ಗೋಣಿಕೊಪ್ಪಲು, ಫೆ. ೧೮: ಸರ್ಕಾರದ ಯೋಜನೆಗಳು ಆಗಿಂದಾಗ್ಗೆ ಜನರಿಗೆ ತಲುಪಲು ವಿಶೇಷ ಕಾರ್ಯಕ್ರಮ ನಡೆಯುತ್ತಲೇ ಬಂದಿದೆ. ಆದರೂ ನೈಜ ಪಲಾನುಭವಿಗಳಿಗೆ ಸರ್ಕಾರದ ಯೋಜನೆಗಳು ಇನ್ನೂ ಕೂಡ ತಲುಪದೇ ಇರುವುದನ್ನು ಮನಗಂಡ ರಾಜ್ಯ ಸರ್ಕಾರ ಇವುಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ.ಆಯಾಯ ಜಿಲ್ಲೆಯ ಜಿಲ್ಲಾಧಿಕಾರಿಗಳನ್ನು ತಿಂಗಳ ಮೂರನೇ ಶನಿವಾರದಂದು ಸೌಲಭ್ಯ ವಂಚಿತ ಗ್ರಾಮಗಳಿಗೆ ತೆರಳಿ ಸೌಲಭ್ಯ ಒದಗಿಸುತ್ತ ಕ್ರಮ ಕೈಗೊಳ್ಳಲು ಕಂದಾಯ ಸಚಿವ ಆರ್. ಅಶೋಕ್ ಸೂಚನೆ ನೀಡಿದ್ದಾರೆ. ಸಚಿವರ ಚಿಂತನೆಯ ಈ ಕಾರ್ಯಕ್ರಮ ತಾ. ೨೦ ರಂದು ರಾಜ್ಯದ ಎಲ್ಲಾ ಜಿಲ್ಲೆಯಲ್ಲಿಯೂ ನಡೆಯಲಿದೆ. ಈ ಕಾರ್ಯಕ್ರಮದ ಯಶಸ್ವಿಗೆ ಜಿಲ್ಲಾಡಳಿತ ವಿಶೇಷ ಆಸಕ್ತಿ ವಹಿಸಿದ್ದು ಕೊಡಗು ಜಿಲ್ಲೆಯ ಮೊದಲ ಕಾರ್ಯಕ್ರಮವನ್ನು ನೂತನ ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲ ಹೋಬಳಿಯ ಶ್ರೀಮಂಗಲ ವಿ.ಎಸ್.ಎಸ್.ಎನ್. ಸಭಾಂಗಣದಲ್ಲಿ ಆಯೋಜಿಸಲಾಗಿದೆ. ವಿಶೇಷವಾಗಿ ಕಂದಾಯ ಇಲಾಖೆಯ ಸಿಬ್ಬಂದಿಗಳು, ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅಧ್ಯಕ್ಷತೆಯಲ್ಲಿ ನಡೆಯುವ ವಿಶೇಷ ಕಾರ್ಯಕ್ರಮಕ್ಕೆ (ಮೊದಲ ಪುಟದಿಂದ)

ಗುಣಮಟ್ಟ ಪರಿಶೀಲನೆ

ಗುಣಮಟ್ಟ ಪರಿಶೀಲಿಸಿದ ನಂತರ ಖರೀದಿ ಕೇಂದ್ರದಲ್ಲಿ ಭತ್ತ ಖರೀದಿಸಲಾಗುತ್ತದೆ. ಗುಣಮಟ್ಟದ ಪರೀಕ್ಷೆಯನ್ನು ‘ಅಗ್ರಿಕಲ್ಚರ್ ಗ್ರೇರ‍್ಸ್’ ಮೂಲಕ ಡಿಜಿಟಲ್ ಯಂತ್ರ ಬಳಸಿ ಮಾಡಲಾಗುತ್ತದೆ. ಭತ್ತದ ಕೆಲವೊಂದು ವಿಷಯಗಳಿಗೆ ಗರಿಷ್ಠ ಮಿತಿಯನ್ನು ನಿಗದಿಮಾಡಲಾಗಿದೆ. ಭತ್ತದಲ್ಲಿ ಅನ್ಯವಸ್ತುಗಳು, ಸಾವಯವ ಶೇ ೧, ವಿರೂಪಗೊಂಡ ಧಾನ್ಯಗಳು ಶೇ ೫, ಕುಗ್ಗಿದ ಮತ್ತು ಶ್ರವಣಿತ ಧಾನ್ಯಗಳು ಶೇ ೩, ಕೆಳವರ್ಗದ ಮಿಶ್ರಣ ಶೇ ೬, ತೇವಾಂಶ ಶೇ ೧೭ ಇರಬೇಕಾಗಿ ರುತ್ತದೆ.

