ಕಣಿವೆ, ಫೆ. ೧೧: ಪ್ರಮುಖ ಪ್ರವಾಸಿ ತಾಣ ಹಾರಂಗಿ ಜಲಾಶಯಕ್ಕೆ ಗುಡ್ಡೆಹೊಸೂರು ಮಾರ್ಗವಾಗಿ ತೆರಳುವ ರಸ್ತೆಯ ಅಂಚಿನಲ್ಲಿ ಒಣಗಿನಿಂತ ಬೃಹತ್ ತೇಗದ ಮರವೊಂದಿದ್ದು, ಯಾವುದೇ ಸಂದರ್ಭದಲ್ಲಿ ಗಾಳಿ ಅಥವಾ ಮಳೆಗೆ ರಸ್ತೆಗೆ ಅಡ್ಡಲಾಗಿ ಬೀಳುವ ಅಪಾಯದಲ್ಲಿದೆ.

ಅರಣ್ಯಾಧಿಕಾರಿಗಳು ಕೂಡಲೇ ಈ ಮರವನ್ನು ಕಡಿದು ಮುಂದೊದಗ ಬಹುದಾದ ಅಪಾಯವನ್ನು ತಪ್ಪಿಸಬೇಕಿದೆ.

ಏಕೆಂದರೆ ದಿನಂಪ್ರತಿ ಹಾರಂಗಿ ಜಲಾಶಯ ನೋಡಲು ನೂರಾರು ಪ್ರವಾಸಿಗರು ವಾಹನಗಳಲ್ಲಿ ಇದೇ ಮಾರ್ಗವಾಗಿ ತೆರಳುತ್ತಾರೆ. ಸ್ಥಳೀಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಸಂಚರಿಸುತ್ತಾರೆ. ಅಲ್ಲದೇ ಇದೇ ಮಾರ್ಗದಲ್ಲಿ ಜ್ಞಾನಗಂಗಾ ವಸತಿ ಶಾಲೆಯೂ ಇದ್ದು ಮಕ್ಕಳನ್ನು ಹೊತ್ತ ಶಾಲಾ ಬಸ್‌ಗಳು ಸಂಚರಿಸುವ ಕಾರಣ ಅರಣ್ಯ ಇಲಾಖೆ ಸ್ವಯಂಪ್ರೇರಿತರಾಗಿ ಈ ಒಣಗಿನಿಂತ ಮರವನ್ನು ತೆರವು ಗೊಳಿಸಬೇಕೆಂದು ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಶಶಿಕುಮಾರ್ ಹಾಗೂ ಗುಡ್ಡೆಮನೆ ರವಿ ಒತ್ತಾಯಿಸಿದ್ದಾರೆ.