ನಾಪೋಕ್ಲು, ಫೆ. ೧೫: ಕುಂಜಿಲ ಪರಂಬು ಬಾಣೆಯಿಂದ ಪಯ್ಯನರಿ ದರ್ಗಾದ ಮೂಲಕ ಕಕ್ಕಬ್ಬೆ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಯನ್ನು ಪುನಾರಾರಂಭಿಸಲು ಗ್ರಾಮಸ್ಥರು ನೀಡಿದ ಗಡುವು ಮುಕ್ತಾಯಗೊಂಡರೂ ರಸ್ತೆ ಕಾಮಗಾರಿ ಆರಂಭಿಸಿಲ್ಲ ಎಂದು ಗ್ರಾಮಸ್ಥರು ಕಕ್ಕಬ್ಬೆ ಪಟ್ಟಣದಲ್ಲಿ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಬೆಳಗ್ಗೆ ೧೦ ಗಂಟೆಗೆ ಆರಂಭಗೊAಡ ರಸ್ತೆ ತಡೆ ಮಧ್ಯಾಹ್ನ ೧೨ ಗಂಟೆಯವರೆಗೂ ನಡೆಯಿತು. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಲೋಕೋಪಯೋಗಿ ಇಲಾಖೆಯ ಅಭಿಯಂತರ ಶಿವಕುಮಾರ್ ಮಾರ್ಚ್ ೫ಕ್ಕೆ ನಡೆಯಲಿರುವ ಪಯ್ಯನರಿ ಉರೂಸ್‌ಗಿಂತ ಮುನ್ನ ರಸ್ತೆ ಕಾಮಗಾರಿ ಮುಗಿಸಿಕೊಡುವದಾಗಿ ಭರವಸೆ ನೀಡಿದ ಕಾರಣ ರಸ್ತೆ ತಡೆ ಮತ್ತು

ಕಕ್ಕಬ್ಬೆಯಲ್ಲಿ ರಸ್ತೆ ತಡೆ - ಅಧಿಕಾರಿಗಳಿಂದ ಪರಿಹಾರ ಭರವಸೆ

(ಮೊದಲ ಪುಟದಿಂದ) ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

ಪ್ರತಿಭಟನೆಯಲ್ಲಿ ಕುಂಜಿಲ-ಕಕ್ಕಬ್ಬೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಲಿಯಂಡ ಸಂಪನ್ ಅಯ್ಯಪ್ಪ, ಸದಸ್ಯರಾದ ಕೆ.ಎ.ರಜಾಕ್, ವೈ.ಕೆ.ಹಂಸ, ಸೌಕತ್ ಅಲಿ, ಕುಡಿಯರ ಮುತ್ತಪ್ಪ, ಅಶ್ರಫ್.ವಿ.ಹೆಚ್, ಅಶ್ರಫ್.ಕೆ.ಎಂ, ಕೆ.ಎ.ಮಜೀದ್, ಕೆ.ಎಂ.ಇಲಿಯಾಸ್, ಅದಪೊಳೆ ಮಹಮ್ಮದ್ ಹಾಜಿ, ಪಯ್ಯಡಿ ಮೂಸ, ಬಾಚಮಂಡ ಲವ ಚಿಣ್ಣಪ್ಪ, ಮಾಜಿ ಉಪಾಧ್ಯಕ್ಷ ವಯಕೋಲ್ ಉಸ್ಮಾನ್, ಕೆ.ಎ.ಇಬ್ರಾಹಿಂ, ಗ್ರಾಮಸ್ಥರು ಇದ್ದರು.