ಕುಶಾಲನಗರ, ಫೆ. ೧೯: ಕುಶಾಲನಗರ ಸಮೀಪ ಗುಡ್ಡೆಹೊಸೂರು ಐಎನ್ಎಸ್ ಸ್ಪೋರ್ಟ್ಸ್ ಸೆಂಟರ್ನಲ್ಲಿ ರಾಜ್ಯಮಟ್ಟದ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಲಾಯಿತು. ಅಂಡರ್-೧೫ ಕ್ರಿಕೆಟ್ ಪಂದ್ಯಾಟಕ್ಕೆ ಮಡಿಕೇರಿ ರೋಟರಿ ಸಂಸ್ಥೆಯ ಕಾರ್ಯದರ್ಶಿ ಸಚಿನ್ ಸೋಮಣ್ಣ ಚಾಲನೆ ನೀಡಿದರು. ಮಂಡ್ಯ, ಮೈಸೂರು, ಪುತ್ತೂರು, ಉಡುಪಿ, ಚನ್ನರಾಯಪಟ್ಟಣದ ಒಟ್ಟು ೮ ತಂಡಗಳು ಪಂದ್ಯಾಟದಲ್ಲಿ ಪಾಲ್ಗೊಂಡಿವೆ. ಮುಂದಿನ ಪ್ರತಿ ಮೂರು ವಾರಾಂತ್ಯ ದಿನಗಳಲ್ಲಿ ಪಂದ್ಯಾವಳಿ ನಡೆಯಲಿದೆ. ಈ ಸಂದರ್ಭ ಐಎನ್ಎಸ್ ಸಂಸ್ಥಾಪಕ ಪೊನ್ನಪ್ಪ, ಪಂದ್ಯಾಟ ಸಂಯೋಜಕ ಸಂದೀಪ್ ಮತ್ತಿತರರು ಇದ್ದರು.