ಮಡಿಕೇರಿ, ಫೆ. ೧೬: ಜಾತ್ಯತೀತ ಜನತಾದಳದ ರಾಜ್ಯಾಧ್ಯಕ್ಷರ ಆದೇಶದಂತೆ ಕೊಡಗು ಜಿಲ್ಲಾ ಜೆಡಿಎಸ್ನ ಜಿಲ್ಲಾ ಮತ್ತು ತಾಲೂಕುಗಳ ಎಲ್ಲಾ ಘಟಕಗಳನ್ನು ವಿಸರ್ಜಿಸಲಾಗಿದ್ದು, ಜಿಲ್ಲಾಧ್ಯಕ್ಷರು ತಾತ್ಕಾಲಿಕವಾಗಿ ಮುಂದುವರೆಯಲಿ ದ್ದಾರೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ. ೨೩ ರಂದು ಜಿಲ್ಲೆಗೆ ಭೇಟಿ ನೀಡುವ ವೀಕ್ಷಕರ ಉಪಸ್ಥಿತಿಯಲ್ಲಿ ಜಿಲ್ಲಾಮಟ್ಟದ ಅಡ್ ಹಾಕ್ ಸಮಿತಿ ರಚನೆಯಾಗಲಿದೆ ಎಂದರು.
ತಾ. ೨೩ ರಂದು ನಗರದ ವಾಣಿಜ್ಯೋದ್ಯಮಿಗಳ ಸಹಕಾರ ಸಂಘದ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಜೆಡಿಎಸ್ ವೀಕ್ಷಕ ಬಿ.ಬಿ. ಲಿಂಗಯ್ಯ, ಸಂಸದ ಪ್ರಜ್ವಲ್ ರೇವಣ್ಣ, ಪಕ್ಷದ ವಕ್ತಾರ ವೈಎಸ್ವಿ ದತ್ತಾ, ರಾಜ್ಯ ನಾಯಕರುಗಳಾದ ಬಿ.ಬಿ. ಯಶೋಧ, ನಜ್ಮಾ ನಜೀರ್ ಮೊದಲಾದ ಗಣ್ಯರ ಉಪಸ್ಥಿತಿಯಲ್ಲಿ ಪಕ್ಷದ ಪ್ರಮುಖರ ಸಭೆ ನಡೆಯಲಿದ್ದು, ಅಡ್ ಹಾಕ್ ಸಮಿತಿ ರಚನೆಯಾಗಲಿದೆ ಎಂದರು.
ರಾಜ್ಯ ನಾಯಕರ ಚಿಂತನೆಯAತೆ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಬೂತ್ ಸಮಿತಿಗಳ ರಚನೆ ನೂತನವಾಗಿ ನಡೆಯಲಿದ್ದು, ಬಳಿಕ ಪಂಚಾಯಿತಿ ಮಟ್ಟದ ಸಮಿತಿ ರಚನೆಯಾಗಲಿದೆ. ಪ್ರÀತಿಯೊಂದು ಗ್ರಾಮ ಪಂಚಾಯಿತಿಯಿAದ ಒಬ್ಬರು ಪ್ರತಿನಿಧಿ ಒಳಗೊಂಡAತೆ ಹಾಗೂ ಹತ್ತು ಮಂದಿ ಪುರಸಭೆ ಇಲ್ಲವೆ ನಗರಸಭೆ ಇಲ್ಲವೆ ಪಟ್ಟಣ ಪಂಚಾಯಿತಿಯ ಪ್ರತಿನಿಧಿಗಳನ್ನು ಒಳಗೊಂಡAತೆ ೧೦೨ ಮಂದಿ ಸದಸ್ಯರನ್ನು ಮೀರದಂತೆ ತಾಲೂಕು ಕಾರ್ಯಕಾರಿಣಿ ಸಮತಿ ರಚನೆೆಯಾಗಲಿದೆ. ಬಳಿಕ ಪ್ರತಿ ತಾಲೂಕು ಮಟ್ಟದಿಂದ ಇಬ್ಬರು ಪ್ರತಿನಿಧಿಗಳು, ಸ್ಥಳೀಯ ಸಂಸ್ಥೆಯ ಪಕ್ಷದ ಮುಖಂಡರುಗಳನ್ನು ಒಳಗೊಂಡAತೆ ೧೦೦ ಮಂದಿಯನ್ನು ಮೀರದಂತೆ ಜಿಲ್ಲಾ ಘಟಕವನ್ನು ರಚಿಸಲಾಗುತ್ತದೆ. ಅಡ್ ಹಾಕ್ ಸಮಿತಿಯ ರಚನೆಯ ಬಳಿಕ ಪಕ್ಷದ ವಿವಿಧ ಸಮಿತಿಗಳು ಒಂದೆರಡು ತಿಂಗಳ ಅವಧಿಯೊಳಗೆ ಅಸ್ತಿತ್ವಕ್ಕೆ ಬರಲಿದೆಯೆಂದು ಸ್ಪಷ್ಟಪಡಿಸಿದರು.
