ಮಡಿಕೇರಿ, ಫೆ. ೧೯: ರಥಸಪ್ತಮಿಯ ಅಂಗವಾಗಿ ಇಂದು ನಗರದ ರಾಜಾಸೀಟಿನಲ್ಲಿ ೯೩ ಮಂದಿಯಿAದ ಸೂರ್ಯ ನಮಸ್ಕಾರ ಹಮ್ಮಿಕೊಳ್ಳಲಾಯಿತು. ಭಾರತೀಯ ವಿದ್ಯಾ ಭವನ, ಸೇವಾ ಭಾರತಿ, ಪ್ರಣವ ಯೋಗ, ಪತಾಂಜಲಿ ಯೋಗ ಶಿಕ್ಷಣ ಸಂಘಗಳ ವತಿಯಿಂದ ಮುಂಜಾನೆಯೇ ಪ್ರಾರಂಭವಾದ ಸೂರ್ಯ ನಮಸ್ಕಾರ, ಸೂರ್ಯೋದಯದ ನಂತರ ಸಮಾಪ್ತಿಗೊಂಡಿತು. ೯೩ ಮಂದಿಯ ಪೈಕಿ ಅಧಿಕ ಮಹಿಳೆಯರೇ ಭಾಗವಹಿಸಿದ್ದು, ೧೦೮ ಬಾರಿ ಸೂರ್ಯನಮಸ್ಕಾರ ಮಾಡಲಾಯಿತು.
೩ನೇ ತರಗತಿಯ ಅನುಹ್ಯ ಎಂಬ ಬಾಲಕಿಯಿಂದ ಹಿಡಿದು ೭೦ ವರ್ಷದವರು ಕೂಡ ಭಾಗವಹಿಸಿದರು. ಸೂರ್ಯ ನಮಸ್ಕಾರದ ಬಳಿಕ ಸಿಹಿ-ಖಾರ ವ್ಯವಸ್ಥೆಯನ್ನು ಯೋಗ ತಂಡದ ಪುಷ್ಪ ಹಾಗೂ ಕಷಾಯದ ವ್ಯವಸ್ಥೆಯನ್ನು ಮೃನಾಲಿನಿ ಹಾಗೂ ಮಲ್ಲಿನಾಥ ಅವರುಗಳಿಂದ ಮಾಡಲಾಗಿತ್ತು. ರಾಜಾಸೀಟಿನ ಉದ್ಯಾನವನದಲ್ಲಿ ಅರಳಿ ಕಂಗೊಳಿಸುತ್ತಿದ್ದ ಹೂವುಗಳು, ಹಕ್ಕಿಗಳ ಚಿಲಿಪಿಲಿ ನಾದದೊಂದಿಗೆ ೯೩ ಮಂದಿಯಿAದ ಸೂರ್ಯನ ಮಂತ್ರ ‘ಓ ಮಿತ್ರಾಯ ನಮಃ’ ಪಠಣೆಯೊಂದಿಗೆ ಕಾರ್ಯಕ್ರಮ ಅದ್ಭುತವಾಗಿ ನಡೆಯಿತೆಂದು ಯೋಗ ಗುರು ಮಹೇಶ್ ಅವರು ಅಭಿಪ್ರಾಯ ಪಟ್ಟರು.