ಮಡಿಕೇರಿ. ಫೆ. ೧೭: ಸಿಎನ್‌ಸಿ ಸಂಘಟನೆಯ ಎನ್.ಯು. ನಾಚಪ್ಪ ಅವರು ಕೊಡಗನ್ನು ಆಳಿದ ಅರಸರ ಬಗ್ಗೆ ಕಾಲ್ಪನಿಕ ಕಥೆಯೊಂದನ್ನು ಪ್ರಚೋದನಾಕಾರಿಯಾಗಿ ಹರಿಬಿಟ್ಟಿದ್ದಾರೆ ಎಂದು ಆರೋಪಿಸಿ ರುವ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕ, ಅರಸರ ತೆಜೋವಧೆಯನ್ನು ತಕ್ಷಣ ನಿಲ್ಲಿಸಬೇಕೆಂದು ಒತ್ತಾಯಿಸಿದೆ.

ನಗರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಹಾಸಭಾದ ಜಿಲ್ಲಾಧ್ಯಕ್ಷ ಹೆಚ್.ವಿ. ಶಿವಪ್ಪ ಹಾಗೂ ಉಪಾಧ್ಯಕ್ಷ ಮಡಿಕೇರಿ. ಫೆ. ೧೭: ಸಿಎನ್‌ಸಿ ಸಂಘಟನೆಯ ಎನ್.ಯು. ನಾಚಪ್ಪ ಅವರು ಕೊಡಗನ್ನು ಆಳಿದ ಅರಸರ ಬಗ್ಗೆ ಕಾಲ್ಪನಿಕ ಕಥೆಯೊಂದನ್ನು ಪ್ರಚೋದನಾಕಾರಿಯಾಗಿ ಹರಿಬಿಟ್ಟಿದ್ದಾರೆ ಎಂದು ಆರೋಪಿಸಿ ರುವ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕ, ಅರಸರ ತೆಜೋವಧೆಯನ್ನು ತಕ್ಷಣ ನಿಲ್ಲಿಸಬೇಕೆಂದು ಒತ್ತಾಯಿಸಿದೆ.

ನಗರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಹಾಸಭಾದ ಜಿಲ್ಲಾಧ್ಯಕ್ಷ ಹೆಚ್.ವಿ. ಶಿವಪ್ಪ ಹಾಗೂ ಉಪಾಧ್ಯಕ್ಷ ಎಲ್ಲಾ ರಾಜರು ಶಾಂತಿ ಪ್ರಿಯರು ಮತ್ತು ಸೇವಾ ಮನೋಭಾವನೆಯ ವ್ಯಕ್ತಿಗಳು. ಜನರ ಕಷ್ಟಗಳಿಗೆ ಸ್ಪಂದಿಸಿ ಜಮ್ಮಾ, ಜಹಗೀರು, ಬಾಣೆ ಹೀಗೆ ೩೪ ವಿಧದ ಜಾಗಗಳನ್ನು ಎಲ್ಲಾ ಜನಾಂಗದವರಿಗೆ ಮಂಜೂರು ಮಾಡಿ ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಆಡಳಿತ ನಡೆಸಿದ್ದಾರೆ. ಬ್ರಿಟಿಷರು ಕೊಡಗಿನ ಕೊನೆಯ ರಾಜ ಚಿಕ್ಕವೀರ ರಾಜೇಂದ್ರರನ್ನು ಮೋಸದಿಂದ ಸೆರೆ ಹಿಡಿಯಲು ಮತ್ತು ಕೊಡಗನ್ನು ವಶಪಡಿಸಿಕೊಳ್ಳಲು ಮುಂದಾದಾಗ ಆಸ್ಥಾನದಲ್ಲಿನ ದಿವಾನರು ಬೆಂಬಲಕ್ಕೆ ನಿಂತ ಸಂದರ್ಭ ಮಾತಂಡ ಅಚ್ಚಪ್ಪ ದಿವಾನರು ಅರಸರ ರಕ್ಷಣೆಗೆ ಬಂದರು. ಈ ರೀತಿಯ ವ್ಯಕ್ತಿಗಳನ್ನು ನಮ್ಮ ಸಮಾಜ ಸದಾ ಗೌರವಿಸುತ್ತದೆ ಎಂದು ಹೆಚ್.ವಿ. ಶಿವಪ್ಪ ಹಾಗೂ ಜಿ.ಎಂ. ಕಾಂತರಾಜು ತಿಳಿಸಿದರು.

ಕೊಡವರನ್ನು ಎಸ್.ಟಿ. ಪಂಗಡಕ್ಕೆ ಸೇರಿಸಲು ಯಾರೂ ವಿರೋಧ ವ್ಯಕ್ತ ಪಡಿಸುತ್ತಿಲ್ಲ. ಆದರೆ ಕೊಡವೇತರರನ್ನು ಓಡಿಸುವ ವರ್ತನೆಗೆ ನಮ್ಮ ವಿರೋಧವಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರುಗಳು ಕೊಡಗಿನ ಇತಿಹಾಸದ ಬಗ್ಗೆ ಬಹಿರಂಗ ಚರ್ಚೆಗೆ ನಾವುಗಳು ಸಿದ್ದವಿದ್ದು ಸಿಎನ್‌ಸಿ ವೇದಿಕೆ ಸೃಷ್ಟಿಸಲಿ ಎಂದು ಸವಾಲು ಹಾಕಿದರು.

ಸುದ್ದಿಗೋಷ್ಠಿಯಲ್ಲಿ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮಿಗಳು, ಮಹಾಸಭಾದ ಪ್ರಧಾನ ಕಾರ್ಯದರ್ಶಿ ಟಿ.ಎಸ್. ಶಾಂಭ ಶಿವಮೂರ್ತಿ, ಖಜಾಂಚಿ ಹೆಚ್.ಬಿ. ಉದಯಕುಮಾರ್ ಹಾಗೂ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಕೆ.ಬಿ. ಹಾಲಪ್ಪ ಉಪಸ್ಥಿತರಿದ್ದರು.