ಪೊಲೀಸರ ಮೇಲೆ ಗುಂಡಿನ ಸುರಿಮಳೆಗರೆದು ಉಗ್ರ ಪರಾರಿ

ಶ್ರೀನಗರ, ಫೆ. ೧೯: ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದು, ಹಾಡಹಗಲೇ ಹತ್ತಾರು ಸಾರ್ವಜನಿಕರನ ನಡುವೆಯೇ ರಾಜಾರೋಷವಾಗಿ ಬಂದ ಉಗ್ರ ಪೊಲೀಸರ ಮೇಲೆ ಗುಂಡಿನ ಮಳೆಗರೆದು ಪರಾರಿಯಾಗಿರುವ ಘಟನೆ ಶ್ರೀನಗರದಲ್ಲಿ ನಡೆದಿದೆ. ಒಂದೆಡೆ ಶೋಪಿಯಾನ್‌ನಲ್ಲಿ ಉಗ್ರರ ವಿರುದ್ಧ ಭದ್ರತಾ ಪಡೆಗಳು ಎನ್‌ಕೌಂಟರ್ ಕಾರ್ಯಾಚರಣೆ ನಡೆಸಿರುವಂತೆಯೇ ಇತ್ತ ಇದಕ್ಕೆ ಪ್ರತಿಯಾಗಿ ದಾಳಿ ನಡೆಸಿರುವ ಉಗ್ರರು ಶ್ರೀನಗರದ ಬಾಗಾಟ್ ಬಾರ್ಜುಲ್ಲಾ ಪ್ರದೇಶದಲ್ಲಿ ಹಾಡಹಗಲೇ ಪೊಲೀಸರ ಮೇಲೆ ಗುಂಡಿನ ಮಳೆಗರೆದು ಪರಾರಿಯಾಗಿದ್ದಾರೆ. ಶ್ರೀನಗರದ ಬಾಗಾಟ್ ಬಾರ್ಜುಲ್ಲಾ ಪ್ರದೇಶದಲ್ಲಿ ಅಂಗಡಿಯೊAದರ ಬಳಿ ಇಬ್ಬರು ಪೊಲೀಸರು ನಿಂತಿದ್ದ ವೇಳೆ ಅಲ್ಲಿಗೆ ಆಗಮಿಸಿದ ಶಸ್ತçಧಾರಿ ಉಗ್ರ ನೋಡ ನೋಡುತ್ತಿದ್ದಂತೆಯೇ ಬಂದೂಕು ತೆಗೆದು ಪೊಲೀಸರ ಮೇಲೆ ಗುಂಡಿನ ಸುರಿಮಳೆಗರೆದಿದ್ದಾನೆ. ಬಳಿಕ ಅಲ್ಲಿಂದ ಕೂಡಲೇ ಪರಾರಿಯಾಗಿದ್ದಾನೆ. ಉಗ್ರ ಗುಂಡು ಹಾರಿಸುವ ವೇಳೆ ಪಕ್ಕದಲ್ಲೇ ಸಾಕಷ್ಟು ಜನರಿದ್ದರಾದರೂ ಆತನನ್ನು ಹಿಡಿಯುವ ಅಥವಾ ಆತನನ್ನು ತಡೆಯುವ ಪ್ರಯತ್ನವನ್ನು ಯಾರೂ ಮಾಡಿಲ್ಲ. ಬದಲಿಗೆ ಅಲ್ಲಿಂದ ಪರಾರಿಯಾಗಲು ಯತ್ನಿಸುತ್ತಿದ್ದರು. ಇವಿಷ್ಟೂ ಘಟನೆ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಈ ವೀಡಿಯೋ ಇದೀಗ ವೈರಲ್ ಆಗಿದೆ. ಇನ್ನು ಉಗ್ರನ ಗುಂಡಿನ ದಾಳಿಯಲ್ಲಿ ಇಬ್ಬರು ಪೊಲೀಸರು ತೀವ್ರ ಗಾಯಗೊಂಡಿದ್ದರು. ಈ ವಿಚಾರ ತಿಳಿಯುತ್ತಲೇ ಸ್ಥಳಕ್ಕಾಗಮಿಸಿದ ಪೊಲೀಸರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಪೊಲೀಸರು ಆಸ್ಪತ್ರೆಗೆ ಸಾಗಿಸಿದ್ದಾರೆಯಾದರೂ ಇಬ್ಬರೂ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮೃತ ಪೊಲೀಸರನ್ನು ವಿಶೇಷ ಭದ್ರತಾ ಅಧಿಕಾರಿಗಳಾದ ಸಿ.ಟಿ. ಮೊಹಮ್ಮದ್ ಯೂಸುಫ್ ಮತ್ತು ಸಿ.ಟಿ. ಸುಹೇಲ್ ಅಹ್ಮದ್ ಎಂದು ಗುರುತಿಸಲಾಗಿದೆ. ಪ್ರಸ್ತುತ ಘಟನಾ ಪ್ರದೇಶದಲ್ಲಿ ಪೊಲೀಸರು ಮತ್ತು ಸೇನೆ ಪರಾರಿಯಾದ ಶೋಧ ಕಾರ್ಯಾಚರಣೆ ಆರಂಭಿಸಿದ್ದು, ಭಾಗತ್ ವಲಯ, ಬಾರಮುಲ್ಲಾ ಸೇರಿದಂತೆ ಕೆಲೆವೆಡೆ ಹೈಅಲರ್ಟ್ ಕೂಡ ಘೋಷಿಸಲಾಗಿದೆ.

