ನಾಪೋಕ್ಲು, ಫೆ. ೧೩: ಜಿಲ್ಲೆಯ ಮಡಿಕೇರಿ ತಾಲೂಕು ಪೇರೂರು ಗ್ರಾಮದ ಆನೆಡ ಸೋಮಣ್ಣ (೩೨) ಪುತ್ತೂರು ಸಮೀಪದ ಮುರ ರೈಲ್ವೆ ಹಳಿಯ ಬಳಿ ಸಾವನ್ನಪ್ಪಿರುವ ಘಟನೆ ನಡೆದಿದೆ.ಘಟನೆಗೆ ಸಂಬAಧಿಸಿದAತೆ ಮೃತ ವ್ಯಕ್ತಿ ಮೇಲೆ ರೈಲು ಹರಿದಿರುವ ಯಾವದೇ ಗುರುತು ಇಲ್ಲದಿರುವದರಿಂದ ಕೊಲೆ ಶಂಕೆ ವ್ಯಕ್ತವಾಗಿದೆ. ಬಲ್ಲಮಾವಟಿ ಗ್ರಾಮ ಪಂಚಾಯಿತಿಯ ಪೇರೂರು ಗ್ರಾಮದ ನಿವಾಸಿಯಾದ(ಮೊದಲ ಪುಟದಿಂದ) ಸೋಮಣ್ಣ ಪುತ್ತೂರು ಸಮೀಪದ ಮುರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಸಮೀಪದ ಮಂಜಲ್ಪಡ್ಪು ಬಾರ್ ಆಂಡ್ ರೆಸ್ಟೋರೆಂಟ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಪ್ರತಿ ದಿನ ರಾತ್ರಿ ೧೧ ಗಂಟೆಗೆ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ಅವರು ತಾ. ೧೨ ರಂದು ಮನೆಗೆ ಬಾರದ ಹಿನ್ನೆಲೆಯಲ್ಲಿ ಸೋಮಣ್ಣ ಅವರ ಪತ್ನಿ ಭಾಗ್ಯ ಮತ್ತು ಅವರ ಪುತ್ರ ಹುಡುಕಾಡಿದ ಸಂದರ್ಭ ರೈಲ್ವೆ ಹಳಿ ಮೇಲೆ ಸೋಮಣ್ಣ ಅವರ ಮೃತದೇಹ ಪತ್ತೆಯಾಗಿದೆ.

ಈ ಬಗ್ಗೆ ಪುತ್ತೂರು ಪೊಲೀಸರಿಗೆ ಪತ್ನಿ ಭಾಗ್ಯ ದೂರು ನೀಡಿದ್ದು, ಮೃತ ಶರೀರವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲಾಗಿದೆ.

ರಾತ್ರಿ ೧೨ ಗಂಟೆಗೆ ಈ ರೈಲು ಹಳಿಯಲ್ಲಿ ರೈಲು ಸಂಚಾರ ಇಲ್ಲದ ಕಾರಣ ಮತ್ತು ವ್ಯಕ್ತಿಯ ಮೃತದೇಹ ರೈಲು ಹಳಿಯಿಂದ ದೂರದಲ್ಲಿ ಬಿದ್ದಿರುವ ಹಿನ್ನೆಲೆ ಇದು ಆತ್ಮಹತ್ಯೆ ಅಲ್ಲ ಎಂದು ಹೇಳಲಾಗುತ್ತಿದೆ. ಮೃತ ಹಳಿಯಲ್ಲಿ ರೈಲು ಸಂಚಾರ ಇಲ್ಲದ ಕಾರಣ ಮತ್ತು ವ್ಯಕ್ತಿಯ ಮೃತದೇಹ ರೈಲು ಹಳಿಯಿಂದ ದೂರದಲ್ಲಿ ಬಿದ್ದಿರುವ ಹಿನ್ನೆಲೆ ಇದು ಆತ್ಮಹತ್ಯೆ ಅಲ್ಲ ಎಂದು ಹೇಳಲಾಗುತ್ತಿದೆ. ಮೃತ ವ್ಯಕ್ತಿಯ ತಲೆಗೆ ಗಾಯವಾಗಿದ್ದು, ಕೈ ಮತ್ತು ಕಾಲು ಮುರಿತಕ್ಕೊಳಗಾಗಿ ರುವದು ಬೆಳಕಿಗೆ ಬಂದಿದೆ. ಪೊಲೀಸ್ ತನಿಖೆಯಿಂದ ನೈಜಾಂಶ ಹೊರ ಬರಬೇಕಾಗಿದೆ. -ಪಿ.ವಿ. ಪ್ರಭಾಕರ್