ಸೋಮವಾರಪೇಟೆ, ಫೆ.೧೫: ಇಲ್ಲಿನ ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಲೋಕೋಪ ಯೋಗಿ ಇಲಾಖಾ ರಸ್ತೆಯ ಬದಿಯಲ್ಲಿ ಅನಾಗರಿಕರಂತೆ ವರ್ತಿಸುತ್ತಿರುವ ಮಂದಿ, ರಸ್ತೆ ಬದಿಯಲ್ಲಿಯೇ ಕೊಳೆತ ತ್ಯಾಜ್ಯ, ಕೋಳಿ-ಮೀನಿನ ತ್ಯಾಜ್ಯಗಳನ್ನು ಎಸೆಯುತ್ತಿದ್ದು, ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳೂ ಸೇರಿದಂತೆ ಸಾರ್ವಜನಿಕರು ದುರ್ವಾಸನೆ ಯೊಂದಿಗೆ ಸಂಚರಿಸಬೇಕಾದ ಪರಿಸ್ಥಿತಿ ಸೃಷ್ಟಿಸಿದೆ.

ವಿಶ್ವ ಮಾನವ ಕುವೆಂಪು ವಿದ್ಯಾಸಂಸ್ಥೆಯಿAದ ಕೆಲವೇ ಮೀಟರ್‌ಗಳ ದೂರದಲ್ಲಿ ಇಂತಹ ಅನಾಗರಿಕ ಕ್ರಿಯೆ ನಡೆಯುತ್ತಿದ್ದು, ರಾತ್ರಿಯಾಗುತ್ತಿದ್ದಂತೆ ಈ ಸ್ಥಳದಲ್ಲಿ ತ್ಯಾಜ್ಯಗಳ

(ಮೊದಲ ಪುಟದಿಂದ) ಮೂಟೆಗಳು ಬೀಳುತ್ತಿವೆ. ಗೃಹ ಬಳಕೆಯ ತ್ಯಾಜ್ಯದೊಂದಿಗೆ ಕೋಳಿ,

ಮೀನಿನ ತ್ಯಾಜ್ಯ ಸಂಗ್ರಹಣೆಯಾಗುತ್ತಿದ್ದು, ಇಡೀ ಪ್ರದೇಶ ದುರ್ಗಂಧಮಯವಾಗಿದೆ.

ಈ ರಸ್ತೆಯಲ್ಲಿ ದಿನಂಪ್ರತಿ ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು, ಪಾದಚಾರಿಗಳು, ಬೆಳಿಗ್ಗೆ-ಸಂಜೆ ವಾಕಿಂಗ್, ಜಾಗಿಂಗ್‌ಗೆ ತೆರಳುವ ಮಂದಿ ಸಂಚರಿಸುತ್ತಿದ್ದು, ಈ ಸ್ಥಳದಲ್ಲಿ ಮೂಗು ಮುಚ್ಚಿಕೊಂಡು ತೆರಳಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಸಂಬAಧಿಸಿದ ಚೌಡ್ಲು ಗ್ರಾಮ ಪಂಚಾಯಿತಿಯಿAದ ‘ಈ ಸ್ಥಳದಲ್ಲಿ ತ್ಯಾಜ್ಯ ಸುರಿಯಬಾರದು’ ಎಂದು ಎಚ್ಚರಿಕೆಯ ಫಲಕ ಅಳವಡಿಸಿದ್ದರೂ ಸಹ ಅದಕ್ಕೆ ಕ್ಯಾರೇ ಎನ್ನದ ಮಂದಿ, ಫಲಕದ ಅಡಿಯಲ್ಲಿಯೇ ತ್ಯಾಜ್ಯದ ಮೂಟೆಗಳನ್ನು ಹಾಕುವ ಮೂಲಕ ಅನಾಗರಿಕರಂತೆ ವರ್ತಿಸುತ್ತಿದ್ದಾರೆ.

ಸಾರ್ವಜನಿಕ ರಸ್ತೆಯ ಬದಿಯಲ್ಲಿ ತ್ಯಾಜ್ಯ ಹಾಕುತ್ತಿರುವ ಮಂದಿಯ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ಅಂತಹ ಮಂದಿಗೆ ಭಾರೀ ಪ್ರಮಾಣದ ದಂಡ ವಿಧಿಸಬೇಕು. ಈ ಸ್ಥಳದಲ್ಲಿ ಸಿ.ಸಿ. ಕ್ಯಾಮೆರಾ ಅಳವಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.