ನಾಪೋಕ್ಲು, ಫೆ. ೧೬: ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದ ವಿವೇಕಾನಂದ ಸೇವಾ ಸಮಿತಿಯಿಂದ ಗಿರಿಜನರ ಅಭಿವೃದ್ಧಿಗಾಗಿ ದುಡಿದ ಸಮಾಜ ಸೇವಕರಿಗೆ ಕೊಡಲ್ಪಡುವ ೨೦೨೦-೨೧ನೇ ಸಾಲಿನ ವಿವೇಕಾನಂದ ಸೇವಾ ಪ್ರಶಸ್ತಿಗೆ ಭಾಜನರಾಗಿದ್ದ ಕುಡಿಯರ ಮುತ್ತಪ್ಪನವರು ಸೇವಾ ಸಮಿತಿಯ ವತಿಯಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು.

ನಂತರ ಮಾತನಾಡಿದ ಅವರು ತಾವು ೧೯೭೮ ರಿಂದ ಜಿಲ್ಲೆಯ ಗಿರಿಜನರ ಉದ್ಧಾರಕ್ಕಾಗಿ ಅವಿರತ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದು, ವಿವೇಕಾನಂದ ಸೇವಾ ಪ್ರಶಸ್ತಿ ಬಂದಿರುವುದು ಹೆಮ್ಮೆ ಎಂದರು.

ಬಿಳಿಗಿರಿ ರಂಗನ ಬೆಟ್ಟದ ವಿವೇಕಾನಂದ ಸಮಿತಿಯ ಕಟ್ಟಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವೇಕಾನಂದ ಸೇವಾ ಸಮಿತಿಯ ಅಧ್ಯಕ್ಷರಾದ ಜಡೇಗೌಡ, ಸಂಚಾಲಕ ಡಾ. ಸುದರ್ಶನ್, ಮತ್ತು ಸಮಿತಿಯ ಪದಾಧಿಕಾರಿಗಳು ಇದ್ದರು.