ಸುAಟಿಕೊಪ್ಪ, ಫೆ. ೧೮: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ರೀದೇವಿ ಗ್ರಾಮದಲ್ಲಿ ವಿದ್ಯುತ್ ಸಂಪರ್ಕದ ಕೊರತೆಯಿಂದ ಕಳೆದ ಎರಡು ವರ್ಷದಿಂದ ಗ್ರಾಮಸ್ಥರಿಗೆ ಕೊಳವೆ ಬಾವಿಯಿಂದ ನೀರು ಸಿಗದೆ ಪರದಾಡುತ್ತಿದ್ದ ಸಮಸ್ಯೆಯನ್ನು ಮನಗಂಡ ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಪಿ. ಚಂದ್ರಕಲಾ ಅವರ ಒತ್ತಡದಿಂದ ಸುಲಲಿತವಾಗಿ ನೀರು ಸಿಗುವಂತಾಗಿದೆ.
ಕಳೆದ ೨೦೧೮ರಲ್ಲಿ ಶ್ರೀದೇವಿ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಪಿ. ಚಂದ್ರಕಲಾ ಅವರು ತಮ್ಮ ಅನುದಾನದಲ್ಲಿ ಕೊಳವೆ ಬಾವಿ ಕೊರೆಸಿ ಮೋಟಾರು ಅಳವಡಿಸಿದ್ದರು. ಆದರೆ ಅದಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅನುದಾನ ಬಿಡುಗಡೆಯಾಗಿರಲಿಲ್ಲ. ಮಂಗಳವಾರ ನಡೆದ ಜಿ.ಪಂ. ಸಭೆಯಲ್ಲಿ ಕೊಳವೆ ಬಾವಿಗೆ ವಿದÀÄ್ಯತ್ ಸಂಪರ್ಕ ಕಲ್ಪಿಸುವಂತೆ ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಸ್ಪಂದಿಸಿದ ಸೆಸ್ಕ್ ಇಲಾಖೆ ಕೂಡಲೇ ವಿದ್ಯುತ್ ಸಂಪರ್ಕ ಅಳವಡಿಸಿದರಿಂದ ಈ ಭಾಗದ ಜನರಿಗೆ ಕುಡಿಯುವ ನೀರು ದೊರೆತು ಎರಡು ವರ್ಷಗಳ ನೀರಿನ ಸಮಸ್ಯೆಗೆ ಪರಿಹಾರ ದೊರೆತಂತಾಗಿ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.