ಪೂರ್ವ ಲಡಾಕ್ ಗಡಿ ವಿವಾದ : ಇಂದು ಮಾತುಕತೆ

ನವದೆಹಲಿ, ಫೆ. ೧೯: ಭಾರತ-ಚೀನಾ ಮಧ್ಯೆ ಪೂರ್ವ ಲಡಾಕ್ ಗಡಿ ವಿವಾದಕ್ಕೆ ಸಂಬAಧಪಟ್ಟAತೆ ೧೦ನೇ ಸುತ್ತಿನ ಮಾತುಕತೆ ಇಂದು ಏರ್ಪಡಲಿದೆ. ಭಾರತ ಮತ್ತು ಚೀನಾದ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ನಡೆಯಲಿದ್ದು ಅದಕ್ಕೂ ಮುನ್ನ ಪಾಂಗೊAಗ್‌ತ್ಸೊ ಸರೋವರದ ಉತ್ತರ ಮತ್ತು ದಕ್ಷಿಣ ತೀರಗಳಿಂದ ಸೇನಾಪಡೆಗಳನ್ನು ಹಿಂಪಡೆಯುವ ಪ್ರಕ್ರಿಯೆ ಪೂರ್ಣಗೊಂಡಿದೆ. ಈ ವಿದ್ಯಮಾನದ ಬಗ್ಗೆ ಮಾಹಿತಿ ನೀಡಿದ ಸೇನಾಪಡೆಯ ಹಿರಿಯ ಅಧಿಕಾರಿ ನಾಳೆ ಬೆಳಿಗ್ಗೆ ೧೦ ಗಂಟೆಗೆ ಸಭೆ ಮೊಲ್ಡೊದಲ್ಲಿ ಆರಂಭ ವಾಗಲಿದೆ ಎಂದರು. ಕಳೆದ ಜನವರಿ ೨೪ ರಂದು ಒಂಭತ್ತನೇ ಸುತ್ತಿನ ಮಾತುಕತೆ ಮೊಲ್ಡೊದಲ್ಲಿ ಏರ್ಪಟ್ಟಿತ್ತು. ಪೂರ್ವ ಲಡಾಕ್‌ನ ಭಾರತೀಯ ಕುಶುಲ್ ವಲಯದ ಗಡಿ ವಾಸ್ತವ ರೇಖೆಯ ಚೀನಾದ ಭಾಗ ಮೊಲ್ಡೊದಲ್ಲಿಯೇ ಕಳೆದ ಬಾರಿ ೯ನೇ ಸುತ್ತಿನ ಮಾತುಕತೆ ಏರ್ಪಟ್ಟಿತ್ತು. ಇಂದಿನ ಸಭೆಯಲ್ಲಿ ಭಾರತದ ಕಡೆಯಿಂದ ಲೆಫ್ಟಿನೆಂಟ್ ಜನರಲ್ ಪಿಜಿಕೆ ಮೆನನ್, ೧೪ ಕಾರ್ಪ್ಸ್ ಕಮಾಂಡರ್ ಮತ್ತು ಚೀನಾದ ಕಡೆಯಿಂದ ಮೇಜರ್ ಜನರಲ್ ಲಿನ್ ಲಿಯು, ದಕ್ಷಿಣ ಕ್ಸಿಂಜಿಯಾನ್ ಮಿಲಿಟರಿ ಜಿಲ್ಲೆಯ ಕಮಾಂಡರ್ ಭಾಗವಹಿಸಲಿದ್ದಾರೆ.

