ಶಾಂತಳ್ಳಿ ಗ್ರಾ.ಪಂ.

ಸಮೀಪದ ಶಾಂತಳ್ಳಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸವಿತಾ ವಿಜಯ್ ಹಾಗೂ ಉಪಾ ಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಹೆಚ್.ಜೆ. ಬೇಬಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಒಟ್ಟು ಏಳು ಸದಸ್ಯರನ್ನು ಹೊಂದಿರುವ ಶಾಂತಳ್ಳಿ ಗ್ರಾ.ಪಂ.ಗೆ ಸೋಮವಾರ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು. ಆಯ್ಕೆ ಪ್ರಕ್ರಿಯೆಯಲ್ಲಿ ಸದಸ್ಯರುಗಳಾದ ಕೆ.ಪಿ. ಚಂಗಪ್ಪ, ತ್ರಿಶೂಲ್ ಕಾರ್ಯಪ್ಪ, ಯು.ಬಿ. ಜಯಮ್ಮ, ಹೆಚ್.ಎಂ. ರಂಜಿತ, ತೇಜಸ್ವಿನಿ ಭಾಗವಹಿಸಿದ್ದರು.

ಈ ಸಂದರ್ಭ ಕಾಂಗ್ರೆಸ್ ಪ್ರಮುಖರಾದ ಕೆ.ಎಂ. ಲೋಕೇಶ್, ಕೆ.ಕೆ. ಮುತ್ತಣ್ಣ, ಸುಂದರ್, ಬಿ.ಈ. ಜಯೇಂದ್ರ, ಶಾಂತಳ್ಳಿ ಗಿರೀಶ್, ಹೆಚ್.ವಿ. ರಾಜಪ್ಪ, ಗಣಪತಿ, ನಿರಂಜನ್, ಮಧುಕುಮಾರ್, ಸುಬ್ಬಯ್ಯ, ಜೆಡಿಎಸ್ ಪ್ರಮುಖರಾದ ಬಗ್ಗನ ಅನಿಲ್, ಬಿದ್ದಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಚುನಾವಣಾಧಿಕಾರಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಕೆ. ಪಾಂಡು, ಸಹಾಯಕರಾಗಿ ಪಿಡಿಓ ವಿಶ್ವನಾಥ್ ಕಾರ್ಯನಿರ್ವಹಿಸಿದರು.