ಕೊಡಗು ಜಿಲ್ಲಾ ಜೆಡಿಎಸ್ ಅಧ್ಯಕ್ಷನಾಗಿ ಪಕ್ಷದ ಸಂಘಟನೆಗಾಗಿ ತಾನು ಶ್ರಮಿಸಿದ್ದು, ನೂತನ ಜಿಲ್ಲಾ ಸಮಿತಿಯ ರಚನೆಯ ಸಂದರ್ಭ ತನ್ನ ಅಧ್ಯಕ್ಷ ಸ್ಥಾನವನ್ನು ಬಿಟ್ಟು ಕೊಟ್ಟು ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷದ ಏಳಿಗೆಗಾಗಿ ಶ್ರಮಿಸಲು ಸಿದ್ಧನಿದ್ದೇನೆಂದು ಕೆ.ಎಂ. ಗಣೇಶ್ ಅವರು ಇದೇ ಸಂದರ್ಭ ಸ್ಪಷ್ಟಪಡಿಸಿದರು.
ತೊಂದರೆ ನೀಡಿ ಬೊಕ್ಕಸ ಭರ್ತಿ
ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಮತ್ತು ನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆಯಾಗುತ್ತಲೇ ಇದ್ದು, ಜನಸಾಮಾನ್ಯರಿಗೆ ತೊಂದರೆ ನೀಡಿ ಸರ್ಕಾರದ ಬೊಕ್ಕಸ ತುಂಬಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಗಣೇಶ್ ಆರೋಪಿಸಿದರು.
ವೀರಾಜಪೇಟೆಯಲ್ಲಿ ಪ್ರತಿಭಟನೆ
ಪಕ್ಷದ ವೀರಾಜಪೇಟೆ ತಾಲೂಕು ಅಧ್ಯಕ್ಷ ಪಿ.ಎ. ಮಂಜುನಾಥ್ ಮಾತನಾಡಿ, ಬೆಲೆ ಏರಿಕೆ ಕ್ರಮವನ್ನು ವಿರೋಧಿಸಿ ತಾ. ೧೭ ರಂದು ವೀರಾಜಪೇಟೆ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು. ಬೆಳಿಗ್ಗೆ ೧೧ ಗಂಟೆಗೆ ಗಡಿಯಾರ ಕಂಬದಿAದ ತಹಶೀಲ್ದಾರ್ ಕಚೇರಿಯವರೆಗೆ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಮಾಜಿ ಜಿಲ್ಲಾಧ್ಯಕ್ಷ ಇಸಾಕ್ ಖಾನ್, ಮಾಜಿ ಖಜಾಂಚಿ ಡೆನ್ನಿ ಬರೋಸ್, ಜಿಲ್ಲಾ ಕಾರ್ಯದರ್ಶಿ ಎಂ.ಸಿ. ಸುನಿಲ್ ಹಾಗೂ ಮಹಿಳಾ ಘಟಕದ ಜಿಲ್ಲಾ ಕಾರ್ಯದರ್ಶಿ ಲೀಲಾ ಶೇಷಮ್ಮ ಉಪಸ್ಥಿತರಿದ್ದರು.