ದಿಶಾ ರವಿ ಮೂರು ದಿನಗಳ ನ್ಯಾಯಾಂಗ ಬಂಧನಕ್ಕೆ

ನವದೆಹಲಿ, ಫೆ. ೧೯: ಟೂಲ್ ಕಿಟ್ ದಾಖಲೆ ಪ್ರಕರಣಕ್ಕೆ ಸಂಬAಧಿಸಿದAತೆ ಹವಾಮಾನ ಕಾರ್ಯಕರ್ತೆ ದಿಶಾ ರವಿ ಅವರನ್ನು ಮೂರು ದಿನಗಳ ನ್ಯಾಯಾಂಗ ಬಂಧನಕ್ಕೆ ದೆಹಲಿ ನ್ಯಾಯಾಲಯ ಒಪ್ಪಿಸಿದೆ. ಈ ಪ್ರಕರಣದಲ್ಲಿ ದಿಶಾ ರವಿ ಅವರ ಅಗತ್ಯವಿರುವುದರಿಂದ ತಮ್ಮ ವಶಕ್ಕೆ ನೀಡುವಂತೆ ದೆಹಲಿ ಪೊಲೀಸರು ನ್ಯಾಯಾಧೀಶರ ಬಳಿ ಮನವಿ ಮಾಡಿಕೊಂಡರು. ದೇಶದ್ರೋಹ, ಪಿತೂರಿ ಆರೋಪ ಎದುರಿಸುತ್ತಿರುವ ದಿಶಾ ರವಿ ಅವರನ್ನು ಬೆಂಗಳೂರಿನ ಅವರ ಮನೆಯಿಂದ ಕಳೆದ ವಾರ ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿತ್ತು. ನ್ಯಾಯಾಲಯ ೫ ದಿನಗಳ ಕಾಲ ಪೊಲೀಸರ ವಿಚಾರಣೆಗೆ ನೀಡಿತ್ತು. ಆ ಅವಧಿ ಮುಗಿದ ಹಿನ್ನೆಲೆ ೩ ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದಕ್ಕೂ ಮುನ್ನ ತಮ್ಮ ವಿರುದ್ಧದ ಎಫ್‌ಐಆರ್‌ಗೆ ಸಂಬAಧಿಸಿದAತೆ ಮಾಹಿತಿಯನ್ನು ಮಾಧ್ಯಮಗಳಿಗೆ ಪೊಲೀಸರು ಮಾಹಿತಿ ಸೋರಿಕೆ ಮಾಡಿದ್ದಾರೆ, ಪ್ರಕರಣಕ್ಕೆ ಸಂಬAಧಿಸಿದAತೆ ಯಾವುದೇ ದಾಖಲೆಗಳನ್ನು ಮಾಧ್ಯಮಗಳಿಗೆ ನೀಡದಂತೆ ಪೊಲೀಸರಿಗೆ ನಿರ್ದೇಶಿಸುವಂತೆ ದಿಶಾ ರವಿ ಮನವಿ ಮಾಡಿಕೊಂಡಿದ್ದಳು.

ನಕ್ಸಲರು ಪೊಲೀಸರಿಗೆ ಶರಣು

ದಾಂತೇವಾಡ, ಫೆ. ೧೯: ನಕ್ಸಲ್ ಪೀಡಿತ ದಾಂತೇವಾಡದಲ್ಲಿ ಇಬ್ಬರು ದಂಪತಿಗಳ ಸಹಿತ ಆರು ಮಂದಿ ನಕ್ಸಲರು ಪೊಲೀಸರ ಬಳಿ ಶರಣಾಗತರಾಗಿದ್ದಾರೆ. ದಾಂತೇವಾಡ ಜಿಲ್ಲೆಯಲ್ಲಿ ಇಬ್ಬರು ದಂಪತಿ ಸಹಿತ ಆರು ಮಂದಿ ನಕ್ಸಲರು ಶರಣಾಗತರಾಗಿದ್ದು, ಶರಣಾಗತ ನಕ್ಸಲರ ಮೇಲೆ ಒಟ್ಟು ರೂ. ೧೫ ಲಕ್ಷ ಬಹುಮಾನ ಘೋಷಣೆ ಮಾಡಲಾಗಿತ್ತು ಎಂದು ತಿಳಿದುಬಂದಿದೆ. ಈ ಕುರಿತಂತೆ ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಪಲ್ಲವ ಅವರು, ಮಾವೊವಾದಿಗಳ ಪೊಳ್ಳು ತತ್ವಗಳಿಂದ ನಿರಾಶೆಗೊಂಡಿದ್ದ ನಕ್ಸಲರು ಇದೀಗ ಶರಣಾಗಿದ್ದಾರೆ. ಪೊಲೀಸರು ಮೊದಲಿನಿಂದಲೂ ನಕ್ಸಲರು ಮರಳಿ ಮನೆಗೆ ಬರಲು ಪ್ರೋತ್ಸಾಹ ನೀಡುತ್ತಿದ್ದರು. ಈ ಕುರಿತ ಪೊಲೀಸರ ಲೋನ್ ವರೋತ (ಮರಳಿ ಮನೆಗೆ) ಅಭಿಯಾನ ನಮ್ಮನ್ನು ಹಿಂಸೆ ತೊರೆಯುವಂತೆ ಪ್ರೇರೇಪಿಸಿದೆ ಎಂದು ಹೇಳಿರುವ ನಕ್ಸಲ್ ಕಾರ್ಯಕರ್ತರು ಸಿಆರ್‌ಪಿಎಫ್ ಅಧಿಕಾರಿಗಳ ಎದುರು ಶರಣರಾಗತರಾದರು ಎಂದು ಹೇಳಿದ್ದಾರೆ.