ವೀರಾಜಪೇಟೆ ತಾಲೂಕಿನಲ್ಲಿ

ಹೆಚ್ಚಾಗಿ ಅತಿರಾ ತಳಿಯ ಭತ್ತ ಬೆಳೆಯಲಾಗುತ್ತದೆ. ಆದರೆ, ಗ್ರೇಡ್ ೧ ಮತ್ತು ಸಾಮಾನ್ಯ ತಳಿಯ ಭತ್ತವನ್ನು ಮಾತ್ರ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಅತಿರಾ ಭತ್ತ ಖರೀದಿ ಮಾಡುವಂತೆ ಸರ್ಕಾರಕ್ಕೆ ಒತ್ತಾಯ ಕೂಡ ಮಾಡಲಾಗಿದೆ. ಅದರೆ, ಖರೀದಿ ಮಾಡಿದ ಭತ್ತವನ್ನು ಪಡಿತರಕ್ಕೆ ಬಳಸಲಾಗುವುದರಿಂದ ಅತಿರಾ ತಳಿ ಬಣ್ಣ ಬೇರೆ ಇರುವುದರಿಂದ ಸರ್ಕಾರ ಇದನ್ನು ಬೆಂಬಲ ಬೆಲೆ ಅಡಿಯಲ್ಲಿ ಖರೀದಿಸುತ್ತಿಲ್ಲ.

ಮಾರ್ಚ್ ತನಕ ಸೇವೆ - ನಂತರ ಹಣ

ಡಿಸೆಂಬರ್‌ನಿAದ ಆರಂಭ ಗೊಂಡ ಭತ್ತ ಖರೀದಿ, ನೋಂದಣಿ ಪ್ರಕ್ರಿಯೆ ಮಾರ್ಚ್ ೭ ರ ತನಕ ಸೇವೆ ನೀಡಲಿದೆ. ಪ್ರಕ್ರಿಯೆ ಕಾಲವಧಿ ಮುಗಿದ ಬಳಿಕ ರೈತರ ಖಾತೆಗೆ ಹಣ ಸಂದಾಯವಾಗಲಿದೆ ಎಂದು ರಾಜ್ಯ ಸರಕಾರ ಮಾರಾಟ ಮಂಡಳಿ ಜಿಲ್ಲಾ ವ್ಯವಸ್ಥಾಪಕ ಟಿ.ಪಿ ಹರೀಶ್ ಕುಮಾರ್ ತಿಳಿಸಿದ್ದಾರೆ.

ಕಳೆದ ವರ್ಷ ಪ್ರಕ್ರಿಯೆ ಮುಗಿದು ಮೂರು ತಿಂಗಳ ಬಳಿಕ ಹಣ ರೈತರ ಕೈ ಸೇರಿತ್ತು. ಈ ವರ್ಷ ಸ್ವಲ್ಪ ಬೇಗ ಹಣ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಈ ನಿಟ್ಟಿನಲ್ಲಿ ಸಂಬAಧಪಟ್ಟ ಇಲಾಖೆ ಸರ್ಕಾರಕ್ಕೆ ಪತ್ರ ವ್ಯವಹಾರ ಕೂಡ ಆರಂಭಿಸಲಾಗಿದೆ. ಶೀಘ್ರದಲ್ಲಿ ಹಣ ಬಿಡುಗಡೆಯಾಗಲಿದೆ ಎಂದು ಅಧಿಕಾರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.