ಮಡಿಕೇರಿ, ಫೆ. ೧೯: ಕೊಡಗು ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಲಿಮ್ಕಾ ಬುಕ್ ಆಫ್ ದಾಖಲೆಯಾಗಿರುವ ಕೊಡವ ಕೌಟುಂಬಿಕ ಹಾಕಿ ಉತ್ಸವದ ಯಶಸ್ವಿ ಆಯೋಜನೆಗಾಗಿ ಬಜೆಟ್‌ನಲ್ಲಿ ರೂ. ೫ ಕೋಟಿಯ ಅನುದಾನ ಒದಗಿಸುವದು ಹಾಗೂ ಕೊಡಗಿನಲ್ಲಿ ಕ್ರೀಡಾ ವಿಶ್ವವಿದ್ಯಾನಿಲಯ ಸ್ಥಾಪನೆಗಾಗಿ ಕೋರಿ ನಿನ್ನೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.ನಿನ್ನೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಪ್ರಮುಖರ ನಿಯೋಗವೊಂದು ಈ ಕುರಿತಾಗಿ ಮುಖ್ಯಮಂತ್ರಿಗಳಿಗೆ ವಿವರ ಮಾಹಿತಿ ನೀಡುವದರೊಂದಿಗೆ ಅಗತ್ಯತೆಯ ಕುರಿತು ಮನವರಿಕೆ ಮಾಡಿಕೊಟ್ಟರು. ಬೆಂಗಳೂರು ಕೊಡವ ಸಮಾಜದ (ಮೊದಲ ಪುಟದಿಂದ) ಅಧ್ಯಕ್ಷ ಮುಕ್ಕಾಟಿರ ಟಿ. ನಾಣಯ್ಯ, ಜಿಲ್ಲಾ ಬಿಜೆಪಿ ಕಾರ್ಯಕಾರಿ ಸಮಿತಿ ಸದಸ್ಯ ತೇಲಪಂಡ ಶಿವಕುಮಾರ್ ನಾಣಯ್ಯ, ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ ಮನೆಯಪಂಡ ಎ. ಪೊನ್ನಪ್ಪ, ಕುಲ್ಲೇಟಿರ ಅಜಿತ್ ನಾಣಯ್ಯ, ಕುಲ್ಲೇಟಿರ ಬಿನ್ನಿ ಬೋಪಣ್ಣ, ಮುಕ್ಕಾಟಿರ ಪೂಣಚ್ಚ ಹಾಗೂ ಇತರರು ಸಿ.ಎಂ. ಯಡಿಯೂರಪ್ಪ ಹಾಗೂ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರೊಂದಿಗೆ ಚರ್ಚಿಸಿ ಮನವಿ ಸಲ್ಲಿಸಿದರು.

ಕೊಡವ ಸಂಸ್ಕೃತಿ, ಪರಂಪರೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಕೊಡವ ಹಾಕಿ ಹಬ್ಬಕ್ಕೆ ಪ್ರತಿ ವರ್ಷದ ರಾಜ್ಯ ಬಜೆಟ್‌ನಲ್ಲೇ ರೂ. ೫ ಕೋಟಿ ಅನುದಾನ ಮೀಸಲಿರಿಸಬೇಕು. ಕೌಟುಂಬಿಕ ಹಾಕಿ ಹಬ್ಬದಲ್ಲಿ ೨೦೧೮ರಲ್ಲಿ ೩೩೪ ಕುಟುಂಬಗಳು ಪಾಲ್ಗೊಂಡು ದಾಖಲೆ ಸೃಷ್ಟಿಯಾಗಿದೆ. ಅಲ್ಲದೆ, ಜನಾಂಗದ ಹಲವಾರು ಕ್ರೀಡಾಪಟುಗಳು ರಾಜ್ಯ - ರಾಷ್ಟçಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ಅಂತರರಾಷ್ಟಿçÃಯ ಮಟ್ಟದಲ್ಲೂ ದೇಶಕ್ಕೆ ಕೀರ್ತಿ ತಂದಿರುವದಾಗಿ ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಇದರೊಂದಿಗೆ ಕೊಡಗು ಕ್ರೀಡೆಗೆ ಹೆಸರಾದ ಜಿಲ್ಲೆಯಾಗಿದ್ದು, ಇಲ್ಲಿ ಹಲವಷ್ಟು ಬಡತನದಲ್ಲಿರುವ ಕ್ರೀಡಾಪಟುಗಳು, ಕ್ರೀಡಾಪ್ರತಿಭೆಗಳು ಇವೆ. ಇವರಿಗೆ ಸದವಕಾಶ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ - ಕೇಂದ್ರದೊAದಿಗೆ ವ್ಯವಹರಿಸಿ ಕೊಡಗಿನಲ್ಲಿ ವಿಶೇಷವಾದ ಕ್ರೀಡಾ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಬೇಕೆಂದೂ ಈ ಸಂದರ್ಭ ಮನವಿ ಮಾಡಲಾಯಿತು. ಅನುದಾನ ಹಾಗೂ ಕ್ರೀಡಾ ವಿ.ವಿ. ಕುರಿತಾಗಿ ಸಂಸದ ಪ್ರತಾಪ್ ಸಿಂಹ ಅವರು ಸಹ ಗಮನ ಸೆಳೆದಿರುವದನ್ನು ಪ್ರಸ್ತಾಪಿಸಲಾಯಿತಲ್ಲದೆ, ಕೊಡವ ಹಾಕಿ ಅಕಾಡೆಮಿಯ ಪ್ರತ್ಯೇಕ ಮನವಿಯನ್ನೂ ಮುಖ್ಯಮಂತ್ರಿಗಳಿಗೆ ನೀಡಲಾಯಿತು. ಇದಕ್ಕೆ ಮುಖ್ಯಮಂತ್ರಿಗಳು ಪೂರಕವಾಗಿ ಸ್ಪಂದಿಸಿರುವದಾಗಿ ನಾಪೋಕ್ಲು ಕೊಡವ ಸಮಾಜದ ಕಾರ್ಯದರ್ಶಿಯಾಗಿರುವ ಕುಲ್ಲೇಟಿರ ಅಜಿತ್ ನಾಣಯ್ಯ ಅವರು ತಿಳಿಸಿದ್ದಾರೆ.

ಹಾಕಿ ಅನುದಾನಕ್ಕೆ ಮನವಿ

ಕೊಡವ ಹಾಕಿ ಹಬ್ಬಕ್ಕೆ ಪ್ರತಿವರ್ಷ ಸರ್ಕಾರದ ಮೂಲಕ ೪೦ ಲಕ್ಷ ರೂ. ನೀಡುವುದಾಗಿ ಈ ಹಿಂದೆ ಭರವಸೆ ದೊರೆತಿತ್ತು. ೨೦೧೮ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ನಡೆದ ಕುಲ್ಲೇಟಿರ ಹಾಕಿ ಹಬ್ಬಕ್ಕೆ ಸಂಬAಧಿಸಿದAತೆ ಸರ್ಕಾರದಿಂದ ಬರಬೇಕಾಗಿರುವ ೪೦ ಲಕ್ಷ ರೂ. ಇಲ್ಲಿಯವರೆಗೆ ಬಿಡುಗಡೆಯಾಗಿಲ್ಲ ಎಂದು ಮುಖ್ಯಮಂತ್ರಿಗಳ ಗಮನ ಸೆಳೆದ ತೇಲಪಂಡ ಶಿವಕುಮಾರ್ ನಾಣಯ್ಯ ಅವರು ಈ ಹಣವನ್ನು ತಕ್ಷಣ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.