ಕರಿಕೆ, ಫೆ. ೧೯: ಕೆಲದಿನಗಳಿಂದ ಕೇರಳದಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ಕೊರೊನಾದಿಂದಾಗಿ ಗಡಿ ಭಾಗವಾದ ಕೊಡಗಿನಲ್ಲಿ ಮತ್ತೆ ಆತಂಕ ಶುರುವಾಗಿದ್ದು, ಈ ನಿಟ್ಟಿನಲ್ಲಿ ರಾಜ್ಯ ಸರಕಾರ ನಿರ್ದೇಶನದಂತೆ ಕೊಡಗು ಜಿಲ್ಲಾಡಳಿತ ಆದೇಶದ ಮೇರೆಗೆ ತಪಾಸಣೆಗಾಗಿ ಜಿಲ್ಲಾ ಆರೋಗ್ಯ ಘಟಕದ ಹಿರಿಯ ಆರೋಗ್ಯ ನಿರೀಕ್ಷಕರ ತಂಡವನ್ನು ಕರ್ತವ್ಯಕ್ಕೆ ನೇಮಿಸಿದೆ.
ಈ ಬಗ್ಗೆ ‘ಶಕ್ತಿ'ಯು ಗಡಿಭಾಗದಲ್ಲಿ ಕಟ್ಟುನಿಟ್ಟಿನ ತಪಾಸಣೆಯಾಗಬೇಕೆಂದು ವರದಿ ಮಾಡಿತ್ತು.