕೆಎ ೨೧ ಎಫ್ ೦೧೪೦) ಚಾಲಕ ರಂಗನಾಥ ಕಸ್ತೂರಿ ಬಸ್ ಅನ್ನು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಾಲಿಸಿ ದಿನೇಶನಿಗೆ ಡಿಕ್ಕಿಪಡಿಸಿ, ತಲೆ, ಮುಖ, ಕೈ-ಕಾಲುಗಳಿಗೆ ಗಾಯವಾಗಿದ್ದು, ಅರಕಲಗೂಡು (ಮೊದಲ ಪುಟದಿಂದ) ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದು, ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ದಿನೇಶ ತನ್ನ ಬಿದ್ದು ಹೋದ ಮೊಬೈಲ್ ಹುಡುಕಾಡಿ ವಾಪಸ್ಸು ತಮ್ಮ ಊರಿಗೆ ವಿಶ್ವನಾಥ್ ಅವರೊಂದಿಗೆ ಬೈಕ್‌ನಲ್ಲಿ ಹೋಗುತ್ತಿರುವಾಗ ಗೌಡಳ್ಳಿ ಗ್ರಾಮದ ಸಾರ್ವಜನಿಕ ರಸ್ತೆ ಬದಿ ಬೈಕನ್ನು ನಿಲ್ಲಿಸಿ, ಇಬ್ಬರು ಬೈಕಿನಿಂದ ಇಳಿದು ಮೂತ್ರ ವಿಸರ್ಜನೆ ಮಾಡಲು ರಸ್ತೆ ದಾಟುವಾಗ ಗೌಡಳ್ಳಿ ಕಡೆಯಿಂದ ಬಂದ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಪಡಿಸಿದ ಪರಿಣಾಮ ಸುಮಾರು ೫೦ ಅಡಿ ದೂರದವರೆಗೆ ಎಳೆದೊಯ್ದು ದಿನೇಶ್‌ನ ತಲೆ, ಮುಖ ಹಾಗೂ ಕೈ-ಕಾಲುಗಳಿಗೆ ಗಾಯವಾಗಿದ್ದು, ಗಾಯಾಳುವನ್ನು ಆಂಬ್ಯುಲೆನ್ಸ್ನಲ್ಲಿ ಅರಕಲಗೂಡು ಆಸ್ಪತ್ರೆಗೆ ದಾಖಲು ಪಡಿಸಿದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.ಮೃತನೊಂದಿಗೆ ಇದ್ದ ವಿಶ್ವನಾಥ ಶನಿವಾರಸಂತೆ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆ ಠಾಣಾಧಿಕಾರಿ ಹೆಚ್.ಇ. ದೇವರಾಜ್, ಕೆಎಸ್‌ಆರ್‌ಟಿಸಿ ಬಸ್ ಅನ್ನು ವಶಪಡಿಸಿಕೊಂಡು, ಆರೋಪಿಯ ಮೇಲೆ ಕಲಂ ೨೭೯, ೩೦೪ (ಎ) ಐಪಿಸಿ ಪ್ರಕರಣ ದಾಖಲಿಸಿರುತ್ತಾರೆ.ಸ್ಥಳಕ್ಕೆ ಡಿವೈಎಸ್‌ಪಿ ಶೈಲೇಂದ್ರ ಹಾಗೂ ವೃತ್ತ ನಿರೀಕ್ಷಕ ಮಹೇಶ್ ಭೇಟಿ ನೀಡಿ ಪರಿಶೀಲಿಸಿದರು.