ಸೋಮವಾರಪೇಟೆ, ಫೆ.೧೯: ಆನೆದಂತ ಮತ್ತು ಜಿಂಕೆಯ ಕೊಂಬನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಪ್ರಕರಣವನ್ನು ಪತ್ತೆಹಚ್ಚಿರುವ ಇಲ್ಲಿನ ಪೊಲೀಸ್ ಅರಣ್ಯ ಸಂಚಾರಿ ದಳದ ಅಧಿಕಾರಿಗಳು, ಮಾಲಿನೊಂದಿಗೆ ಓರ್ವ ಆರೋಪಿಯನ್ನು ವಶಕ್ಕೆ ಪಡೆದಿ ದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೋರ್ವ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.(ಮೊದಲ ಪುಟದಿಂದ) ಕೊಡಗು-ಹಾಸನ ಗಡಿ ಭಾಗವಾಗಿರುವ ಬಾಣಾವರ ಬಳಿಯಲ್ಲಿ ಹಾಸನ ಜಿಲ್ಲೆ, ಕೊಣನೂರು ಹೋಬಳಿ, ಬೆಟ್ಟಗಳಲೆ ಗ್ರಾಮ ನಿವಾಸಿಗಳಾದ ಕೃಷ್ಣೇಗೌಡ ಅವರ ಪುತ್ರ ಬಿ.ಕೆ. ಪ್ರಸನ್ನ ಬಂಧಿತ ಆರೋಪಿ. ಈತನೊಂದಿಗೆ ಆಗಮಿಸಿದ್ದ ಬೆಟ್ಟಗಳಲೆ ಗ್ರಾಮದ ಪುಲಕೇಶಿ ಅವರ ಪುತ್ರ ಗಿರೀಶ್ ಎಂಬಾತ ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ ಸಂದರ್ಭ ಸ್ಥಳದಿಂದ ಓಡಿ ಪರಾರಿಯಾಗಿದ್ದಾನೆ.

ಈರ್ವರು ಆರೋಪಿಗಳು ಮೈಸೂರಿನ ವ್ಯಕ್ತಿಯೋರ್ವರಿಗೆ ಆನೆದಂತ ಹಾಗೂ ಜಿಂಕೆಯ ಕೊಂಬನ್ನು ಮಾರಾಟ ಮಾಡಲು ಇಂದು ಬೆಳಿಗ್ಗೆ ೧೦ ಗಂಟೆ ಸುಮಾರಿಗೆ ಬಾಣಾವರ ಬಳಿಯಲ್ಲಿ ಕಾಯುತ್ತಿದ್ದ ಸಂದರ್ಭ ಪೊಲೀಸ್ ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು ಧಾಳಿ ನಡೆಸಿದ್ದಾರೆ.

ದಂತ ಹಾಗೂ ಜಿಂಕೆಯ ಕೊಂಬುಗಳನ್ನು ಮಾರಾಟ ಮಾಡಲು ಹೊಂಚು ಹಾಕುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆ ಸ್ಥಳಕ್ಕೆ ತೆರಳಿದ ಅಧಿಕಾರಿಗಳು, ಆರೋಪಿ ಬಳಿಯಿದ್ದ ಒಂದು ಆನೆ ದಂತ ಹಾಗೂ ಜಿಂಕೆಯ ಕೊಂಬು ಸಹಿತ ಕೃತ್ಯಕ್ಕೆ ಬಳಸಿದ್ದ ಹೀರೋ ಹೋಂಡಾ ಬೈಕ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿಯ ವಿರುದ್ಧ ವನ್ಯ ಜೀವಿ ಸಂರಕ್ಷಣಾ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿಕೊಂಡು, ನ್ಯಾಯಾಲಯಕ್ಕೆ ಹಾಜರುಪಡಿಸಿದ ಮೇರೆ ನ್ಯಾಯಾಧೀಶರು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

ಪೊಲೀಸ್ ಅರಣ್ಯ ಸಂಚಾರಿ ದಳದ ಎಸ್.ಪಿ. ಸುರೇಶ್‌ಬಾಬು ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿಎಸ್‌ಐ ಎಂ.ಡಿ. ಅಪ್ಪಾಜಿ, ಮುಖ್ಯಪೇದೆ ಚಂಗಪ್ಪ, ರಮೇಶ್, ಎಆರ್‌ಎಸ್‌ಐ ಗಣೇಶ್ ಅವರುಗಳು ಭಾÀಗವಹಿಸಿದ್ದರು.