ಕಾಯಪಂಡ ಶಶಿ ಸೋಮಯ್ಯ ಮಡಿಕೇರಿ, ಫೆ. ೧೮: ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಇತ್ತೀಚೆಗೆ ರಾಷ್ಟçಪತಿಗಳಿಂದ ಲೋಕಾರ್ಪಣೆ ಗೊಂಡಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನದಲ್ಲಿ ಬರುವ ಜನರಲ್ ತಿಮ್ಮಯ್ಯ ಮ್ಯೂಸಿಯಂನ ವೀಕ್ಷಣೆಗೆ ಅಧಿಕ ಸಂಖ್ಯೆಯಲ್ಲಿ ಜನತೆ ಭೇಟಿ ನೀಡುತ್ತಿದ್ದಾರೆ. ತಾ.೬ರಂದು ‘ಸನ್ನಿಸೈಡ್’ ಉದ್ಘಾಟನೆಗೊಂಡಿದ್ದು, ತಾ. ೧೭ರ ತನಕ ಅಂದಾಜು ೮ ಸಾವಿರಕ್ಕೂ ಅಧಿಕ ಮಂದಿ ಭೇಟಿ ಜನರಲ್ ತಿಮ್ಮಯ್ಯ ಮ್ಯೂಸಿಯಂನ ವೀಕ್ಷಣೆಗೆ ಅಧಿಕ ಸಂಖ್ಯೆಯಲ್ಲಿ ಜನತೆ ಭೇಟಿ ನೀಡುತ್ತಿದ್ದಾರೆ. ತಾ.೬ರಂದು ‘ಸನ್ನಿಸೈಡ್’ ಉದ್ಘಾಟನೆಗೊಂಡಿದ್ದು, ತಾ. ೧೭ರ ತನಕ ಅಂದಾಜು ೮ ಸಾವಿರಕ್ಕೂ ಅಧಿಕ ಮಂದಿ ಭೇಟಿ ಅಧ್ಯಕ್ಷತೆಯಲ್ಲಿ ನಡೆಸಲಾಗಿರುವ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ವಯಸ್ಕರಿಗೆ ರೂ. ೩೦ ಹಾಗೂ ಮಕ್ಕಳಿಗೆ ರೂ. ೧೫ರಂತೆ ಪ್ರವೇಶ ಶುಲ್ಕ ನಿಗದಿಪಡಿಸಲು ತೀರ್ಮಾನಿಸಲಾಗಿದ್ದು, ಈ ವ್ಯವಸ್ಥೆ ಒಂದೆರಡು ದಿನಗಳಲ್ಲೇ ಅಧಿಕೃತವಾಗಿ ಜಾರಿಗೆ ಬರಲಿದೆ.

ಅತ್ಯಾಕರ್ಷಕವಾಗಿ ರೂಪು ಗೊಂಡಿರುವ ಸ್ಮಾರಕ ಭವನವನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡುವ ಅಗತ್ಯತೆಯೂ ಇದ್ದು, ಈ ನಿಟ್ಟಿನಲ್ಲಿ ಇದಕ್ಕಾಗಿ ಸಮಿತಿ ಯೊಂದನ್ನು ರಚಿಸಲೂ ತೀರ್ಮಾನಿಸಲಾಗಿದೆ. ಸದ್ಯದ ಮಟ್ಟಿಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಲಾಗಿದ್ದು, ಅನುಮೋದನೆಗಾಗಿ ಸರಕಾರಕ್ಕೆ ಕಳುಹಿಸಲಾಗಿದೆ.(ಮೊದಲ ಪುಟದಿಂದ)

