ವೀರಾಜಪೇಟೆ, ಫೆ. ೧೭: ಕಳೆದ ೯ ದಿನಗಳಿಂದ ತೈಲ ಕಂಪನಿಗಳು ಪೆಟ್ರೋಲ್, ಡೀಸೆಲ್, ಅಡುಗೆ ಅನಿಲಗಳ ಬೆಲೆ ಏರಿಕೆ ಮಾಡುತ್ತಲೆ ಇದೆ. ದರ ಏರಿಕೆಯ ಕೇಂದ್ರದ ನೀತಿಯಿಂದ ಜನಸಾಮಾನ್ಯರ ಬದುಕು ತತ್ತರಿಸಿ ಹೋಗಿದೆ. ತಿಳಿದು ತಿಳಿಯದಂತೆ ಕೇಂದ್ರ ರಾಜ್ಯ ಸರ್ಕಾರಗಳು ಮೌನವಾಗಿರುವುದು ನ್ಯಾಯವಲ್ಲ. ಆದ್ದÀರಿಂದ ತಕ್ಷಣ ದೇಶದ ಜನರ ಹಿತಕ್ಕಾಗಿ ತೈಲ ಬೆಲೆ ಇಳಿಕೆ ಮಾಡುವಂತೆ ವೀರಾಜಪೇಟೆ ನಗರ ಐಕ್ಯ ಹೋರಾಟ ಸಮಿತಿ ಇಂದು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಮನವಿಯನ್ನು ಉಪತಹಶೀಲ್ದಾರ್ ಮೂಲಕ ರಾಷ್ಟçಪತಿಗಳಿಗೆ ಸಲ್ಲಿಸಲಾಯಿತು.
ಐಕ್ಯ ವೇದಿಕೆಯ ಪ್ರಮುಖರು ಹಾಗೂ ಜೆಡಿಎಸ್ ಮುಖಂಡರಾದ ಎಸ್.ಎಚ್.ಮತೀನ್ ಅವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ತಾಲೂಕು ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಾಲೂಕು ತಹಶೀಲ್ದಾರ್ ಅವರ ಮೂಲಕ ಮನವಿ ಸಲ್ಲಿಸಿದೆ.
ಸರಕಾರ ಜನವಿರೋಧಿ ನೀತಿಯನ್ನು ಅನುಸರಿಸಿ ಪ್ರತಿಯೊಂದು ಕ್ಷೇತ್ರದಲ್ಲಿ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಮತೀನ್ ದೂರಿದರು.
ಪ್ರತಿಭಟನೆಗಾರರನ್ನುದ್ದೇಶಿಸಿ ಐಕ್ಯ ವೇದಿಕೆ ಪರವಾಗಿ ಯೋಗೀಶ್ ನಾಯ್ಡು ಮಾತನಾಡಿದರು. ಪ್ರತಿಭಟನೆಯಲ್ಲಿ ಭಾರತ ಕಮ್ಯುನಿಷ್ಟ್ ಪಕ್ಷ, ಭಾರತ ಕಮ್ಯುನಿಷ್ಟ್ ಪಕ್ಷ (ಎಂ) ಜೆಡಿಎಸ್, ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ ದಲಿತ ಸಂಘರ್ಷ ಸಮಿತಿಗಳು ಕಾರ್ಯಕರ್ತರುಗಳು ಭಾಗವಹಿಸಿದ್ದರು.