ಮಡಿಕೇರಿ, ಫೆ. ೨೦ : ತೇವಾಂಶಭರಿತ ಮೋಡಗಳ ಹೆಚ್ಚಳದಿಂದಾಗಿ ನಿನ್ನೆ ದಿನ ಕೊಡಗಿನ ಹಲವೆಡೆ ಭಾರೀ ಪ್ರಮಾಣದಲ್ಲಿ ಆಲಿಕಲ್ಲು ಮಳೆ ಸುರಿದಿದೆ ಎಂದು ಕರ್ನಾಟಕ ಕಂದಾಯ ಇಲಾಖೆಯ ವಿಕೋಪ ನಿರ್ವಹಣಾ ಪ್ರಾಧಿಕಾರದ ಹಿರಿಯ ಸಮಾಲೋಚಕ ಡಾ. ಶ್ರೀನಿವಾಸ್ ರೆಡ್ಡಿ ಅವರು ಮಾಹಿತಿ ನೀಡಿದ್ದಾರೆ.
‘ಶಕ್ತಿ’ಯೊಂದಿಗೆ ಮಾತನಾಡಿದ ಅವರು ಮುಂಗಾರು ಪೂರ್ವದಲ್ಲಿ ಆಲಿಕಲ್ಲು ಸಹಿತ ಮಳೆ ಯಾಗುವುದು ಸಾಮಾನ್ಯ, ಆದರೆ ನಿನ್ನೆ ದಿನ ಕೊಡಗಿನ ಕೆಲವೆಡೆ ಹೆಚ್ಚಿನ ಪ್ರಮಾಣ ದಲ್ಲಿ ಆಲಿಕಲ್ಲು ಮಳೆ ಸುರಿದಿದೆ. ಬೇಸಿಗೆಯಲ್ಲಿ ತೇವಾಂಶ ಭರಿತ ಮೋಡಗಳು ಎತ್ತರಕ್ಕೆ ಚಲಿಸಿ ಅಲ್ಲಿ ಉಷ್ಣಾಂಶ ತೀವ್ರ ಕಡಿಮೆ ಇರುವ ಭಾಗಗಳನ್ನು ಮೋಡಗಳು ಸ್ಪರ್ಶಿಸುವುದರಿಂದ ಅವು ಆಲಿಕಲ್ಲುಗಳಾಗಿ ಪರಿವರ್ತನೆಗೊಳ್ಳುತ್ತದೆ. ಆದರೆ ನಿನ್ನೆ ದಿನ ಕೊಡಗಿನಲ್ಲಿ ತೇವಾಂಶ ಭರಿತ ಮೋಡಗಳ ಆಲಿಕಲ್ಲು ಸಹಿತ ಮಳೆ ಯಾಗುವುದು ಸಾಮಾನ್ಯ, ಆದರೆ ನಿನ್ನೆ ದಿನ ಕೊಡಗಿನ ಕೆಲವೆಡೆ ಹೆಚ್ಚಿನ ಪ್ರಮಾಣ ದಲ್ಲಿ ಆಲಿಕಲ್ಲು ಮಳೆ ಸುರಿದಿದೆ. ಬೇಸಿಗೆಯಲ್ಲಿ ತೇವಾಂಶ ಭರಿತ ಮೋಡಗಳು ಎತ್ತರಕ್ಕೆ ಚಲಿಸಿ ಅಲ್ಲಿ ಉಷ್ಣಾಂಶ ತೀವ್ರ ಕಡಿಮೆ ಇರುವ ಭಾಗಗಳನ್ನು ಮೋಡಗಳು ಸ್ಪರ್ಶಿಸುವುದರಿಂದ ಅವು ಆಲಿಕಲ್ಲುಗಳಾಗಿ ಪರಿವರ್ತನೆಗೊಳ್ಳುತ್ತದೆ. ಆದರೆ ನಿನ್ನೆ ದಿನ ಕೊಡಗಿನಲ್ಲಿ ತೇವಾಂಶ ಭರಿತ ಮೋಡಗಳ ಮೋಡಗಳ ಚಲನೆಯಾಗಿ ಇದೂ ಕೂಡ ನಿನ್ನೆಯ ಘಟನೆಗೆ ಕಾರಣ ವಾಗಿದೆ ಎಂದು ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ. ಈ ರೀತಿಯ ಮಳೆ ಬೆಳೆಗಳ ಮೇಲೂ ಸಾಕಷ್ಟು ದುಷ್ಪರಿಣಾಮವನ್ನು ಉಂಟು ಮಾಡುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.