ನೂತನ ಸಮಿತಿ : ಜಿಲ್ಲಾಧಿಕಾರಿಗಳು ಸಮಿತಿಯ ಅಧ್ಯಕ್ಷರಾಗಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ. ಉಳಿದಂತೆ ಜಿ.ಪಂ. ಸಿಇಓ, ಎಸ್.ಪಿ., ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರು, ತೋಟಗಾರಿಕೆ ಇಲಾಖಾ ಉಪ ನಿರ್ದೇಶಕರು, ಮಡಿಕೇರಿ ತಹಶೀಲ್ದಾರ್, ಸೈನಿಕ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಹಾಗೂ ನಗರಸಭಾ ಆಯುಕ್ತರು ಸದಸ್ಯರಾಗಿರುತ್ತಾರೆ. ಈ ಸಮಿತಿಗೆ ಅನುಮೋದನೆ ಕೋರಲಾಗಿದೆ. ಖಾಸಗಿ ವ್ಯಕ್ತಿ ಅಥವಾ ಸಂಸ್ಥೆಗಳ ಪ್ರಮುಖರ ನೇಮಕಾತಿ ವಿಚಾರಕ್ಕೆ ಸಂಬAಧಿಸಿದAತೆ ಮುಂದಿನ ದಿನಗಳಲ್ಲಿ ಸರಕಾರದ ಮಾರ್ಗಸೂಚಿ ಪ್ರಕಾರ ನಿರ್ಧರಿಸುವುದಾಗಿ ಜಿಲ್ಲಾಧಿಕಾರಿ ಚಾರುಲತ ಸೋಮಲ್ ‘ಶಕ್ತಿ’ಗೆ ತಿಳಿಸಿದ್ದಾರೆ. ಮ್ಯೂಸಿಯಂ ವೀಕ್ಷಣೆಗೆ ಬೆಳಿಗ್ಗೆ ೧೦ ರಿಂದ ಅಪರಾಹ್ನ ೧.೩೦ ಹಾಗೂ ೩ ರಿಂದ ಸಂಜೆ ೬ರ ತನಕ ಸಮಯ ನಿಗದಿಪಡಿಸಿರುವುದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ದರ್ಶನ್ ತಿಳಿಸಿದ್ದಾರೆ.

ಅನುದಾನಕ್ಕೆ ಪ್ರಸ್ತಾವನೆ : ಸ್ಮಾರಕದ ಅಚ್ಚುಕಟ್ಟಿನ ನಿರ್ವಹಣೆಗಾಗಿ ಸದ್ಯದ ಮಟ್ಟಿಗೆ ಕೆಲವು ಸಮಯ ಹಣಕಾಸಿನ ಅಗತ್ಯವಿರುವ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ ರೂ. ೧೦ ಲಕ್ಷ ಅನುದಾನಕ್ಕೆ ಕೋರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರೊಂದಿಗೆ ಉದ್ದೇಶಿತ ಯೋಜನೆಗೆ ಘೋಷಿಸಲ್ಪಟ್ಟು ಬಿಡುಗಡೆಗೆ ಬಾಕಿ ಇರುವ ರೂ. ೨.೭೫ ಕೋಟಿ ಅನುದಾನದ ಮಂಜೂರಾತಿಗೂ ಕೋರಿ ಸರಕಾರಕ್ಕೆ ಪ್ರಸ್ತಾವನೆಯನ್ನು ಜಿಲ್ಲಾಡಳಿತದ ಮೂಲಕ ಸಲ್ಲಿಸಲಾಗಿದೆ. ರಾಜಾಸೀಟು ಅಭಿವೃದ್ಧಿ ಸಮಿತಿ ಇರುವಂತೆ ಸರಕಾರದ ಮಾರ್ಗಸೂಚಿಯಂತೆ ಸ್ಮಾರಕ ಭವನಗಳ ನಿರ್ವಹಣಾ ಸಮಿತಿ ಎಂದಿದ್ದು ಈ ಸಮಿತಿಯ ಮೂಲಕ ಮ್ಯೂಸಿಯಂನ ನಿರ್ವಹಣೆ ಮುಂದಿನ ದಿನಗಳಲ್ಲಿ ನಡೆಯಬೇಕಾಗಿದೆ.