ಕಣಿವೆ, ಫೆ. ೧೮: ಇಲ್ಲಿಗೆ ಸಮೀಪದ ಕೂಡುಮಂಗಳೂರು ಹಾಗೂ ಕೂಡ್ಲೂರು ಗ್ರಾಮದ ಗ್ರಾಮ ದೇವತೆ ಬನದ ದೊಡ್ಡಮ್ಮನವರ ನೂತನ ದೇವಾಲಯ ಲೋಕಾರ್ಪಣೆ ಸಮಾರಂಭ ಬುಧವಾರ ಶ್ರದ್ಧಾಭಕ್ತಿಯಿಂದ ನೆರವೇರಿತು. ಕಾಸರಗೋಡಿನ ವೇದ ಬ್ರಹ್ಮ ಗೋಪಾಲಕೃಷ್ಣ ಕೆದಿಲಾಯ ನೇತೃತ್ವದ ಪುರೋಹಿತರ ತಂಡದಿAದ ಬೆಳಿಗ್ಗೆ ೬ ಗಂಟೆಯಿAದ ಪೂಜಾವಿಧಿಗಳು ಆರಂಭವಾದವು. ನಂತರ ೮ ಗಂಟೆಯಿAದ ಬ್ರಹ್ಮಕಲಶೋತ್ಸವ ಪೂಜಾದಿಗಳು ಜರುಗಿದವು. ಬಳಿಕ ವೀರಾಜಪೇಟೆ ಅರಮೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಾನಿಧ್ಯದಲ್ಲಿ ಮಧ್ಯಾಹ್ನ ೧೨.೩೦ಕ್ಕೆ ಮಹಾಮಂಗಳಾರತಿ ನೆರವೇರಿತು.
ಇದಕ್ಕೂ ಮುನ್ನಾ ಭಕ್ತರನ್ನುದ್ದೇಶಿಸಿ ಆಶೀರ್ವಚನ ನೀಡಿದ ಅರಮೇರಿ ಶ್ರೀಗಳು, ಜನರ ಮಾನಸಿಕ ನೆಮ್ಮದಿಯ ತಾಣಗಳು ಅಂದರೆ ಅದುವೇ ದೇವಾಲಯ ಹಾಗೂ ಮಠ ಮಂದಿರಗಳು. ದಿನಂಪ್ರತೀ ಏನಾದರೊಂದು ಜಂಜಾಟದಲ್ಲಿ ನಿರತರಾಗುವ ಮನುಷ್ಯನಿಗೆ ದೈವಸಾನಿಧ್ಯದಲ್ಲಿ ಮನಸ್ಸಿಗೆ ನೆಮ್ಮದಿ ಹಾಗೂ ಶಾಂತಿ ದೊರಕುತ್ತದೆ ಎಂದರು.
ಕುಶಾಲನಗರದ ಸರ್ಕಾರಿ ಪ್ರೌಢಶಾಲಾ ಚಿತ್ರಕಲಾ ಶಿಕ್ಷಕ ಉ.ರಾ. ನಾಗೇಶ್ ಆಧ್ಯಾತ್ಮಿಕ ನುಡಿಗಳಾಡಿದರು. ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಟಿ. ಅರುಣಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಕೆ.ಎಸ್. ರಾಜಾಚಾರ್, ಕಾರ್ಯದರ್ಶಿ ಕೆ.ಎನ್. ಪವನ್ಕುಮಾರ್, ಸಹ ಕಾರ್ಯದರ್ಶಿ ಎಂ.ಡಿ. ಸುನಿಲ್, ಖಜಾಂಚಿ ಕೆ.ಪಿ. ಪರಶಿವ, ಪ್ರಮುಖರಾದ ಕೆ.ವಿ. ಸಣ್ಣಪ್ಪ, ಕೆ.ಕೆ. ಭೋಗಪ್ಪ, ಹೇಮಂತಕುಮಾರ್, ಕೆ.ಎಸ್. ಚನ್ನಪ್ಪ, ಕೆ.ಟಿ. ಪ್ರಕಾಶ್, ಕೆ.ಸಿ. ಸುರೇಶ್, ಕೆ.ಬಿ. ಭೋಗಪ್ಪ, ಲಕ್ಷ್ಮಣರಾಜೇಅರಸ್, ಶಿವಣ್ಣ ಮೊದಲಾದವರಿದ್ದರು. ದೇವಾಲಯದ ಅಭಿವೃದ್ಧಿಗೆ ತನು, ಮನ, ಧನ ಸಹಾಯ ಮಾಡಿದ ದಾನಿಗಳನ್ನು ದೇವಾಲಯ ಸಮಿತಿ ವತಿಯಿಂದ ಗೌರವಿಸಲಾಯಿತು.