ಗೋಣಿಕೊಪ್ಪ ವರದಿ, ಫೆ. ೧೬: ಮಾಯಮುಡಿ ಗ್ರಾಮದ ಕಂಗಳತ್ತ್ನಾಡು ಕಮಟೆ ಮಹಾದೇವರ ವಾರ್ಷಿಕ ಹಬ್ಬ ತಾ. ೨೨ ರಿಂದ ೨೬ರವರೆಗೆ ನಡೆಯಲಿದೆ. ಹಬ್ಬ ನಡೆಯುವ ೫ ದಿನ ಬೆಳಿಗ್ಗೆ ಮಂಗಳಾರತಿ, ಮಧ್ಯಾಹ್ನ ಅನ್ನದಾನ, ಗುಡಿಗಳಿಗೆ ಸಾಮೂಹಿಕ ಅಲಂಕಾರ, ಬೆ. ೫.೩೦ ಮತ್ತು ರಾತ್ರಿ ೭ ಗಂಟೆಗೆ ತೂಚಂಬಲಿ ಪೂಜೆ ನೆರವೇರಲಿದೆ.

ತಾ. ೨೨ ರಂದು ಸಂಜೆ ೭ ಗಂಟೆಗೆ ಕೊಡಿಮರ ನಿಲ್ಲಿಸುವ ಆಚರಣೆ ಮೂಲಕ ಹಬ್ಬಕ್ಕೆ ಚಾಲನೆ ನೀಡಲಾಗುತ್ತದೆ. ತಾ. ೨೩ ರಂದು ಬೆ. ೧೧.೩೦ ಗಂಟೆಗೆ ಗಣಪತಿಗೆ ಪಂಚಕಜ್ಜಾಯ, ಈಶ್ವರನಿಗೆ ಬಿಲ್ವ ಪತ್ರಾರ್ಚನೆ, ತಾ. ೨೪ ರಂದು ಬೆ. ೧೧.೩೦ ಗಂಟೆಗೆ ಈಶ್ವರನಿಗೆ ಕ್ಷೀರಾಭಿಷೇಕ, ತಾ. ೨೫ ರಂದು ಬೆ. ೧೧ ಗಂಟೆಯಿAದ ಮ. ೧೨ ಗಂಟೆವರೆಗೆ ಸುಬ್ರಮಣ್ಯನಿಗೆ ಕ್ಷೀರಾಭಿಷೇಕ, ಈಶ್ವರನಿಗೆ ಅಲಂಕಾರ ಪೂಜೆ, ಸಂಜೆ ೬ ಗಂಟೆಗೆ ನೆರಪು ನಡೆಯಲಿದೆ.

ತಾ. ೨೬ ರಂದು ದೊಡ್ಡ ಹಬ್ಬ ನಡೆಯಲಿದ್ದು, ಮಧ್ಯಾಹ್ನ ೧೨ ಗಂಟೆಗೆ ಮಹಾಪೂಜೆ, ಸಂಜೆ ೬ ಗಂಟೆಗೆ ದೇವರ ದರ್ಶನ, ಅಭ್ಯಂಜನ ಮತ್ತು ದೇವರ ನೃತ್ಯ, ವಸಂತ ಪೂಜೆ, ವಿಷುಮೂರ್ತಿ ಮತ್ತು ಗುಳಿಗನಿಗೆ ಪೂಜೆ ನಡೆಯಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಸಣ್ಣುವಂಡ ಬಿ. ರಮೇಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.